ಯಶ್ ರಾಧಿಕಾ ಎಂಗೇಜ್‌ಮೆಂಟ್‌ನಲ್ಲಿ ತಾರೆಗಳ ದಂಡು!

ಕನ್ನಡದ ಸ್ಟಾರ್ ನಟ ನಟಿ ರಾಧಿಕಾಪಂಡಿತ್ ಮತ್ತು ಯಶ್ ಅವರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್‌ವುಡ್ ತಾರೆಯರ ದಂಡೇ ಹರಿದು ಹೋಗಿದೆ.

ಕನ್ನಡದ ಸ್ಟಾರ್ ನಟ ನಟಿ ರಾಧಿಕಾಪಂಡಿತ್ ಮತ್ತು ಯಶ್ ಅವರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್‌ವುಡ್ ತಾರೆಯರ ದಂಡೇ  ಹರಿದು ಹೋಗಿದೆ.

ಹಾಜರಾದವರಲ್ಲಿ , ಅಂಬರೀಷ್, ಸುಮಲತಾ, ರವಿಚಂದ್ರನ್,  ಪುನೀತ್ ರಾಜಕುಮಾರ್ , ಯೋಗರಾಜಭಟ್  ಹಾಗು ಮಾಳವಿಕಾ ಪ್ರಮುಖರು.

ಎಂಗೇಜ್‌ಮೆಂಟ್ ನಡೆದ ಜಾಗವನ್ನು ಬಿಳಿ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಈ ವಿನ್ಯಾಸಗಳನ್ನು ಯೋಜಿಸಿದವರು ಅರುಣ್ ಸಾಗರ್.

ಇನ್ನು ವಧು ವರರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ವಸ್ತ್ರವಿನ್ಯಾಸಗಾರ್ತಿ ಸಾನಿಯಾ ಇಮ್ರಾನ್ ಅವರು ಇವರಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

ರಾಧಿಕಾ ಪಂಡಿತ್ ವಜ್ರದ ಓಲೆ ಮತ್ತು ವಿಶಿಷ್ಟ ವಿನ್ಯಾಸದ ವಜ್ರದ ಮೂಗುತಿಯನ್ನು ಬಳಸಿದ್ದು ನಿಶ್ಚಿತಾರ್ಥದಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿತ್ತು.

image

ಇನ್ನು ಬ್ರೆಸ್ಲೆಟ್ ಕೂಡಾ ಡೈಮೆಂಡ್‌ನಿಂದ ಮಾಡಲ್ಪಟ್ಟಿದೆ. ರಾಧಿಕಾ ಪಂಡಿತ್ ಅವರು ಧರಿಸಿದ್ದ ಡೈಮೆಂಡ್ ಕಿವಿ ಓಲೆಗಳು ಮುಂಬೈನ ಖ್ಯಾತ ಆಭರಣ ತಯಾರಕರಾದ ಎ ಕೆ ಮೋತಿವಾಲ ಅವರು ಮಾಡಿದ್ದು, ರಾಧಿಕಾ ಧರಿಸಿದ್ದ ಕಡು ನೀಲಿ ಸ್ಕರ್ಟ್ ತಯಾರಾಗಿದ್ದು ಕೋಲ್ಕತ್ತಾದ ಸಾಭ್ಯಾ ಸಾಚಿ ಬೈಡಲ್ ಸ್ಟೂಡಿಯೋದಲ್ಲಿ.

ಸ್ಯಾಂಡಲ್‌ವುಡ್‌ನ ಸದ್ಯದ ಹಾಟ್ ಸ್ಟಾರ್‌ಗಳಾದ ಇವರಬ್ಬರ ನಿಶ್ಚಿತಾರ್ಥ ಬಟ್ಟೆ ಬರೆ ಡಿಸೈನ್ ಮಾಡಿದ್ದು  ಬೇರೆ ಯಾರು ಅಲ್ಲ,  ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹೆಂಡತಿ ಎನ್ನುವುದು ವಿಶೇಷ. ಯಶ್ ಕೂಡಾ ನೀಲಿ ಬಣ್ಣ ಕುರ್ತಾ ಮತ್ತು ಜಾಕೇಟ್ ಧರಿಸಿದ್ದರು. ಯಶ್ ಅವರ ಪಾದ ರಕ್ಷೆಗಳನ್ನು ಸಹ ವಿಶೇಷವಾಗಿ ಡಿಸೈನ್ ಮಾಡಲಾಗಿತ್ತು.

-Ad-

Leave Your Comments