ಮತ್ತೆ ಒಂದಾಗ್ತಿದ್ದಾರಾ ‘ಪಿಕೆ’ ಜೋಡಿ!

  ಇಂಡಿಯನ್ ಸಿನಿ ಹಿಸ್ಟರಿಯಲ್ಲೇ ಬಾಕ್ಸಾಫೀಸ್’ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ‘ಪಿಕೆ’ ಚಿತ್ರದ ನಾಯಕ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತೊಮ್ಮೆ ಜೊತೆಯಾಗಿ ಸಿನೆಮಾ ಮಾಡಲಿದ್ದಾರಾ…?

  ಸಿನಿಪ್ರಿಯರ ಇಂತಹದೊಂದು ಕ್ಯೂರಿಯಸಿಟಿ ಪ್ರಶ್ನೆಗೆ ಬಾಲಿವುಡ್ ಮೂಲಗಳು ಹೌದೆನ್ನುತ್ತಿದೆ.

  ಪಿಕೆಯಂತಹ ಭರ್ಜರಿ ಹಿಟ್ ಚಿತ್ರ ನೀಡಿ ವಿವಾದ-ವಿತಂಡವಾದಗಳ ಹುಟ್ಟಿಗೆ ಕಾರಣರಾಗಿದ್ದ ಬಿಟೌನ್’ನ ಸಕ್ಸಸ್ ಫುಲ್ ನಿರ್ದೇಶಕ ರಾಜ್ ಕುಮಾರ್ ಹಿರಾನಿಯ ಮುಂದಿನ ಪ್ರಾಜೆಕ್ಟ್’ನಲ್ಲಿ ಬಾಲಿವುಡ್ ಮಿಸ್ಟರ್ ಫರ್ಫೆಕ್ಸನಿಷ್ಟ್ ಅಮೀರ್ ಖಾನ್ ಬಣ್ಣ ಹಚ್ಚಲಿದ್ದಾರೆ.

  IMG_20160824_122035

  ನಿರ್ದೇಶಕ ಹಿರಾನಿ ಈಗಾಗಲೇ ಗೆಳೆಯ ಸಂಜಯ್ ದತ್’ರ ಜೀವನಕಥಾ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತಿದೆ.

  ‘ದತ್’ ಶೀರ್ಷಿಕೆಯಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಮುನ್ನಾಭಾಯ್’ಯ ರೋಲನ್ನು ಬರ್ಫಿ ನಟ ರಣಬೀರ್ ಕಪೂರ್ ಮಾಡಲಿದ್ದಾರೆ.

  ಇದೇ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿಸುವಂತೆ ಅಮೀರ್ ಖಾನ್’ರನ್ನು ಕೇಳಿಕೊಳ್ಳಲಾಗಿದೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿದೆ.

  ಹಿರಾನಿಯ ಈ ಹೊಸ ಚಿತ್ರದಲ್ಲಿ ನಾಯಕನಿಗೆ ಸರಿಸಮಾನವಾಗಿ ಅಮೀರ್ ಮಾಡಲಿರುವ ಪಾತ್ರ ಯಾವುದೆಂದು ನೋಡಿದ್ರೆ ಸಿಗುವ ಉತ್ತರ ಸೀನಿಯರ್ ದತ್.

  rk-sanjay

  ಹೌದು ಅಮೀರ್ ಖಾನ್ ಈ ಚಿತ್ರದಲ್ಲಿ ಸಂಜಯ್ ದತ್ ತಂದೆ ನಟ/ರಾಜಕಾರಣಿ ಸುನಿಲ್ ದತ್’ರ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎನ್ನಲಾಗುತ್ತಿದೆ.

  ಈ ಹಿಂದೆ ಪಿಕೆ ಚಿತ್ರದ ಮೂಲಕ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಅಮೀರ್ ಖಾನ್ ಮತ್ತು ಸಂಜಯ್ ದತ್ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು.

  ಹೀಗಾಗಿ ಅಮೀರ್ ಖಾನ್ ‘ದತ್’ ಚಿತ್ರದಲ್ಲಿ ರಣಬೀರ್ ಕಪೂರ್ ತಂದೆಯ ಪಾತ್ರದಲ್ಲಿ ನಟಿಸಲು ಒಲ್ಲೆ ಎನ್ನಲಾರ ಎಂಬ ಮಾತು ಕೂಡ ಹಿರಾನಿಯ ನಿಕಟವರ್ತಿಗಳಿಂದ ಕೇಳಿ ಬರುತ್ತಿದೆ.

  ತಮ್ಮ ಮುಂದಿನ ಬಹು ನಿರೀಕ್ಷಾ ಚಿತ್ರ ‘ದಂಗಲ್’ನಲ್ಲಿ ಇಬ್ಬರು ಪುತ್ರಿಯರ ಕುಸ್ತಿಪಟು ಅಪ್ಪನಾಗಿ ಕಾಣಿಸಲಿರುವ ಅಮೀರ್ ಖಾನ್ ‘ತ್ರಿ ಈಡಿಯಟ್ಸ್’ ‘ಪಿಕೆ’ಯಂತಹ ಬಂಪರ್ ಹಿಟ್ ಚಿತ್ರ ನೀಡಿದ ರಾಜ್ ಕುಮಾರ್ ಹಿರಾನಿ ಚಿತ್ರದಲ್ಲಿ ಪೋಷಕನ ಪಾತ್ರದಲ್ಲಿ ಕಾಣಿಸಿದ್ರೆ ಅಚ್ಚರಿಪಡಬೇಕಾಗಿಲ್ಲ.

  ★ಕಪ್ಪು ಮೂಗುತ್ತಿ

  -Ad-

  Leave Your Comments