ಸಂಜಯ್ ದತ್ ಮತ್ತೆ ಜೈಲಿಗೆ..?

ಬಾಲಿವುಡ್ ನಟ ಸಂಜಯ್ ದತ್ ಅನ್ನೋದಕ್ಕಿಂತ ಅಂಡರ್‍ವಲ್ರ್ಡ್ ಲಿಂಕ್ ಆರೋಪ ಹೊತ್ತಿದ್ದ ಸಿನಿಮಾ ನಟ.. 1993ರ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ 5 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನಟ ಅಂದ್ರೆ ಥಟ್ಟಂತ ನೆನಪಿಗೆ ಬರ್ತಾರೆ.. ಇದೀಗ ಮತ್ತೆ ಅದೇ ಸಂಜಯ್ ದತ್‍ಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ..

ಸಂಜಯ್ ದತ್ ಜಾನ್ ಕೀ ಭಾಜಿ ಅನ್ನೋ ಹಿಂದಿ ಸಿನಿಮಾದಲ್ಲಿ ಅಭಿನಯಿಸುವಾಗ ನನ್ನ ಬಳಿ ಹಣ ಪಡೆದು ವಂಚಿಸಿದ್ದಾರೆ.. ಅವರಿಂದ ನನಗೆ 1 ಕೋಟಿ 53 ಲಕ್ಷ ರೂಪಾಯಿ ನಷ್ಟವಾಗಿದೆ ಅಂತಾ ಕೋರ್ಟ್ ಮೆಟ್ಟಿಲೇರಿದ್ರು.. ವಿಚಾರಣೆ ನಡೆಸಿದ ಕೋರ್ಟ್ ನಷ್ಟವಾದ ಹಣ ತುಂಬಿಕೊಡಲು ಸಂಜಯ್ ದತ್ ಅವರ ಆಸ್ತಿ ಜಪ್ತಿಗೆ ಸೂಚನೆ ನೀಡಿತ್ತು..
ಇದಾದ ಬಳಿಕ ಕೇಸ್ ವಾಪಸ್ ಪಡೆಯುವಂತೆ 6 ಬಾರಿ ಭೂಗತ ಪಾತಕಿಗಳು ಶಕೀಲ್ ನೂರಾನಿ ಅವರಿಗೆ ದೂರವಾಣಿ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ರಂತೆ.. ಈ ಬಗ್ಗೆ ಚಿತ್ರ ನಿರ್ಮಾಪಕ ಶಕೀಲ್ ನೂರಾನಿ ಜನವರಿ 27, 2011ರಲ್ಲೇ ದೂರು ನೀಡಿದ್ರು.. ಕೋರ್ಟ್ ಹಲವು ಬಾರಿ ಕೋರ್ಟ್ ವಿಚಾರಣೆಗೆ ಗೈರು ಹಾಜರಾದ ಕಾರಣಕ್ಕೆ ಕೋರ್ಟ್ ಅರೆಸ್ಟ್ ವಾರೆಂಟ್ ಕೊಡಲಾಗಿದೆ..

ವಿವಾದಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟ ಸಂಜಯ್ ದತ್‍ಗೆ ಕೋರ್ಟ್ ಜಾಮೀನು ರಹಿತ ವಾರೆಂಟ್ ಕೊಟ್ಟಿದ್ದರೂ ಅರೆಸ್ಟ್ ಮಾಡುವ ಸಾಧ್ಯತೆ ಕಡಿಮೆಯಿದ್ದು, ಭಾನುವಾರ ಕಳೆದು ಸೋಮವಾರ ಕೋರ್ಟ್ ಮುಂದೆ ಹಾಜರಾಗಿ ಕ್ಷಮಾಪಣೆ ಕೇಳಿಕೊಂಡ್ರೆ ಕೋರ್ಟ್ ಮಾನ್ಯ ಮಾಡುವ ಸಾಧ್ಯತೆಯಿದೆ.. ಇಷ್ಟೆಲ್ಲಾ ಸಂಕಷ್ಟಕ್ಕೆ ಒಳಗಾಗಿರುವ ಸಂಜಯ್ ದತ್ ಇನ್ನೂ ಅಂಡರ್‍ವಲ್ರ್ಡ್ ಜೊತೆ ಸಂಪರ್ಕ ಸಾಧಿಸಿದ್ದಾರಾ ಅನ್ನೋ ಅನುಮಾನ ಕೂಡ ಕಾಡ್ತಿದೆ..

ಜೋಮ, ಮಂಡ್ಯ

 

-Ad-

Leave Your Comments