ಇಂದಿನಿಂದ ಕಲರ್ಸ್ ನಲ್ಲಿ ರಾತ್ರಿ 9ಕ್ಕೆ “ಸಂಜು ಮತ್ತು ನಾನು”

ವಾರಾಂತ್ಯದ 24 ಎಪಿಸೋಡ್‍ಗಳ ಕತೆ

ಬಿಗ್ ಬಾಸ್ ಮನೆಯಲ್ಲಿ ಹುಟ್ಟಿದ ತ್ರೀಕೋನ ಪ್ರೇಮಕತೆಗೆಧಾರಾವಾಹಿ ರೂಪ
ಟಿವಿಯಲ್ಲಿ ಹೊಸತನ ಬೇಕು. ಧಾರಾವಾಹಿಗಳು ಮುಗಿಯುವುದೇ ಇಲ್ಲ. ರಿಯಾಲಿಟಿ ಶೋಗಳೆಂದರೆ ಅದೇ ಡ್ಯಾನ್ಸ್, ಅದೇ ಹಾಡು ಎನ್ನುವವರಿಗೊಂದು ವಿಶೇಷ ಸುದ್ದಿ ಇಲ್ಲಿದೆ. ಕನ್ನಡ ಟೆಲಿವಿಷನ್ ಮಟ್ಟಿಗೆ ಹೊಸ ಪ್ರಯೋಗವೊಂದನ್ನು ಮಾಡಲು ಕನ್ನಡದ ಮುಂಚೂಣಿಯ ಮಜರಂಜನಾ ವಾಹಿನಿ ಕಲರ್ಸ್‍ ಕನ್ನಡ ರೆಡಿಯಾಗಿದೆ. ಅದುವೇ “ಸಂಜು ಮತ್ತು ನಾನು” ಎಂಬ ಇಪ್ಪತ್ನಾಲ್ಕು ಎಪಿಸೋಡ್‍ಗಳ ವಾರಾಂತ್ಯದ ಕತೆ.

ಇದೊಂದು ಧಾರಾವಾಹಿಯೇ ಎಂದು ನೀವು ಕೇಳಿದರೆ ಅದಕ್ಕೆಉತ್ತರ “ಹೌದು” ಎಂದಾಗಿರುತ್ತದೆ. ಆದರೆ ಇದು ಆರಂಭವಾಗುವ ಮೊದಲೇ ಯಾವಾಗ ಮುಗಿಯುತ್ತದೆ ಎಂದು ಗೊತ್ತಿರುವ ಧಾರಾವಾಹಿ. ಮೇ 27ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕತೆ ಪ್ರಸಾರವಾಗಲಿದೆ. ಮೊದಲೇ ಹೇಳಿರುವಂತೆ ಒಟ್ಟು 24 ಎಪಿಸೋಡ್‍ಗಳು ಮಾತ್ರ.

ಕನ್ನಡ ಕಿರುತೆರೆಗೆ ಪ್ರಪ್ರಥಮ ನಿಗದಿತ ಕಂತುಗಳ ಕಥಾ ಸರಣಿ – ಸಂಜು ಮತ್ತು ನಾನು

ವಾರಾಂತ್ಯಕ್ಕೆ ಸಾಮಾನ್ಯವಾಗಿ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುವುದು ಕನ್ನಡ ಟೆಲಿವಿಷನ್‍ನಲ್ಲಿ ವಾಡಿಕೆ. ಈ ವಾಡಿಕೆಯನ್ನು ಮುರಿಯಲಿದೆ ಕಲರ್ಸ್‍ಕನ್ನಡ. ಹಾಗೆ ನೋಡಿದರೆ ಈ ಧಾರಾವಾಹಿ ಒಂಥರಾ ರಿಯಾಲಿಟಿಯ ಟಚ್‍ ಇರುವ ಶೋ. ಯಾಕೆಂದರೆ ಈ ಬಾರಿಯ “ಬಿಗ್‍ಬಾಸ್” ಎಂಬ ಬೃಹತ್‍ ರಿಯಾಲಿಟಿ ಶೋದಲ್ಲಿ ಭಾಗವಹಿಸಿರುವ ಸಂಜನಾ, ಭುವನ್ ಮತ್ತು ಪ್ರಥಮ್ ಮಧ್ಯೆ ಬಿಗ್‍ಬಾಸ್ ಮನೆಯಲ್ಲಿ ನಡೆದಿರುವ ತ್ರಿಕೋನ ಪ್ರೇಮಕತೆಯ ಮುಂದುವರಿದ ಭಾಗವಾಗಿ “ಸಂಜು ಮತ್ತು ನಾನು” ಮೂಡಿಬರಲಿದೆ. ಈ ಶೀರ್ಷಿಕೆಯಲ್ಲಿರುವ ಸಂಜು ಯಾರು ಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ “ನಾನು” ಯಾರು ಎಂಬುದಕ್ಕೆಉತ್ತರ ಈ ಹೊಸಥರದ ಕತೆಯಲ್ಲಿ ವೀಕ್ಷಕರಿಗೆ ಸಿಗಲಿದೆ.

ಬಿಗ್‍ಬಾಸ್‍ ಕಾರ್ಯಕ್ರಮ ನಡೆಯುತ್ತಿರುವಾಗ ಸಂಜನಾ, ಭುವನ್ ಮತ್ತು ಪ್ರಥಮ್ ನಡುವಣ ಲವ್ ಸ್ಟೋರಿ ಬಹಳ ಸುದ್ದಿ ಮಾಡಿತ್ತು. “ಸಂಜು ಮತ್ತು ನಾನು” ಪ್ರೊಮೋಗಳು ಹೊರಬಿದ್ದಾಗ ವೀಕ್ಷಕರು ಅದಕ್ಕೆ ನೀಡಿರುವ ಪ್ರತಿಕ್ರಿಯೆ ಈ ತ್ರಿಕೋನ ಪ್ರೇಮಕತೆಯ ಬಗೆಗೆ ಇನ್ನೂಇರುವ ಕುತೂಹಲಕ್ಕೆ ಸಾಕ್ಷಿಯಾದಂತಿದೆ.

ಪ್ರಥಮ್ ಪ್ರಕಾರ ಪ್ರೀತಿ ಅಂದ್ರೆ ..

ಪ್ರಥಮ್‍ ದೃಷ್ಟಿಯಲ್ಲಿ ಪ್ರೀತಿಎಂದರೆ ನ್ಯಾಚುರಲ್, ಯಾರಿಗೆ ಆಗಲಿ ಯಾವ ಟೈಮ್‍ನಲ್ಲಿಆದ್ರು ಆಗುತ್ತೆ. ಭುವನ್ ಪ್ರಕಾರ ಕ್ಷಮೆ ಮತ್ತು ಸಂಜನಾ ಅಭಿಪ್ರಾಯದಂತೆ ಅದು ಹೃದಯಕ್ಕೆ ಸಂಬಂಧಪಟ್ಟ ವಿಷಯ. ಈ ಲವ್ ಸ್ಟೋರಿಯಲ್ಲಿ ಸಂಜನಾ ಮನಸ್ಸು ಗೆಲ್ಲುವವರು ಯಾರು? ರಿಯಾಲಿಟಿ ಶೋನಲ್ಲಿಕಂಡ ಮುಖಗಳು ಧಾರಾವಾಹಿಗಳಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬೆಲ್ಲಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಧಾರಾವಾಹಿಯನ್ನು ನೋಡಬೇಕು.

ನಮ್ಮ ಪ್ರಕಾರ ಸಂಜು ಮತ್ತು ನಾನು …

ವಯಾಕಾಮ್18, ರೀಜನಲ್‍ ಎಂಟರಟೇನ್‍ಮೆಂಟ್ ಹೆಡ್, ರವೀಶ್‍ಕುಮಾರ ಹೇಳುವಂತೆ, “ಕನ್ನಡ ವೀಕ್ಷಕರಿಗೆ ಮನೋರಂಜನೆ ನೀಡುವಲ್ಲಿ ಕಲರ್ಸ್‍ಕನ್ನಡ ವಾಹಿನಿಯು ಸದಾ ಮುಂಚೂಣಿಯಲ್ಲಿದೆ. ಪ್ರಪಂಚದಾದ್ಯಂತ ಈಗಾಗಲೇ ಜನಪ್ರಿಯವಾಗಿರುವ ನಿಗದಿತ ಕಂತುಗಳ ಕಥಾಸರಣಿಯನ್ನು, ಸಂಜು ಮತ್ತು ನಾನು ಎಂಬ ನೈಜಕತೆಯ ಮೂಲಕ ಕನ್ನಡ ವೀಕ್ಷಕರಿಗೆ ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಇದುಒಂದು ಬಗೆಯ ಕತೆ ಆವಿಷ್ಕಾರ. ಮೊಟ್ಟಮೊದಲ ಬಾರಿಗೆ ಬಿಗ್‍ಬಾಸ್ ಮನೆಯೊಳಗೆ ಹುಟ್ಟಿದ ತ್ರಿಕೋನ ಪ್ರೇಮಕತೆಯು ನಿರ್ಣಾಯಕರೂಪ ಪಡೆದು ಈಗ ಧಾರಾವಾಹಿಯಾಗಿ ಮೂಡಿ ಬರಲಿದೆ. ಈ ರೀತಿ ನವನವೀನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವುದೇ ನಮ್ಮಉದ್ದೇಶ. ಇದರ ಮೂಲಕ ಟಿ.ವಿ ನೋಡುವ ವೀಕ್ಷಕನಿಗೆ ಒಂದು ಅತ್ಯುತ್ತಮ ಅನುಭವ ದೊರೆತಂತಾಗುತ್ತದೆ.”

ಕಲರ್ಸ್‍ಕನ್ನಡ ಹಾಗೂ ಸೂಪರ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರಗುಂಡ್ಕಲ್‍ ಅಭಿಪ್ರಾಯದಂತೆ, “ಹೊಸ ಪ್ರಯೋಗ ಮಾಡುವಾಗ ಏನೋ ಒಂಥರಾ ಖುಷಿ ಇರುತ್ತದೆ. ವೀಕ್ಷಕರಿಗೆ ಹೊಸತನ್ನು ನೀಡಿದ ಖುಷಿ ಒಂದೆಡೆಯಾದರೆ ಈವರೆಗೆ ಮಾಡದ ಪ್ರಯೋಗಕ್ಕೆ ಕೈ ಹಾಕುವ ಖುಷಿ ಇನ್ನೊಂದೆಡೆ. ಕನ್ನಡ ವಿಶ್ವಾದ್ಯಂತ ಹೆಸರಾಗುತ್ತಿರುವ ನಿಗದಿತ ಕಥಾ ಸರಣಿಯನ್ನುಕನ್ನಡ ವೀಕ್ಷಕರಿಗೂ ನೀಡುವ ಉದ್ದೇಶವಿತ್ತು. ಈ ಹೊಸ ಪ್ರಯೋಗವನ್ನು ಬಿಗ್‍ಬಾಸ್ ಮನೆಯಲ್ಲಿಯೇ ಸೃಷ್ಟಿಯಾದ, ವೀಕ್ಷಕರಲ್ಲಿ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿದ್ದ ಸಂಜನಾ, ಭುವನ್ ಮತ್ತು ಪ್ರಥಮ ನಡುವಿನ ತ್ರೀಕೋನ ಪ್ರೇಮಕತೆಯು ನಿರ್ಣಾಯಕ ಹಂತಕ್ಕೆ ತೆರೆದುಕೊಳ್ಳುವ ವಿಶಿಷ್ಟ, ವಿಭಿನ್ನ ಮತ್ತು ನವೀನ ಕಥಾ ಸರಣಿ ಸಂಜು ಮತ್ತು ನಾನು. ಈ ಹೊಸ ಆವಿಷ್ಕಾರವನ್ನು ವೀಕ್ಷಕರು ಸ್ವೀಕರಿಸುತ್ತಾರೆ ಎಂದು ನಂಬಿದ್ದೇನೆ.”

-Ad-

Leave Your Comments