“ರಾಜಕುಮಾರ” ಸೂತ್ರದಾರನಿಗೆ ಕೂಡಿಬಂದ ಕಂಕಣ..

 ಮಿಸ್ಟರ್ ಮಿಸೆಸ್ ರಾಮಾಚಾರಿಗೆ ಆಕ್ಷನ್ ಕಟ್ ಹೇಳಿ ಸೂಪರ್ ಡೂಪರ್ ಸಿನಿಮಾ ತೆಗೆದ  ಯುವ ನಿರ್ದೇಶಕ ಸಂತೋಷ್ ಆನಂದ್ ರಾಮ್ . ರಾಜಕುಮಾರ ನಂಥ ಸಕ್ಕತ್ ಸಕ್ಸಸ್ ಫುಲ್ ಸಿನಿಮಾ ಕೊಟ್ಟ  ಸಂತೋಷ್ ಆನಂದರಾಮ್ ಈಗ ಮದುವೆಯ ಹೊಸ್ತಿಲಲ್ಲಿ ನಿಂತಿದ್ದಾರೆ .  ಬಳ್ಳಾರಿಯಲ್ಲಿ ತಮ್ಮ ವಿವಾಹದ ಮುನ್ಸೂಚನೆಯಾಗಿ  ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.
ರಾಜಕುಮಾರನಿಗೆ ರಾಜಕುಮಾರನ ಸಾಥ್..
ಯಂಗ್ ಡೈರೆಕ್ಟರ್ ಸಂತೋಷ್ ಆನಂದರಾಮ್ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಗೆಲುವಿನ ಬಳಿಕ ಕೈ ಹಾಕಿದ್ದು ರಾಜಕುಮಾರನ ಬುಟ್ಟಿಗೆ. ಆ ಬುಟ್ಟಿಯಲ್ಲೂ ಸಂತೋಷ್ ಗೆ ಕೈತುಂಬಾ ಸಂಪಾದನೆ ಆಯ್ತು. ಹೀಗಾಗಿ ರಾಜಕುಮಾರ ಚಿತ್ರದ ಹೀರೋ ಪುನೀತ್ ಕೂಡ ಎಂಗೇಜ್ ಮೆಂಟ್ ಗೆ ಆಗಮಿಸಿ ಶುಭ ಕೋರಿದ್ರು. ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕೂಡ ಸಂತೋಷ್ ಆನಂದರಾಮ್ ಗೆ ಶುಭಕೋರಿದ್ದಾರೆ .. ಈ ವೇಳೆ ಸ್ಟಾರ್ ನಟರು ಹಾಗು ಸ್ಟಾರ್ ನಟಿಯನ್ನು ನೋಡಲು ಗಣಿನಾಡ ಅಭಿಮಾನಿಗಳು ಮುಗಿಬಿದ್ರು.
ಹಿಟ್ ಡೈರೆಕ್ಟರ್ ಸಂತೋಷ್ ಹೋಟೆಲ್ ಉದ್ಯಮಿ ಶ್ರೀನಿವಾಸ್ ಮಗಳು ಸುರಭಿ ಜೊತೆ ಉಂಗುರ ಬದಲಾಯಿಸಿಕೊಂಡ್ರು..ಬಳ್ಳಾರಿಯ ಅಲ್ಲಂ ಭವನದಲ್ಲಿ ಜರುಗಿದ ಎಂಗೇಜ್ ಮೆಂಟ್ ಕಾರ್ಯದಲ್ಲಿ ನಸುಗೆಂಪು ಕಾಫಿ ಕಲರ್ ಓಪನ್ ಸೂಟ್ ನಲ್ಲಿ ನಿರ್ದೇಶಕ ಸಂತೋಷ್ ಮಿಂಚಿದ್ರೆ, ಕೇಸರಿ ಬಣ್ಣದ ಸೀರೆ ತೊಟ್ಟು ಸುರಭಿ ಮಿಂಚಿದ್ರು. ಮುಂದಿನ ವರ್ಷ ಫೆಬ್ರವರಿ 21ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments