ಕನ್ನಡ ಹೋರಾಟಗಾರರೇ ಎಲ್ಲಿದ್ದೀರಿ ?? “ರಾಜಕುಮಾರ” ,”ರಾಗ” ಉಳಿಸಿ

ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬರೋದೆ ಅಪರೂಪ, ಅಂತದ್ರಲ್ಲಿ ಕನ್ನಡ ಸಿನಿ ಪ್ರೇಕ್ಷಕ ಮೆಚ್ಷಿದ ರಾಗ ಸಿನಿಮಾ ಎತ್ತಂಗಡಿ ಮಾಡಲಾಗ್ತಿದೆ.. ನಾಳೆಯಿಂದ ಬಾಹುಬಲಿ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ರಾಗ ಸಿನಿಮಾವನ್ನು ಬಲಿ ಪಡೆದುಕೊಳ್ಳಲಾಗ್ತಿದೆ.. ಅಷ್ಟೇ ಅಲ್ಲ ಪುನೀತ್ ಅಭಿನಯದ “ರಾಜಕುಮಾರ” ಚಿತ್ರ ಪ್ರದರ್ಶನಕ್ಕೂ ಸಂಚಕಾರ ಬಂದಿದೆ. ದಿನಕ್ಕೆ ಐದು ಲಕ್ಷ ಕಲೆಕ್ಷನ್ ಇದ್ದ ಎರಡು ಥೇಟರ್ಗಳಲ್ಲೇ ಬಾಹುಬಲಿಗೆ ಜಾಗ ಬಿಡೋದಿಕ್ಕೆ “ರಾಜಕುಮಾರ” ನನ್ನ ತೆಗೆದು ಬಿಸಾಕಿದ್ರು. ಒಂದಷ್ಟು ಅಭಿಮಾನಿಗಳು ,ಸಂಘಟನೆಗಳು ವಾಣಿಜ್ಯ ಮಂಡಳಿಯಲ್ಲಿ ಪಟ್ಟು ಹಿಡಿದ ಮೇಲೆ ಚಿತ್ರಕ್ಕೆ ಒಂದಷ್ಟು ಕಾಲ ಮತ್ತೆ ಜಾಗ ಸಿಕ್ಕಿದೆ. ಸಮಯ ಕಾದು ಮತ್ತೆ ಕಿತ್ತು ಬಿಸಾಕಿದ್ರೆ ನಾವ್ಯಾರು ಆಶ್ಚರ್ಯ ಪಡಬೇಕಿಲ್ಲ.
ರಾಗ ಚಿತ್ರದಲ್ಲಿ ಭಾವನೆಗಳನ್ನು ಬೆಸೆದಿರುವ ನಟ ನಿರ್ಮಾಪಕ ಮಿತ್ರ, ಒಂದು ಅದ್ಬುತ ಸಿನಿಮಾ ನೀಡಿದ್ದಾರೆ. ಈ ಸಿನಿಮಾ ನೋಡಿದ ನೀವು ಕೂಡ ಶಹಬ್ಬಾಸ್ ಗಿರಿ ಕೊಟ್ಟಿದ್ದೀರಿ..  ಆದ್ರೀಗ ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿರುವ ವೇಳೆಯಲ್ಲೇ ಎತ್ತಂಗಡಿ ಭಾಗ್ಯ ಕಲ್ಪಿಸಲಾಗಿದೆ..
ಕನ್ನಡ ಪರ ಸಂಘಟನೆಗಳು ಎಲ್ಲಿವೆ..?
ಕರ್ನಾಟಕದಲ್ಲಿ ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳು ತುಂಬಾ ಜನ ಇದ್ದಾರೆ. ಅದರಲ್ಲೂ ಇದೇ ಬಾಹುಬಲಿ ಆಕ್ಟರ್ ಸತ್ಯರಾಜ್ ಕನ್ನಡಿಗರ ವಿರುದ್ಧ ಕೀಳಾಗಿ ಮಾತನಾಡಿದ್ದಾರೆ ಅಂತ ಒಂಭತ್ತು ವರ್ಷಗಳ ಹಿಂದಿನ ಮಾತನ್ನು ಬಗೆದು ತಂದ್ರು. ಕೊನೆಗೆ ಅದೇನಾಯ್ತೋ ಏನೋ.. ವಿಷಾದವನ್ನೇ ಕ್ಷಮಾಪಣೆ ಅಂತ ಅರ್ಥೈಸಿ ಸಿನಿಮಾ ಅದ್ಬುತವಾಗಿದೆ, ನಾವೆಲ್ಲರೂ ನೋಡೋಣ ಅಂತ ಹೇಳಿಕೆ ಕೊಟ್ಟುಬಿಟ್ರು. ಇದೀಗ ಕನ್ನಡದ ಸಿನಿಮಾ ಒಂದನ್ನು ಅದೇ ಬಾಹುಬಲಿ ಸಿನಿಮಾಗಾಗಿ ಎತ್ತಂಗಡಿ ಮಾಡಲಾಗ್ತಿದೆ.. ಈಗ ಹೋರಾಟ ಮಾಡ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ.
ನಿಮ್ಮ ಜವಾಬ್ದಾರಿ ಈಗ ಹೆಚ್ಚಿದೆ..!
ನೀವು ಬಾಹುಬಲಿ ಸಿನಿಮಾ ವಿರುದ್ಧದ ಹೋರಾಟದ ಬಳಿಕ ಕನ್ನಡ ಪರ ಸಂಘಟನೆಯವರು ಹಣ ಪಡೆದು ಹೋರಾಟ ಕೈಬಿಟ್ರು ಅನ್ನೋ ಮಾತುಗಳು ಕೇಳಿಬಂದಿದ್ವು. ಇದೀಗ ನಿಮಗೆ ಉತ್ತಮ ಅವಕಾಶ ಬಂದಿದ್ದು, ರಾಗ ಸಿನಿ ತಂಡ ಕೇಳುತ್ತಿರುವ 5 ಪ್ರದರ್ಶನವನ್ನಾದರೂ ನಿಮ್ಮ ಹೋರಾಟದ ಮೂಲಕ ಕೊಡಿಸಿ. ನೀವು ಕನ್ನಡದ ವಿಚಾರದಲ್ಲಿ ಯಾವುದೇ ಆಮೀಷಕ್ಕೆ ಒಳಗಾಗುವುದಿಲ್ಲ ಅನ್ನೋದನ್ನು ಸಾಬೀತು ಮಾಡಿ ಅನ್ನೋದಷ್ಟೆ ನಮ್ಮ ಕಳಕಳಿ..
ಸರ್ವಸಮರ್ಥ, ನಾಗಮಂಗಲ
-Ad-

Leave Your Comments