ಸತ್ತಂತಿಹರನು ಬಡಿದೆಚ್ಚರಿಸು !! ಕನ್ನಡ ಚಿತ್ರಗಳನ್ನು ಉಳಿಸು .

ಇಂದಿನ ಜನಪ್ರಿಯ  ನಿರ್ದೇಶಕ ರಾಜಮೌಳಿ ಮತ್ತು ನಾನು( ವಿ ನಾಗೇಂದ್ರ ಪ್ರಸಾದ್ ) ಒಂದುಕಾಲದ ಸಹೋದ್ಯೋಗಿಗಳು.
ಭಾರತೀಯ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಆತನಿಗೆ ಸಲ್ಲುತ್ತದೆ.
 ನನ್ನ ಈ ಬರಹದ ಉದ್ದೇಶ ಬಾಹುಬಲಿಯನ್ನು ವಿರೋಧಿಸುವುದಲ್ಲ.
ಬಾಹುಬಲಿಯ ಅಸ್ತ್ರದಿಂದ ಕನ್ನಡವನ್ನು ತಿವಿಯುತ್ತಿರುವ ನಾಡದ್ರೋಹಿಗಳ ಹಾಡುಹಗಲ ಕೊಳ್ಳೆಬಾಕತನವನ್ನು ವಿರೋಧಿಸುವುದು.
ಜನ ಮೆಚ್ಚಿದ ಕನ್ನಡ ಚಿತ್ರ ‘ರಾಗ’
ನಾಳೆಯಿಂದ ಇಡೀ ನಾಡಿನಲ್ಲಿ ಒಂದೇ ಒಂದು ಪ್ರದರ್ಶನಕ್ಕೂ ಅವಕಾಶವಿಲ್ಲ.!!!!!
ಕಾರಣ ಬಾಹುಬಲಿ.
ಎಲ್ಲ ಚಿತ್ರಮಂದಿರಗಳನ್ನೂ ಆಕ್ರಮಿಸಿದ್ದಾನೆ.
ಪ್ರದರ್ಶಕರು ಮತ್ತು ವಿತರಕರ ವ್ಯಾಪಾರಿ ಮನೋಭಾವದ ಮುಂದೆ ಉತ್ತಮ ಎನಿಸಿಕೊಂಡ   ಕನ್ನಡ  ಚಿತ್ರಗಳೂ ಮಂಡಿಯೂರಿ ಕುಳಿತುಕೊಳ್ಳಬೇಕೇ?
 ಕನ್ನಡ ಚಲನಚಿತ್ರವಾಣಿಜ್ಯ ಮಂಡಳಿ  ರಾಗ ತಂಡಕ್ಕೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವೇ ತನ್ನ ಸದಸ್ಯರನ್ನು ತನ್ನ ತಹಬಂದಿಗೆ ತೆಗೆದುಕೊಳ್ಳಲಾಗದ ವೈಫಲ್ಯದ ಹೊಣೆ ಹೊರಬೇಕು.
   ಬಾಹುಬಲಿಗಾಗಿ ರಾಗ ಚಿತ್ರವನ್ನು ಬಲಿಕೊಟ್ಟವರನ್ನು ಖಂಡಿಸಿ  ನನ್ನ ವಿರೋಧವನ್ನು ದಾಖಲಿಸುತ್ತಿದ್ದೇನೆ. 
ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ.
– ——-ವಿ.ನಾಗೇಂದ್ರ ಪ್ರಸಾದ್
-Ad-

Leave Your Comments