ಅಮೂಲ್ಯ ಮದ್ವೆಗೆ ಗಣೇಶ್ ಮುಂದೆ ನಿಂತಿರೋ ರಹಸ್ಯ ಏನ್ ಗೊತ್ತಾ !!

ಅಮೂಲ್ಯ ಮದುವೆಯನ್ನ   ಶಿಲ್ಪಾ ಮತ್ತು  ಗಣೇಶ್ ಪ್ರತಿಯೊಂದ್ರಲ್ಲೂ ಮುಂದೆ ನಿಂತು ನಡೆಸಿಕೊಡ್ತಿದ್ದಾರೆ. ಹಲವು ಕಾರ್ಯಕ್ರಮದ ಖರ್ಚನ್ನೂ ಮಾಡುತ್ತಿದ್ದಾರೆ. ಇದು ಬಹೆತೇಕರಿಗೆ  ಗೊತ್ತಿರೋ ವಿಷ್ಯನೇ. ಆದ್ರೆ ಏನಪ್ಪಾ  ಇಷ್ಟೊಂದ್ ಕೇರ್ ಅಮ್ಮು ಮೇಲೆ? ಏನಿದರ ಮರ್ಮ? ಸ್ವಲ್ಪ ಕೆದಕುತ್ತಾ ಹೋದ್ರೆ ರಾಜಕೀಯ ಓಪನ್ ಆಗತ್ತೆ..!

 ಇದು ಶಿಲ್ಪ ಗಣೇಶ್ ರಾಜಕೀಯದ ಗೇಮ್
ಶಿಲ್ಪಾ  ಗಣೇಶ್ ಈ ಸಾರಿ ಬರೋ ಎಲೆಕ್ಷನ್ಗೆ ನಿಲ್ಲೋ ಪ್ಲಾನ್ ನಲ್ಲಿದ್ದಾರೆ. ಇದಕ್ಕಾಗಿ ಹಲವು ಕಸರತ್ತುಗಳನ್ನು  ನಡೆಸ್ತಾ ಇದ್ದಾರೆ. ಗಣೇಶ್  ಬಿಜೆಪಿ ಮುಖಂಡರ ಬಳಿ  ಟಿಕೆಟ್ ಕೂಡ ಕೇಳಿದ್ದಾರೆ. ಆರ್ ಎಸ್ ಎಸ್  ಮುಖಂಡರನ್ನ ಸಂಪರ್ಕಿಸಿ ಲಾಬಿ ನಡೆಸುತ್ತಿದ್ದಾರೆ  ಇದ್ದಾರೆ  ಅನ್ನೋ ಸುದ್ದಿ ಹರಿದಾಡುತ್ತಿದೆ.
ಗಣೇಶ್ ಮೊದಲಿನಿಂದಲೂ ಬಿಜೆಪಿಯ ಮುಖಂಡ ಯಡಿಯೂರಪ್ಪನೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಹೇಗಾದರೂ ಮಾಡಿ ಪತ್ನಿ ಶಿಲ್ಪಾಗೆ ಟಿಕೆಟ್ ಕೊಡಿಸಿ ಗೆಲ್ಲಿಸಬೇಕು ಅನ್ನೋದು ಅವರ ಪ್ಲಾನ್.

ರಾಜಕೀಯಕ್ಕೂ ಅಮ್ಮು ಮದ್ವೆಗೂ ಏನ್ ಸಂಬಂಧ?

ಈ ಪ್ರಶ್ನೆ ಬರೋದು ಸಹಜ. ಇಲ್ಲೇ ಇರೋದು ರಹಸ್ಯ. ಶಿಲ್ಪಾ ಕಣ್ ಇರೋದು ರಾಜರಾಜೇಶ್ವರಿ ನಗರ ಕ್ಷೇತ್ರದ ಮೇಲೆ.ಇಲ್ಲಿಂದಲೇ ಚುನಾವಣೆಗೆ ನಿಲ್ಲಬೇಕು ಅನ್ನೋ ಹಂಬಲ ಅವರದ್ದು.  ಅಮ್ಮುವಿನ ಹುಡುಗ ಜಗದೀಶ್ ನ ತಂದೆ RR ನಗರದ ಕಾರ್ಪೊರೇಟರ್. ಪ್ರಭಾವಿ ಲೀಡರ್. ಅಲ್ಲಿ ಅವರ ಸಪೋರ್ಟ್ ತುಂಬಾ ಮುಖ್ಯ. ಅಲ್ಲದೆ ಅವರೂ ಕೂಡ ಎಂ.ಎಲ್. ಎ  ಟಿಕೆಟ್ ಆಕಾಂಕ್ಷಿ. ಅಮ್ಮು ಮದ್ವೆ ನೆಪದಲ್ಲಿ ಅವರನ್ನ ಓಲೈಸಿ, ಟಿಕೆಟ್ ಪಡೆದು, ಅವರ ಸಪೋರ್ಟ್ ಪಡೆಯೋ ಐಡಿಯಾ !! ಅಮ್ಮು ಮದ್ವೆ ನೆಪದಲ್ಲಿ ಒಳ್ಳೆ  ಜನಾಭಿಪ್ರಾಯ ಮೂಡಿಸಿ ಮುಂದಡಿ ಇಡುವ ಪ್ಲಾನ್!

ವರ್ಕ್ ಔಟ್ ಆಗತ್ತಾ ಕಾದು ನೋಡ್ಬೇಕು…

_ವಿನಯ್

-Ad-

1 COMMENT

Leave Your Comments