ಬಿಗ್ ಬಾಸ್ ನಲ್ಲಿ ಶಂಕರ್ ನಾಗ್ “ಗೀತಾ” ರಹಸ್ಯ..!

ಬಿಗ್ ಬಾಸ್ ಮನೆಯಲ್ಲಿ ಹದಿನೇಳು ಸ್ಪರ್ಧಿಗಳು ಇದ್ದು ಹಿರಿಯ ಸದಸ್ಯರಾಗಿ ನಮ್ಮೆಲ್ಲರ ಅಚ್ಚುಮೆಚ್ಚಿನ ಸಿಹಿಕಹಿ ಚಂದ್ರು ಇದ್ದಾರೆ. ಅವರು  ಸ್ವಾರಸ್ಯಕರವಾದ ಗುಟ್ಟೊಂದನ್ನ ಹೇಳಿದ್ರು. ಅದು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ ಆಟೋ ರಾಜ ಶಂಕರ್ ನಾಗ್ ಬಗ್ಗೆ. ಆ ವಿಚಾರವನ್ನು ಕೇಳಿದ ಪ್ರತಿಯೊಬ್ಬ ಸ್ಪರ್ಧಿ ಹಾಗೂ ವೀಕ್ಷಕ ಒಂದು ಕ್ಷಣ ಹೌಹಾರಿದ್ರು..
ಶಂಕರ್ ನಾಗ್ ಅಂದ್ರೆ ಗೀತಾ ಸಿನಿಮಾ ನೆನಪಿಗೆ ಬರುತ್ತೆ. ಈ ಸಿನಿಮಾಗೆ ಶಂಕರ್ ನಾಗ್ ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದು, ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಅತ್ಯದ್ಭುತವಾಗಿವೆ. ಯಾವುದೇ ಆರ್ಕೇಸ್ಟ್ರಾ ಗಳಲ್ಲಿ ಸಂತೋಷಕ್ಕೇ ಹಾಡು ಸಂತೋಷಕ್ಕೆ ..ಜೊತೆ  ಜೊತೆಯಲಿ ..ಕೇಳದೆ ನಿನಗೀಗ.. ಗೀತಾ.. ಸಂಗೀತಾ.., ನನ್ನ ಜೀವ ನೀನು,  ಏನೇ ಕೇಳು ಕೊಡುವೆ ನಿನಗೆ ನಾನೀಗ ಅನ್ನೋ ಹಾಡುಗಳು ಸಾಕಷ್ಟು ಖ್ಯಾತಿ ಗಳಿಸಿವೆ.
ಇಷ್ಟು ಹಾಡುಗಳನ್ನು ಹಾಡಿರೋದು ಕಂಚಿನ ಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗು ಗಾನ ಕೋಗಿಲೆ ಪಿ ಜಾನಕಿ. ಇವುಗಳಲ್ಲಿ ರೈಲಿನ ಹಿಂದೆ ಓಡುತ್ತ ಪ್ರಿಯತಮೆಗಾಗಿ ಓಲೈಕೆ ಮಾತುಗಳನ್ನಾಡುವ ನಾಯಕ ನಟ ಹೀಗೆ ಹೇಳುತ್ತಾನೆ. ‘ ಏನೇ ಕೇಳು ಕೊಡುವೆ ನಿನಗೆ ನಾನೀಗ..’ ಅನ್ನೋ ಸಾಂಗ್ ಬರೆದಿರುವುದು ಖ್ಯಾತ ಬರಹಗಾರ ಚಿ ಉದಯ್ ಶಂಕರ್.
 ಈ ಹಾಡಿಗೆ ಟ್ಯೂನ್ ರೆಡಿಯಾದ ಮೇಲೆ ಹಾಡು ಬರೆಸಲು ಶಂಕರ್ ನಾಗ್ ಚಂದ್ರು ಹಾಗು ರಮೇಶ್ ಭಟ್ ಗೆ ಸೂಚಿಸಿದ್ರಂತೆ. ಚಿ ಉದಯ್ ಶಂಕರ್ ಹತ್ತಿರ ಬಂದು ಇವರು ಹೇಳಿದಾಗ ಸಂಭಾವನೆ ಎಷ್ಟು ಕೊಡ್ತಾರೆ ಅಂತ ಕೇಳಿದ್ರಂತೆ ಹಾಗ ಶಂಕರ್ ನಾಗ್ ಗೆ ಕೇಳಿದ್ದಕ್ಕೆ ಅವರು ಏನು ಕೇಳ್ತಾರೆ ಅದು ಕೊಟ್ರೆ ಆಯ್ತು ಅಂದ್ರಂತೆ. ಹಾಗಾದ್ರೆ ಏನೇ ಕೇಳು ಕೊಡುವೆ ನಿನಗೆ ನಾನೀಗ ಇದೇ ಸಾಹಿತ್ಯ ಬರ್ಕೊಳಿ  ಅಂದ್ರಂತೆ ಉದಯ್ ಶಂಕರ್..
ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಶಂಕರ್ ನಾಗ್ ಗೆ ಇದ್ದಂತಹ ಧಾರಾಳ ಮನಸ್ಥಿತಿ ಹಾಗೂ ಚಿ ಉದಯ್ ಶಂಕರ್ ಅವರಿಗೆ ಇದ್ದಂತಹ ಕನ್ನಡ  ಪದಗಳ ಶ್ರೀಮಂತಿಕೆ, ನೀವು ಏನ್ ಮಾಡ್ತಿದ್ದೀರೋ ಅದರ ಮೇಲೆ ಸಾಹಿತ್ಯ ಬರೆದು ಜನಮೆಚ್ಚುಗೆ ಗಳಿಸೋದು ಉದಯ್ ಶಂಕರ್ ಗೆ ಉದಯ್ ಶಂಕರ್ ಅಷ್ಟೇ ಸಾಟಿ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments