ಟಾಲಿವುಡ್ ನಲ್ಲಿ ಶ್ಯಾಮಿಲಿ ಕಮ್ ಬ್ಯಾಕ್

ಒಂದು ಕಾಲದಲ್ಲಿ ಬಾಲ ನಟಿಯಾಗಿ (ಬೇಬಿ ಶ್ಯಾಮಿಲಿ) ಬೆಳ್ಳಿತೆರೆ ಮೇಲೆ ಮಿಂಚಿ ಎಲ್ಲರ ಮನೆಯ ಮುದ್ದು ಕಂದನಂತಿದ್ದ ಶ್ಯಾಮಿಲಿ ಈಗ ಟಾಲಿವುಡ್ ಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಬಾಲ್ಯದಲ್ಲಿಯೇ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಶ್ಯಾಮಿಲಿ ಕೆಲ ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ರಿ ಎಂಟ್ರಿ ಕೊಟ್ಟಿದ್ದರು.  2009 ರಲ್ಲಿ ಸಿದ್ದಾರ್ಥ್ ಜತೆ ‘ಓಯ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಬಳಿಕ 6 ವರ್ಷ ಅಭಿನಯದಿಂದ ದೂರ ಉಳಿದಿದ್ದರು. ಕಳೆದ 2 ವರ್ಷಗಳಿಂದ ಮತ್ತೆ ಅಭಿನಯದಲ್ಲಿ ತೊಡಗಿಸಿಕೊಂಡ ಇವರು ತಮಿಳು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಬ್ಯುಸಿಯಾದರು. ಸದ್ಯ ಟಾಲಿವುಡ್ ನ ಚಾಕ್ಲೆಟ್ ಹೀರೋ ನಾಗಶೌರ್ಯ ಜತೆಗೆ ನಾಯಕಿಯಾಗಿ ನಟಿಸಲಿದ್ದಾರೆ. ಶ್ಯಾಮಿಲಿ ಈ ಚಿತ್ರದಲ್ಲಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

-Ad-

Leave Your Comments