ಶಂಕರನಾಗ್ ಕಿರುಚಿತ್ರ ಸ್ಪರ್ಧೆಯಲ್ಲಿ ನೀವು ಭಾಗವಹಿಸಬಹುದು, ಹಾಗಾದ್ರೆ ಮಾಡಬೇಕಿರುವುದೇನು?

ಶಂಕರನಾಗ್ ಸ್ಮರಣೀಯ ಟ್ರಸ್ಟ್ ವತಿಯಿಂದ ಎರಡನೇ ವರ್ಷ ಶಂಕರನಾಗ್ ಕಿರು ಚಿತ್ರೋತ್ಸವ ಹಾಗೂ ಕಿರುಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತ ಸಿನಿಮಾ ತಯಾರಕರು ಕಿರುಚಿತ್ರ ತಯಾರಿಸಿ ಈ ಸ್ಪರ್ಧೆಗೆ ಕಳುಹಿಸಬಹುದಾಗಿದೆ.

ನೀವು ಯಾವುದೇ ಕಿರುಚಿತ್ರ ಮಾಡಿದ್ದರೆ, ಅದನ್ನು ಈ ಸ್ಪರ್ಧೆಯಲ್ಲಿ ಕಳುಹಿಸಲು ಇಚ್ಛಿಸಿದರೆ www.teamshankarnag.com ವೆಬ್ ಸೈಟಿಗೆ ಹೋಗಿ ಮತ್ತು ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ ಮತ್ತು ಡಿವಿಡಿಯೊಂದಿಗೆ ಸೆಪ್ಟೆಂಬರ್ 1, 2017 ಒಳಗೆ ಸಲ್ಲಿಸಬೇಕು. ಇನ್ನು ನಿಮ್ಮಲಿ ಕೆಲವು ಕಥೆಗಳು/ ಕಾನ್ಸೆಪ್ಟ್ ಇದ್ದರೆ  ಕಿರುಚಿತ್ರ ನಿರ್ಮಿಸಿಯೂ ಕಳುಹಿಸಬಹುದು.

ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿದ್ದು, ಅವುಗಳೆಂದರೆ ಮ್ಯಾಕ್ರೋ ಮೂವಿ(10 ರಿಂದ 30 ನಿಮಿಷ), ಮೈಕ್ರೋ ಮೂವಿ (3 ರಿಂದ 10 ನಿಮಿಷ), ಅನಿಮೇಷನ್ ಚಲನಚಿತ್ರ (3 ರಿಂದ 10 ನಿಮಿಷ) ಮತ್ತು ಮ್ಯೂಸಿಕ್ ವೀಡಿಯೊ ಆಲ್ಬಮ್ (3 ರಿಂದ 5 ನಿಮಿಷ). ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಕನ್ನಡ, ತುಳು, ಕೊಡವ, ಕೊಂಕಣಿ ಮತ್ತು ಲಂಬಾಣಿ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಬಹುದು. ಕನ್ನಡ ಹೊರತಾಗಿರುವ ಭಾಷೆಯಲ್ಲಿ ಕಿರು ಚಲನಚಿತ್ರ ನಿರ್ಮಿಸಿದ್ದರೆ ಉಪ(subtitle) ಶೀರ್ಷಿಕೆ ಹೊಂದಿರಬೇಕು.

ಈ ಕಿರುಚಿತ್ರ ಸ್ಪರ್ಧೆ ಕುರಿತು ಶಂಕರನಾಗ್ ಸ್ಮಾರಕ ಟ್ರಸ್ಟ್ ಸಂಸ್ಥೆ ಹೇಳುವುದಿಷ್ಟು, ‘ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಥಿಯೇಟರ್ಗಳನ್ನು ನಿರ್ಮಿಸುವ ಉದ್ದೇಶದಿಂದ ಈ ತಂಡವು ಜೀವನದ ಎಲ್ಲಾ ಹಂತಗಳ ಜನರನ್ನು ಒಳಗೊಂಡಿದೆ. ಸದಸ್ಯರು ಬರವಣಿಗೆ, ಸ್ಕ್ರಿಪ್ಟಿಂಗ್, ನಿರ್ದೇಶನ, ಸಂಗೀತ, ವಿನ್ಯಾಸಕರು, ಆನಿಮೇಟರ್ಗಳು, ಕಲಾವಿದರು, ಗೀತಕಾರರು, ಛಾಯಾಗ್ರಾಹಕರು, ಛಾಯಾಗ್ರಾಹಕರು ಹಾಗೆ ಎಲ್ಲಾ ಯುವ ಚಲನಚಿತ್ರ ತಯಾರಕರೊಂದಿಗೆ ಸಹಯೋಗ ಮತ್ತು ಉದ್ಯಮದಲ್ಲಿ ತಮ್ಮ ಪ್ರತಿಭೆಯನ್ನು ಉತ್ತೇಜಿಸುವುದು ನಮ್ಮ ಮಿಷನ್. ನಮಗೆ ಚಲನಚಿತ್ರಗಳು ಕೇವಲ ಮನರಂಜನೆಯ ಮೂಲವಲ್ಲ. ಇದು ನಮ್ಮ ಉತ್ಸಾಹ ಮತ್ತು ಆಸಕ್ತಿ.’

ಈ ಸ್ಪರ್ಧೆ ಕುರಿತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಲು ಇಲ್ಲಿಗೆ ಭೇಟಿ ನೀಡಿ. [email protected] ಇನ್ನು ದೂರವಾಣಿ ಸಂಖ್ಯೆ 8861014754/ +91 78999 18907/ 9980251165/ 9902010709/ 8553393389/ 9035409963/ 9900230230/ 7353444545 ಕ್ಕೆ ಕರೆ ಮಾಡಿ.

-Ad-

Leave Your Comments