ಶಿಲ್ಪಾ ಶೆಟ್ಟಿ ಮಲಗೋಕೆ ಒಂದೂವರೆ ಕೋಟಿ ರೂಪಾಯಿ..!?

ನಟಿ ಮಣಿಯರು ಅಂದ್ರೆ ಹಾಗೆ ಬಿಡಿ ಅಂತ ಮೂಗು ಮುರಿಬೇಡಿ.. ಇದು ನಿಮ್ಮ ಊಹೆಯನ್ನು ಹುಸಿಗೊಳಿಸುತ್ತೆ. ಯಾಕಂದ್ರೆ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ..
ಏನಿದು ಘಟನೆ ? ಮಲ್ಗೋದು ಅಂದ್ರೇನು..?
 ಶಿಲ್ಪಾ ಶೆಟ್ಟಿ ಮಲ್ಗೋಕೆ ಒಂದೂವರೆ ಕೋಟಿ ಅನ್ನೋದು ನಿಜ ಸಂಗತಿ.. ಶಿಲ್ಪಾ ಶೆಟ್ಟಿ ದಂಪತಿ ತಾವು ಮಲಗುವ ಕೋಣೆಗೆ ಒಂದೂವರೆ ಕೋಟಿ ಮೌಲ್ಯದ ಬೆಡ್ ಶೀಟ್ ಖರೀದಿ ಮಾಡಿದ್ರು. 2015 ರಲ್ಲಿ ಖರೀದಿ ಮಾಡಿದ ದಂಪತಿ, 2016ರ ಜನವರಿಯಲ್ಲಿ 1 ಕೋಟಿ 44 ಲಕ್ಷ ಪಾವತಿ ಮಾಡಿದ್ದಾರೆ.. ಉಳಿದ ಬಾಕಿ 6 ಲಕ್ಷ ಹಣ ಪಾವತಿ ಮಾಡದೆ ಮತ್ತೆ 2016ರಲ್ಲಿ 18 ಲಕ್ಷದ ಇನ್ನೊಂದು ಬೆಡ್ ಶೀಟ್ ಖರೀದಿ ಮಾಡಿದ್ದಾರೆ.
24 ಲಕ್ಷ ವಂಚನೆ ಮಾಡಿದ ಕೇಸ್ ಬುಕ್..!
ಇದೀಗ ಟೆಕ್ಸ್ ಟೈಲ್ ಮಾಲೀಕರು ಮಹಾರಾಷ್ಟ್ರದ ಥಾಣೆ ಪೊಲೀಸರಿಗೆ ಈ ಬಗ್ಗೆ ದೂರು ದಾಖಲು ಮಾಡಿದ್ದು, ಭೀವಂಡಿ ಠಾಣೆಯಲ್ಲಿ ಎಫ್ಐಆರ್ ಮಾಡಲಾಗಿದೆ..ಜೊತೆಗೆ  ವಿಚಾರಣೆಗೆ ಬರುವಂತೆ ನಟಿ ಶಿಲ್ಪಾ ಶೆಟ್ಟಿಗೆ ನೋಟಿಸ್ ನೀಡಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ..
ಸರ್ವಸಮರ್ಥ, ನಾಗಮಂಗಲ
-Ad-

Leave Your Comments