ಶಿವಣ್ಣನಿಗೊಂದು ಸಲಾಂ ! ಯಾಕೆ ಗೊತ್ತಾ ?

ಇಂದು ಜುಲೈ  12. ಕನ್ನಡ ಚಿತ್ರರಸಿಕರ ಕಣ್ಮಣಿ ಡಾ .ರಾಜಕುಮಾರ್ ಅವರ ಹಿರಿಯ ಪುತ್ರ  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಪ್ರತೀ  ಬಾರಿ ಹುಟ್ಟುಹಬ್ಬವನ್ನ ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ ಈ ಬಾರಿ ಸೆಲೆಬ್ರೇಶನ್ ಮೂಡ್ ನಲ್ಲಿ ಇಲ್ಲ . ಹೆತ್ತಮ್ಮನನ್ನು ಕಳೆದುಕೊಂಡ ದುಃಖವಿನ್ನೂ ಆರದಿರುವಾಗ ಆಚರಣೆ ಹೇಗೆ ಮಾಡಿಕೊಳ್ಳಲಿ ಎನ್ನುವಂಥ ಮನಃ ಸ್ಥಿತಿಯಲ್ಲಿದ್ದಾರೆ. ಆದರೆ ಅಣ್ಣಾವ್ರ ಹಾಡು ನಾನಿರುವುದೆ ನಿಮಗಾಗಿ ಸಾಲುಗಳನ್ನು ನೆನಪಿಸುವಂಥ ಕೆಲಸ ಮಾಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮವನ್ನು ಪಕ್ಕಕ್ಕಿಟ್ಟು ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅವರ ಜೊತೆಗೆ  ಟಗರು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡಾ ದೇಣಿಗೆ ನೀಡಿದ್ದಾರೆ.

ಶಿವಣ್ಣನ ಈ ನಡೆ ನಿಜಕ್ಕೂ ಅಭಿನಂದನೆಗೆ ಅರ್ಹ . ಅಭಿಮಾನಿಗಳು , ಪ್ರೇಕ್ಷಕರು, ಚಿತ್ರರಂಗ ಹೆಮ್ಮೆ ಪಡುವಂಥ ಕೆಲಸ ಮಾಡಿರುವ ಟಗರು ಮತ್ತಷ್ಟು ವಿಜೃಂಭಿಸಲಿ .

 

 

 

-Ad-

Leave Your Comments