ಜನರಿಗಾಗಿ ಶಿವಣ್ಣ ಮಾಡಿದ ಮನವಿಗೆ ಸ್ಪಂದಿಸಿದ ಸರ್ಕಾರ

ನಟ ಶಿವರಾಜ್ ಕುಮಾರ್ ಕರುನಾಡಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅಣ್ಣಾವ್ರ ಹಾದಿಯಲ್ಲೇ ನಡೆಯುತ್ತಿರುವ ಹ್ಯಾಟ್ರಿಕ್ ಹೀರೋ ಸಮಾಜದ ಹಲವು ಸಮಸ್ಯೆಗಳ ಬಗ್ಗೆ ಆಗ್ಗಾಗ್ಗೆ ಗಮನ ಹರಿಸುತ್ತಿರುತ್ತಾರೆ . ನಿನ್ನೆಯಷ್ಟೇ ಜನರ ಸಮಸ್ಯೆ ನೀಗಿಸಲು ಪತ್ನಿ ಸಮೇತರಾಗಿ ಸರ್ಕಾರದ ಗಮನ ಸೆಳೆದಿದ್ದಾರೆ .
ಸಮಾಜದ ಸಮಸ್ಯೆ ಪರಿಹಾರಕ್ಕೆ ಶಿವಣ್ಣ ಯತ್ನ
ಮೊನ್ನೆ ಶಿವಣ್ಣ ನಮ್ಮ ವಿಧಾನಸೌದದ ಬಾಗಿಲು ಬಡಿದಿದ್ರು. ಈ ವೇಳೆಮಾನ್ಯಾತಾ ಟೆಕ್ ಪಾರ್ಕ್ ಬಳಿ ಆಗುತ್ತಿರುವ ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದಿದ್ರು. ‌‌ಅದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಸಚಿವರು ಇಂದು ನೇರವಾಗಿ ಶಿವಣ್ಣ ಅವರ ಮನೆ ಬಳಿಗೆ ತೆರಳಿದ್ರು. ಮೊದಲೇ ವಿಚಾರ ಗೊತ್ತಿದ್ರಿಂದ ಶಿವಣ್ಣ ಕೂಡ ಮನೆಯಲ್ಲೇ ಇದ್ರು. ಸಚಿವರು ಎಲ್ಲಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಬಳಿ ಮುಕ್ತವಾಗಿ ಚರ್ಚಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ರು..
ಶಿವಣ್ಣನನ್ನು ಗಮನ ಸೆಳೆದ ಸಮಸ್ಯೆ ಯಾವುದು..?
ಇಷ್ಟೆಲ್ಲಾ ಹೇಳಿದ ಮೇಲೆ ಶಿವಣ್ಣ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ವಿಚಾರ ಯಾವುದು ಅಂತ ನಿಮ್ಮಲ್ಲಿ ಪ್ರಶ್ನೆ ಮೂಡೋದು ಸಹಜ. ಮಾನ್ಯತಾ ಟೆಕ್ ಪಾರ್ಕ್ ಸಾಕಷ್ಟು ಐಶಾರಾಮಿ ಜನವಸತಿ ಪ್ರದೇಶವಾಗಿದ್ದು, ಐಟಿ ಬಿಟಿ ಉದ್ಯೋಗಿಗಳು ಸಹ ಇದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಜೊತೆಗೆ ಮಾನ್ಯತಾ ದವರು ಪರ್ಮಿಷನ್ ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಉದ್ಯೋಗಿಗಳು ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ . ಇದರಿಂದ ವೀಪರೀತ ಟ್ರಾಫಿಕ್ ಸಮಸ್ಯೆ ಎದುರಾಗಿದೆ .  ಮಾನ್ಯತಾ ಟೆಕ್ ಪಾರ್ಕ್ ಬಳಿ ಟ್ರಾಫಿಕ್ ಸಮಸ್ಯೆ ಯಾವ ಮಟ್ಟದಲ್ಲಿ ಇದೆ ಅಂದ್ರೆ ಒಮ್ಮೆ ರಸ್ತೆಗಿಳಿದ್ರೆ ಮನೆ ಅಥವಾ ಆಫೀಸ್ ತಲುಪೋದು ಎಷ್ಟು ಸಮಯ ಅನ್ನೋದನ್ನು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜನರೆಲ್ಲಾ ರಸ್ತೆಯಲ್ಲೇ ಸಹಸ್ರ ಶಾಪ ಹಾಕ್ತಿದ್ರು. ತುಂಬಾ ದಿನಗಳಿಂದ ಸಮಸ್ಯೆ ಇರೋದನ್ನು ಮನಗಂಡ ಅಣ್ಣಾವ್ರ ಮಗ ಸರ್ಕಾರದ ಗಮನ ಸೆಳೆದಿದ್ರು. ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ ಜನರ ಸಮಸ್ಯೆ ಶಿವಣ್ಣ ಸ್ಪಂದನೆ ಮಾತ್ರ ಸೂಪರ್ ಅಂತಾನೇ ಹೇಳಬಹುದು ಏನಂತೀರಾ.?
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments