“ಶ್ರೀಕಂಠ” ಶಿವಣ್ಣನಿಗೆ ಇಲ್ಲದ ವಿಷ ನಿಮಗ್ಯಾಕೋ ?

”ಶ್ರೀಕಂಠ” ನ ಅಂಗಳದಲ್ಲಿ

srikanta-kan-20160718124353-435

”ಶ್ರೀಕಂಠ” ಸಿನಿಮಾದ ಪ್ರೆಸ್ ಮೀಟ್ಗೆ ಚಾಮುಂಡೇಶ್ವರಿ ಸ್ಟುಡಿಯೋಗೆ ಹೋದಾಗ ಪರಿಚಿತ ಕಣ್ಣುಗಳಲ್ಲಿ ಅಸಹನೆ ಕುಣಿಯುತ್ತಿತ್ತು. ಫೋಟೋಗ್ರಾಫರ್ ಒಬ್ಬರು ಕೇಳಿಯೂ ಬಿಟ್ಟರು “ಇಲ್ಲಿಗೂ ಬಂದ್ಯಾ ?” ಅಸೂಹೆ ತುಂಬಿದ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೆ ನಕ್ಕು ಸುಮ್ಮನಾದೆ.

ಶಿವರಾಜ್ಕುಮಾರ್  ಎದುರಾದಾಗ

srikanta-press-meet_1483420347150

ಇನ್ನೇನು ಹೊರಡುವ ಸಿದ್ಧತೆಯಲ್ಲಿದ್ದ ಶಿವರಾಜ್ ಕುಮಾರ್ ಅವರಿಗೆ ನನ್ನ ಪರಿಚಯ ಹೇಳಿ ಒಂದೈದು ನಿಮಿಷ ನಿಮ್ಮ ಸಮಯ ಕೊಡಬಹುದಾ ? ಒಂದಿಷ್ಟು ಪ್ರಶ್ನೆಗಳಿವೆ ಅಂದೆ. ಅದೇ ಹೊತ್ತಿಗೆ ಮತ್ತೊಂದು ವಾಹಿನಿಯವರು ಹೊಸವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ  ಘಟನೆ ನ್ಯಾಷನಲ್ ಇಶ್ಯೂ ಆಗಿದೆ. ನೀವೇನ್ ಹೇಳ್ತೀರಾ ಅಂತ ಒತ್ತಾಯಿಸುತ್ತಿದ್ದರು . ಶಿವಣ್ಣ ನಾನು ಮಾತಾಡೋದ್ರಿಂದ ಏನಾದ್ರೂ ಒಳ್ಳೇದು ಆಗತ್ತಾ? ಕ್ರಮ ತೆಗೆದುಕೊಳ್ಳಬೇಕಾದವರೇ ಬೇರೆಯವರು ಅವರನ್ನ ಕೇಳಿ ಅಂದ್ರು. ಕೊನೆಗೆ ಆಯ್ತಪ್ಪ ನಿನ್ನ ಸಮಾಧಾನಕ್ಕೆ ಹೇಳ್ತೀನಿ ಒಳ್ಳೆದಾದ್ರೆ ಸರಿ ಅಂತ ಮಾತಾಡಿದ್ರು. ಅದಾದ ಮೇಲೆ ಮತ್ಯಾರೋ ಬೈಟ್ ಕೇಳಿದಾಗ ಇಲ್ಲ ಇವರು ಮೊದಲು ಕೇಳಿದ್ದಾರೆ ನಿಮ್ಮ ಜೊತೆ ಆಮೇಲೆ ಮಾತಾಡ್ತೀನಿ ಅಂದವರೇ ciniadda.com ಜೊತೆ ಮಾತಾಡೋಕೆ ಶುರು ಮಾಡಿದರು.  ವಿಷ್ಣು ಅಭಿನಯದ ನಾಗರಹಾವು ಚಿತ್ರದ ಹಾಡಿನ ಬಳಕೆ ಪ್ರಶ್ನೆಗೂ (ವಿಡಿಯೋ ಹಾಕ್ತೇನೆ ನೋಡಿ )   ಉತ್ತರಕೊಟ್ಟು ಸರಿದರು. ಸರ್ ಮತ್ತೆರಡು ಪ್ರಶ್ನೆ ಎಂದಾಗಲೂ “ಕೇಳಿ” ಎನ್ನುವ ಸೌಜನ್ಯವೇ ಇತ್ತು.

“ರಾಜ್ ಲೀಲಾ ವಿನೋದ” ದ ಕ್ಷಣ ?

raaj-leela

ರಾಜ್ಕುಮಾರ್ ಅವರ ಚಿತ್ರಗಳನ್ನ ನೋಡುತ್ತಾ ಬಂದವಳು ನಾನು. ಅವರ ಮೇಲೆ ಅಪಾರ ಗೌರವವಿದೆ. ಆ ಭಾವದ ಜೊತೆಗೇ  ಈ ಪ್ರಶ್ನೆ ಕೇಳ್ತಾ ಇದ್ದೇನೆ ರಾಜ್ ಲೀಲಾ ವಿನೋದದಲ್ಲಿ ಬಂದಿರುವ ಅಂಶಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಅವರು ಕೊಟ್ಟ ಉತ್ತರವನ್ನ ನೀವೆಲ್ಲ ವಿಡಿಯೋದಲ್ಲಿ ನೋಡಿದ್ದೀರಿ. ಪ್ರಶ್ನೆ ಕೇಳಿದ ತಕ್ಷಣವೇ ಶಿವಣ್ಣನಿಗೇ  ಆಗದ ಮುಜುಗರ ಅಲ್ಲಿದ್ದವರಿಗೆ ಅದಾವ ಸಂದಿಯಿಂದ ಆಯ್ತೋ ಗೊತ್ತಿಲ್ಲ. ಬೇಡ ಮೇಡಂ ಅಂದಿದ್ದು ನಿಮಗೂ ಕೇಳಿಸಿದೆ. ಅದರ ಮಧ್ಯೆ ಯಾವಳೋ ಇವಳು….etc  ಅಂತ ನಾಲಿಗೆ ಹರಿಯಬಿಟ್ಟಿದ್ದೂ ನನಗೆ ಕೇಳಿಸಿದೆ. ಬೇಕಾದ್ದು ಅಂದುಕೊಳ್ಳಿ ಕೋಟ್ಯಂತರ  ಜನರಿಗೆ ಇದ್ದ ಕುತೂಹಲದ ಪ್ರಶ್ನೆಯನ್ನ ಕೇಳ್ತಿದ್ದೇನೆ. ಅವರಿಗೆ ನೋವಾಗದ ಹಾಗೆ ಕೇಳಬೇಕು ಅಷ್ಟೇ ಮನಸ್ಸಿನಲ್ಲಿ ಇದ್ದದ್ದು. ಶಿವಣ್ಣ ಹೇಳಿದ್ದರ ಹಿಂದಿನ ಸತ್ಯಾಸತ್ಯತೆ ಅವರಿಗೆ ಚೆನ್ನಾಗೇ  ಗೊತ್ತಿದೆ.screenshot_20170105-155106

ಒಂದಿಷ್ಟೂಸಿಡುಕದೆ,ಸೌಜನ್ಯ,ಸಹನೆ,ಪ್ರಬುದ್ಧತೆಯಿಂದ  ಉತ್ತರಿಸುತ್ತಿದ್ದ ರೀತಿಗೆ ನನಗೆ ವಯಕ್ತಿಕವಾಗಿ ಶಿವಣ್ಣನ ಮೇಲೆ ಗೌರವ ಹೆಚ್ಛೇ ಆಗಿದೆ. ಕುಹಕವಿಲ್ಲದ, ಸಹಜ ಕುತೂಹಲದ ಪ್ರಶ್ನೆಗೆ ಕಿಂಚಿತ್ತೂ ಅಳುಕದೆ ಸಹನೆಯಿಂದ ಉತ್ತರಿಸಿ ನಾಡಿನ ಜನರ ಕಣ್ಣಲ್ಲಿ ಮತ್ತಷ್ಟು ಎತ್ತರಕ್ಕೇರಿರುವುದನ್ನು ಬಹುತೇಕ ಎಲ್ಲರು ಗಮನಿಸಿದ್ದಾರೆ.

shivanna

ಬಾಯ್ ಬಾಯ್ ಬಡಿತ 

ಉತ್ತರ ಕೊಟ್ಟು ಅವರು ಅತ್ತ ಸರಿದದ್ದೇ ತಡ. ತಮ್ಮ ಕೆಲಸದಿಂದ ಅವರ ಮೆಚ್ಚುಗೆ ಗಳಿಸಲಾರದ ಚೇಲಾಗಳು ಬೊಬ್ಬೆ ಹೊಡೆಯಲಿಕ್ಕೆ ಶುರು ಮಾಡಿದರು. ಇಲ್ಲಿ ಅವರ ಅಭಿಮಾನಿಗಳು ಅಷ್ಟೊಂದು ಜನ ಬಂದಿಲ್ಲ. ಇದ್ದಿದ್ರೆ ನಿಮಗೆ ಗತಿ ಕಾಣಸ್ತಿದ್ರು. ಏನ್ ಅಂದ್ಕೊಂಡಿದ್ದೀರಾ ಶಿವಣ್ಣನಾ ? ಅವ್ರಪ್ಪನಿಗೆ ಇನ್ನೊಬ್ಬಳ ಜೊತೆ ಸಂಬಂಧ ಇದ್ದಿದ್ದನ್ನ ಮಗನ ಹತ್ತಿರ ಕೇಳ್ತಿರಾ ಅಂತ ಬೋಡು ತಲೆಯ ಭಟ್ಟಂಗಿಯೊಬ್ಬ ಕೇಳ್ಕೊಂಡ್ ಬಂದ. ನೋಡಿ ಇವರ ಗ್ರಹಿಕೆ ಮತ್ತು ಕೀಳುತನವನ್ನ. ಮತ್ತೊಬ್ಬ ಅಭಿಮಾನಿ ನಾನು ಇಲ್ಲೇ ಇದ್ದೀನಿ ಏನ್ ನೀನ್  ಪ್ರಶ್ನೆ ಕೇಳೋದು ನಮ್ಮಣ್ಣ ನ ಅಂತ ಕೆಕ್ಕರಿಸಿಕೊಂಡು ಬಂದ. ಕೆಕ್ಕರಿಸಿ ನೋಡಿದರೆ ಇಲ್ಲ್ಯಾರಿಗೂ ಭಯವಿಲ್ಲ ಹೋಗಲೇ ನನ್ನ ಕೆಲಸ ನಾನ್ ಮಾಡಿದ್ದೀನಿ ಅಂದುಕೊಂಡು ಹೊರಟೆ. ಕೊನೆಯಲ್ಲಿ ಬಂದ  ಪ್ರೊಡ್ಯೂಸರ್ ನಿಮ್ಮನ್ನ ಯಾರ್ರೀ ಬರೋಕೆ ಹೇಳಿದ್ದು ಹೋಗ್ರಿ ಮೊದ್ಲು ಅಂದ್ರು. ಡೈರೆಕ್ಟರ್ ಮಂಜು ಹತ್ತಿರ ಮಾತಾಡಿದ್ದೆ ಬನ್ನಿ ಅಂದ್ರು ಬಂದೆ ಅಂದೆ. ಆದರು ಹೋಗೋವರೆಗೂ ಬಿಡದೆ ಅಲ್ಲಿದ್ದ ದಾಂಡಿಗನಂತಿದ್ದ ಬೋಡನೊಬ್ಬನ ಕಡೆಯಿಂದ ಹೊರ ಕಳುಹಿಸಿದ್ರು.

ರಾತ್ರಿ ಬಂದ ಕರೆ.

ನಿರ್ದೇಶಕ ಮಂಜು ಕರೆ ಮಾಡಿ ಯಾರ್ರೀ ನೀವು ? ನಾನು ನಿಮ್ಮನ್ನ ಬನ್ನಿ ನೀವು ಬರದೇ ಇದ್ರೆ ನಮ್ಮ ಪಿಕ್ಚರ್ ಉದ್ದಾರ ಆಗಲ್ಲ ಅಂತ ಕರೆದಿದ್ದಾನಾ? ಯಾಕ್ರೀ ನನ್ ಹೆಸರು ಹೇಳಿದ್ರಿ ಅಂದ್ರು. ಹಿನ್ನೆಲೆಯಲ್ಲಿ ಪ್ರೊಡ್ಯೂಸರ್ ಧ್ವನಿ ಕೇಳ್ತಿತ್ತು. ಮಧ್ಯಾನ್ಹ ನಾನು ಫೋನ್ ಮಾಡಿ ಪ್ರೆಸ್ ಮೀಟ್ ಬಗ್ಗೆ ಕೇಳಿದಾಗ  ಬನ್ನಿ ಮೇಡಮ್ ಆದರೆ ನಾನು ಬರ್ತಾ ಇಲ್ಲ ಪ್ರೊಡ್ಯೂಸರ್ ಇರ್ತಾರೆ ಅಂದಿದ್ರು.  ೬ ನೇ ತಾರೀಕು ನಮ್ಮ  ಸಿನಿಮಾ ರಿಲೀಸ್ ಬನ್ನಿ ಮೇಡಂ ಸಿನಿಮಾ ನೋಡಿ ಅಂತ ಕರೆದಿದ್ದ ಮನುಷ್ಯ ಮಾತು ಬದಲಾಯಿಸಿದ್ದರು. ಆ ಕ್ಷಣದಲ್ಲಿ ತಿರುಗಿಸಿ ಕೊಡುವುದು ಕಷ್ಟದ ಕೆಲಸವಾಗಿರಲಿಲ್ಲ. ನಾನು ಯೋಚಿಸಿದ್ದು ಇಷ್ಟೇ ಪ್ರೊಡ್ಯೂಸರ್ ಪಕ್ಕದಲ್ಲಿದ್ದಾನೆ. ತನ್ನದೇನೂ ತಪ್ಪಿಲ್ಲ ಅಂತ ಸಾಬೀತು ಮಾಡಿಕೊಳ್ಳೋಕೆ ನನ್ನ ಬಳಿ ಜೋರಾಗಿ ಮಾತಾಡುತ್ತಿದ್ದಾರೆ ಮಾತಾಡಿಕೊಳ್ಳಲಿ. ಒಬ್ಬ ಡೈರೆಕ್ಟರ್ಗೆ ಒಂದೊಳ್ಳೆ ಸಿನಿಮಾ ಮಾಡ್ತೀನಿ ಅಂದ್ರು ಹಣ ಹೂಡುವವರು ಸಿಗೋದು ಎಂಥ ಕಷ್ಟ ನಂಗೊತ್ತು ನನ್ನನ್ನ ಬೈದ್ರು ಪರವಾಗಿಲ್ಲ ಆತ ಸೇಫ್ ಆಗಲಿ ಅನ್ನಿಸ್ತು. ಸುಮ್ಮನಾದೆ. ಅದಾದ ಮೇಲೆ ನಿರ್ಮಾಪಕರ ಸರದಿ ..ಸಾಯ್ಲಿ ಬಿಡಿ ಅತ್ಲಾಗೆ. ಅಬ್ಬರಿಸಿ ಬೊಬ್ಬಿರಿದರೆ ಇಲ್ಲ್ಯಾರಿಗೂ ಭಯವಿಲ್ಲ.

ಸುಳ್ಳರ ಸಂತೆ 

ಇತ್ತೀಚೆಗೆ ಹಿರಿಯ ನಿರ್ದೇಶಕ, ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರನ್ನ ಸಂದರ್ಶನ ಮಾಡಿದ್ದಾಗ  ಈ ಚಿತ್ರರಂಗ ಒಂದು ದೊಡ್ಡ ಸುಳ್ಳರ ಸಂತೆ ಅಂದಿದ್ದರು. samachaara.com ಸಂಪರ್ಕ ಮಾಡಿದಾಗ ಪಿ ಆರ್ ಓ ನಾಗೇಂದ್ರ ಸುತ್ತಿರುವುದು ಅದೇ ಸುಳ್ಳಿನ ಸುರುಳಿಯನ್ನೇ. “ಪ್ರಶ್ನೆ ಕೇಳೊವ್ರು ಬರೆಯೋಲ್ಲ. ಬರೆಯೋವ್ರು ಪ್ರಶ್ನೆ ಕೇಳಲ್ಲ”. ಅಂದಿದ್ದಾರಲ್ಲ. ಬರೆಯುವ, ಪ್ರಶ್ನೆ ಕೇಳುವ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನಮ್ಮಂತವರನ್ನು ಇವರು ಪ್ರೆಸ್ ಮೀಟ್ ಗೆ  ಕರೆಯುವುದು ಅಷ್ಟರಲ್ಲೇ ಇದೆ. ಹೊಗಳು  ಭಟ್ಟರು ಬೇಕು ಇವ್ರಿಗೆಲ್ಲ. ಇತ್ತೀಚೆಗೆ ಹೆಸರು ಹೇಳಲು ಇಚ್ಚಿಸದ ಹಿರಿಯ ಪಿ ಆರ್ ಓ ಒಬ್ಬರು ಎಲ್ಲಾ ಪತ್ರಿಕೆ,ವಾಹಿನಿಗಳ ಎಡಿಟರ್ ಗಳಿಗೆ  ಪಾರ್ಟಿ ಕೊಟ್ಟು ಒಂದಷ್ಟು ಹಣ ಕೊಟ್ಟು ಕಟು ವಿಮರ್ಶೆ ಮಾಡ್ಬೇಡಿ. ನಿರ್ಮಾಪಕರಿಗೆ ತೊಂದರೆ ಆಗತ್ತೆ ಅಂತ ಮಾತಾಡೋಣ ಅಂತಿದ್ದೀವಿ ಅಂದಿದ್ರು. ಸಿನಿಮಾ ಕ್ಷೇತ್ರವನ್ನ ಹಾಳು  ಮಾಡಲಿಕ್ಕೆ ಇಂಥಾ ಹುಳಗಳು ಸಾಕಲ್ಲವೆ? ತಮ್ಮ ಜೇಬು ತುಂಬಿಸಿಕೊಳ್ಳೋಕೆ ಹಣದ ಆಮಿಷವೊಡ್ಡಿ ಕೆಟ್ಟ ಚಿತ್ರಗಳನ್ನು ಒಳ್ಳೆ ಚಿತ್ರ ಅನ್ನಿ. ಜನರಿಗೆ ಬೂಸಾ ತಿನ್ನಿಸಿ ಅನ್ನುವವರಿವರು.  ಇವರ ಮಾತು ಕೇಳಿ ಕೆಟ್ಟ ಸಿನಿಮಾಗಳನ್ನು ೧೦೦ ಡೇಸ್ ಗ್ಯಾರಂಟಿ ಸೂಪರ್ ಸಿನಿಮಾ ಅಂತ ಬರೆದ, ಹೇಳಿದ ಪತ್ರಕರ್ತರು ಜನರಿಂದ ಕಳ್ ನನ್ ಮಕ್ಕಳು ಕಾಸ್ ತಗೊಂಡು ಥರ್ಡ್ ಕ್ಲಾಸ್ ಸಿನಿಮಾನ ನೋಡಿ ನೋಡಿ ಅಂತ ಹೇಳಿ ನಮ ತಲೆ ಕೆಡಿಸಿದರಲ್ಲ ಅಂತ  ಉಗಿಸಿಕೊಂಡರೆ  ಇವರಿಗೇನು ನಷ್ಟವಿಲ್ಲವಲ್ಲ.

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು

ರಾಜ್ ಲೀಲಾ ವಿನೋದದ ಪ್ರಶ್ನೆ,ಶಿವಣ್ಣನ ಉತ್ತರ  ಹೊತ್ತ ciniadda com ವಿಡಿಯೋ ಎಲ್ಲ ಕಡೆ ಹರಿದಾಡಿದೆ. ಇದರ ಹರಿದಾಟದ  ಪರಿ  ಪತ್ರಕರ್ತನೊಬ್ಬನ  ಹೊಟ್ಟೆಯ ಸಂಕಟಕ್ಕೆ  ಮತ್ತಷ್ಟು ಬೆಂಕಿಯಿಟ್ಟಿದೆ. ಹತ್ತಾರು ವರುಷ ಪತ್ರಿಕಾ ವೃತ್ತಿಯಲ್ಲಿದ್ದು ತಾವ್ಯಾರು ಮಾಡಲಾಗದ್ದನ್ನು ಈಕೆ ಕ್ಷಣಾರ್ಧದಲ್ಲಿ ಮಾಡಿಬಿಟ್ಟಳಲ್ಲ ಅನ್ನುವ ಉರಿಗೆ ಬಾಯಿ ಭೇದಿ ಮಾಡಿಕೊಳ್ಳುತ್ತಿದ್ದ. fbಯಲ್ಲಿ ನಮ್ಮ ವಿಡಿಯೋ ಶೇರ್ ಮಾಡಿ ಪ್ರಶ್ನೆ ಕೇಳಿದ ನನ್ನ ಬಗ್ಗೆ ದಾಳಿಗೆ ಕಿಡಿ ಹಚ್ಚುವ ಕುಯುಕ್ತಿ ಕೂಡ ಮಾಡಿದ್ದಾನೆ.  ಅಂಥವರ ಹೆಸರು ನಮ್ಮ ತಾಣದಲ್ಲಿ ಹಾಕಲಿಕ್ಕೂ ಅರ್ಹವಲ್ಲ . ಮೇಲಾಗಿ ಕರೆ ಮಾಡಿ  ಸಾರಿ ಅಂದು ನನ್ನ ಹೆಸರು ಬರೀಬೇಡಿ ಪ್ಲೀಸ್ ಅಂದಿದ್ದಾನೆ. ಕರಣಂ ರಮೇಶ್ ಎಂಬ ಸುಭಗ ನಮ್ಮ ಹಿತೈಷಿ  ನವೀನ್ ಸಾಗರ್ ವಾಲ್ನಲ್ಲಿ “ಪುಸ್ತಕ ಬರೆದವರು  ಪ್ರಶ್ನೆ ಕೇಳಿಸಿದ್ದಾರೆ” ಅಂದಿದ್ದಾರೆ.( ಅದ್ಯಾಕೋ ಆಮೇಲೆ ಡಿಲೀಟ್ ಆಗಿತ್ತಪ್ಪ ) ಕೈಲಾಗದೆ ಮೈಪರಚಿಕೊಳ್ಳುವ  ಕೂಪ ಮಂಡೂಕಗಳಿಗೆ ಇದಕ್ಕಿಂತ ಹೆಚ್ಚಿನ ಯೋಚನೆ ಎಲ್ಲಿಂದ ಬರಬೇಕು?

ನಿಮ್ಮ ಪ್ರೀತಿಗೆ.. 

ಸಾಹಿತಿ, ಪತ್ರಕರ್ತನಾಗಿ ಅನೇಕ ವರುಷಗಳ ಕಾಲ ಸಿನಿಮಾಗಳ ಬಗ್ಗೆ ಬರೆದು ಒಳನೋಟ ಕೊಟ್ಟಿರುವ ಜೋಗಿ ಸರ್, digitalkannada.comನ  p. ತ್ಯಾಗರಾಜ್ ಸರ್, ಹಿರಿಯ ಪತ್ರಕರ್ತ ಜಿ. ಎನ್ ಮೋಹನ್ ಸರ್ ,ಪತ್ರಕರ್ತೆ ಪ್ರೀತಿ ನಾಗರಾಜ್ ,  samachara.com ನ ಪ್ರಶಾಂತ್ ಹುಲ್ಕೋಡ್,ಅಡ್ವೋಕೇಟ್ ಅಂಜಲಿ ರಾಮಣ್ಣ, ವಿT ನ್ಯೂಸ್ ರಾಘವೇಂದ್ರ, ವಿಶ್ವವಾಣಿಯ ನವೀನ್ ಸಾಗರ್, ಪ್ರಜಾ ಟೀವಿಯ ಜ್ಯೋತಿ ಇರ್ವತ್ತೂರು ,ಪತ್ರಕರ್ತ ರವಿ ಕುಲ್ಕರ್ಣಿ ,ಬರಹಗಾರ   ಸರ್ವಸಮರ್ಥ  ಸುವರ್ಣ ನ್ಯೂಸ್ , ಪಬ್ಲಿಕ್ ಟಿವಿ, ಸುದ್ದಿ ಟಿವಿ  ಬಳಗದ  ಗೆಳೆಯ ಗೆಳತಿಯರಿಗೆ  ಹೀಗೆ.. ಇನ್ನು ಅನೇಕ  ಸ್ನೇಹಿತರ ಬೆಂಬಲಕ್ಕೆ ಋಣಿ.

ಅಣ್ಣಾ ಅಂದರಷ್ಟೇ ಸಾಲದು

20170105_152234 ಒಂದು ವಿಷಯ,ವ್ಯಕ್ತಿಯ  ಬಗ್ಗೆ ಒಬ್ಬೊಬ್ಬರ ಅಭಿಪ್ರಾಯವೂ ಒಂದೊಂದು ರೀತಿಯದು. ಇರಲಿ. ಬಹುತೇಕ  ಎಲ್ಲ ರೀತಿಯ ಪ್ರತಿಕ್ರಿಯೆಗಳನ್ನು ನೋಡಿದ್ದೇನೆ. ಅದಕ್ಕೆ ನನ್ನ ತಕರಾರಿಲ್ಲ. ಆದರೆ ಕಲಾವಿದರನ್ನ ನೀವು ದೇವ ಮಾನವರಾಗಿರಿ. ತಪ್ಪೇ ಮಾಡ್ಬೇಡಿ . ಮಾಡಿದ್ರು ಹೇಳಬೇಡಿ ಅಂತ ಕಟ್ಟಿ ಹಾಕುವುದಕ್ಕೆ ನೀವ್ಯಾರು? ನಮ್ಮ ನಿಮ್ಮಂತೆ ಅವರೂ ಮನುಷ್ಯರಲ್ಲವೇ ? ಶಿವಣ್ಣ ರಾಜ್ ಲೀಲಾ ವಿನೋದ ಸಂಬಂಧಿತ ಪ್ರಶ್ನೆಗೆ  ಸಮಾಧಾನದಿಂದ ಉತ್ತರ ಕೊಟ್ಟು  ಪ್ರಬುದ್ಧತೆ ಮೆರೆದಿದ್ದಾರೆ. ಗೌರವ ಹೆಚ್ಚಿಸಿಕೊಂಡಿದ್ದಾರೆ. ನಾನು ಕೇಳಿದ ಪ್ರಶ್ನೆಯಲ್ಲಿ ವಿಕೃತಿಯಾಗಲಿ, ಕುಹಕವಾಗಲಿ ಇರಲಿಲ್ಲವೆಂಬುದು ಅವರಿಗೆ ಅರ್ಥವಾಗಿದೆ. ಇನ್ನು ಮುಂದಾದರು ಬೊಗಳೆ ದಾಸರು, ಭಟ್ಟಂಗಿಗಳು, ಅಂಧಾಭಿಮಾನಿಗಳು ಶಿವಣ್ಣನ ವಿನಯ, ವಿಧೇಯತೆ, ಸಮಯ ಪಾಲನೆ, ಶ್ರದ್ಧೆಯನ್ನು ಕಲಿಯಲಿ.  

 

 

 

 

 

-Ad-

3 COMMENTS

  1. ಅಲೆ ಜೊತೆ ಮಾತ್ರಾ ಈಜುತ್ತಾ ಇದ್ರೆ ಪತ್ರಿಕೋದ್ಯಮ ಆಗುತ್ತಾ..??

Leave Your Comments