ಮಾನ್ವಿತಾ ಹರೀಶ್ ಗೆ ಶಿವಣ್ಣ ರಕ್ತ ಮೆತ್ತಿದ್ದು ಯಾಕೆ?

ಶಿವಣ್ಣ ಯಾರ ಮುಂದೆಯೂ ಗತ್ತು ಗಮ್ಮತ್ತು  ತೋರಿಸಿದವರಲ್ಲ. ನಿರ್ಮಾಪಕರ ನಟ ಎಂದೇ ಕರೆಸಿಕೊಂಡವರು.  ಯಾರಿಗೂ ತೊಂದರೆ ಕೊಟ್ಟ ಸುದ್ದಿಗಳೂ  ಇಲ್ಲ. ಅದರಲ್ಲೂ ಜೊತೆಯಲ್ಲಿ ನಟಿಸುವವರ ಜೊತೆ ಫ್ರೆಂಡ್ಲಿಯಾಗಿ ವರ್ತಿಸುವುದು ಅವರ ದೊಡ್ಡ ಗುಣ. ಅದಕ್ಕೆ ಸಾಕ್ಷಿ ಇಲ್ಲಿದೆ.
ರಕ್ತ ಮೆತ್ತಿದ್ದೆಲ್ಲಿ ?
ಟಗರು ಶೂಟಿಂಗ್ ಸೆಟ್ ನಲ್ಲಿ ನಾಯಕ ನಟಿ ಮಾನ್ವಿತಾ ಹರೀಶ್ ಗೆ ಹಣೆಯಲ್ಲಿ ಗಾಯ ಆಗಿ ರಕ್ತ ಸುರಿಯುವ ಸನ್ನಿವೇಶದ ಶೂಟಿಂಗ್ ನಡೀತಾ ಇತ್ತು.. ಸಾಮಾನ್ಯವಾಗಿ ಮೇಕಪ್ ಮಾಡುವವರು ಮೇಕಪ್ ಮಾಡಿ ರಕ್ತ ಸುರಿಯುತ್ತಿರುವಂತೆ ತೋರಿಸುತ್ತಾರೆ. ಆದರೆ ಶಿವಣ್ಣ ತಾನೇ ಮಾನ್ವಿತಾಗೆ ಮೇಕಪ್ ಮಾಡಿ ಮತ್ತೆ ತನ್ನ ಸರಳತೆಯನ್ನು ಮೆರೆದಿದ್ದಾರೆ. ತನಗೆ ಮೇಕಪ್ ಮಾಡಿದ್ದನ್ನು ನೋಡಿದ ಮಾನ್ವಿತಾರಂತೂ ಫುಲ್ ಖುಷ್. ಜೊತೆಗೆ ಶಿವಣ್ಣರಂಥ ದೊಡ್ಡ ನಟ ತನಗೆ ಮೇಕಪ್ ಮಾಡ್ತಿರೋದು ನೋಡ್ತಾ ಸಂತೋಷದಿಂದ ಕಣ್ಣೀರು ಮಿಡಿದಿದ್ದಾರೆ ಮಾನ್ವಿತಾ .
 ಇಲ್ಲಿದೆ ನೋಡಿ ವೀಡಿಯೋ

-Ad-

Leave Your Comments