ಟಿಪ್ಪರ್’ನಲ್ಲಿ ವ್ಹೀಲಿಂಗ್ ಮಾಡಿದ ಸಾಹಸಿ ಶಿವಣ್ಣ

ಶಿವಣ್ಣ ಮೊದಲಿಂದಲೂ ಅಷ್ಟೇ. ಎಲ್ಲಕ್ಕೂ ಸೈ ಅನ್ನೋರು. ಆಗುವುದಿಲ್ಲ ಅನ್ನೋದು ಅವರ ಸ್ವಭಾವವೇ ಅಲ್ಲ. ಹಾಗಾಗಿಯೇ ಅವರನ್ನು ನಿರ್ಮಾಪಕರ ನಟ ಎಂದೇ ಕರೆಯುತ್ತಾರೆ. ಅದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಟಗರು ಸಿನಿಮಾದ ಸೆಟ್ ನಲ್ಲಿ ನಡೆದ ಈ ಘಟನೆ ಏನು ಅಂತ ತಿಳಿದರೆ ನೀವೂ ಥ್ರಿಲ್ ಆಗುತ್ತೀರಿ.

ದುನಿಯಾ ಸೂರಿ ನಿರ್ದೇಶನದ ಟಗರು ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಧನಂಜಯ, ವಶಿಷ್ಟ ಸಿಂಹ ವಿಲನ್ ಗಳಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಆ್ಯಕ್ಷನ್ ಗಳದೇ ರಾಜ್ಯಭಾರ. ಶಿವಣ್ಣ ಇಲ್ಲಿ ಸೂಪರ್ ಕಾಪ್ ಆಗಿ ನಟಿಸುತ್ತಿರುವುದರಿಂದ ರೌಡಿಗಳನ್ನು ಬೆನ್ನಟ್ಟಿ ಚರ್ಮ ಸುಲಿಯುವ ಕೆಲಸ ಮಾಡಲೇಬೇಕು.

ಅವತ್ತು ಇದ್ದಿದ್ದು ಜಾತ್ರೆಯಲ್ಲಿ ಫೈಟಿಂಗ್ ಸೀನು. ಜಾತ್ರೆಯ ನಂತರ ಫೈಟಿಂಗ್ ನಡೆಯುತ್ತದೆ. ಆ ಫೈಟಿಂಗ್ ನಲ್ಲಿ ಶಿವಣ್ಣ ಟಿಪ್ಪರ್ ಓಡಿಸಿಕೊಂಡು ಬರಬೇಕು. ಅಷ್ಟೇ ಅಲ್ಲ, ಎರಡೇ ಚಕ್ರದಲ್ಲಿ ಟಿಪ್ಪರ್ ಓಡಿಸುವ ಸಾಹಸವನ್ನೂ ಮಾಡಬೇಕು. ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ರೆಡಿಯಾಗಿದ್ದರು. ಆದರೆ ಶಿವಣ್ಣ ಟಿಪ್ಪರ್ ನಲ್ಲಿ ವ್ಹೀಲಿಂಗ್ ಮಾಡುತ್ತಾರೋ ಇಲ್ಲವೋ ಅನ್ನುವುದು ಗೊತ್ತಿಲ್ಲ. ಅನುಮಾನದಿಂದಲೇ ಕೇಳಿದರೆ ಶಿವಣ್ಣ ಥಟ್ ಅಂತ ಸಿದ್ಧರಾಗಿದ್ದಾರೆ. ಹೇಳಿದ್ದಷ್ಟೇ ಅಲ್ಲ ಟಿಪ್ಪರ್ ಓಡಿಸಿದ್ದಾರೆ. ವ್ಹೀಲಿಂಗ್ ಮಾಡಿದ್ದಾರೆ. ಅದನ್ನು ನೋಡಿ ಅಲ್ಲಿದ್ದವರೆಲ್ಲಾ ಫುಲ್ ಖುಷ್.

ಇಂಟರೆಸ್ಟಿಂಗ್ ಅಂದ್ರೆ ಶಿವಣ್ಣ ಮೊದಲಿಂದಲೂ ಮಾಸ್ಟರ್ ಡ್ರೈವರ್. ಮಾರುತಿ ಸುಝುಕಿ ಮೊತ್ತ ಮೊದಲ ಕಾರು ಬಿಡುಗಡೆ ಮಾಡಿದಾಗ ಅದನ್ನು ಡ್ರೈವರ್ ಮಾಡಿದ ಕೆಲವೇ ಕೆಲವು ಮಂದಿಯಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರಂತೆ.
ಅದೇನೇ ಇರಲಿ ಶಿವಣ್ಣನ ಈ ಟಿಪ್ಪರ್ ಸಾಹಸವನ್ನು ಮೆಚ್ಚಲೇಬೇಕು.

-Ad-

Leave Your Comments