ಶಿವನ ಸನ್ನಿಧಿಯಲ್ಲಿ ಶಿವರಾಜ್ ಕುಮಾರ್ !

 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ನಿನ್ನೆ ಅಂದ್ರೆ ಮಂಗಳವಾರ ಬೆಳಿಗ್ಗೆ  ಕೊಳ್ಳೇಗಾಲದ  ಶಿವನಸಮುದ್ರದಲ್ಲಿರುವ ರಂಗನಾಥ ದೇವಾಲಯಕ್ಕೆ  ಭೇಟಿ ನೀಡಿದ್ದರು . ಅಲ್ಲಿ  ವಿಶೇಷ ಪೂಜೆಯನ್ನೂ  ಸಲ್ಲಿಸಿದರು.
ಶಿವನಸಮುದ್ರದಲ್ಲಿರುವ ರಂಗನಾಥನ ಗುಡಿ , ಈಶ್ವರನ ದೇವಸ್ಥಾನ ಮತ್ತು   ಮಾರಮ್ಮನ ಗುಡಿಗೆ ತೆರಳಿ ಭಕ್ತಿಯ ನೈವೇದ್ಯ ಅರ್ಪಿಸಿದರು .   ಕಳೆದ 10 ವಷ೯ಗಳಿಂದ  ವಿಶೇಷ ಪೂಜೆ ಸಲ್ಲಿಸುವ ಪರಿಪಾಠವನ್ನು ನಡೆಸಿಕೊಂಡು ಬಂದಿದ್ದಾರೆ  ನಟ ಶಿವರಾಜ್ ಕುಮಾರ್ .
ಮೊದಲು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀಚಕ್ರವಿರುವ ರಂಗನಾಥ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸಿ  ವಿಶೇಷ ಪೂಜೆ ಸಲ್ಲಿಸಿದರು. ಬಳಿಕ  ಈಶ್ವರ ಹಾಗೂ ಶಿವನಸಮುದ್ರದ ದೇವಾಲಯಗಳಿಗೆ ಹೋಗಿ ಅಲ್ಲಿಯೂ ಕೂಡ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮೂರಿಗೆ ಬಂದ ನೆಚ್ಚಿನ ನಟನನ್ನು ಸುತ್ತುವರಿದ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಸನ್ಮಾನಿಸಿ, ಸಂಭ್ರಮಿಸಿದರು.  ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ದೇವಸ್ಥಾನದಲ್ಲೇ ಊಟದ  ವ್ಯವಸ್ಥೆ ಏಪ೯ಡಿಸಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳ ಜೊತೆಯಲ್ಲೆ ಭೋಜನ ಸೇವಿಸಿ , ನಂತರ ಬೆಂಗಳೂರಿಗೆ ವಾಪಾಸಾದ್ರು.
  ಪತ್ನಿ ಗೀತಾ ಶಿವರಾಜ್ ಕುಮಾರ್., ನಿಮಾ೯ಪಕ ಶ್ರೀಕಾಂತ್  ಇನ್ನೂ ಮುಂತಾದವರು  ಶಿವರಾಜ್ ಕುಮಾರ್ ಜೊತೆಗಿದ್ದು ಪೂಜಾ ಕೈಂಕರ್ಯದಲ್ಲಿ ಭಾಗಿಗಳಾದ್ರು .
-Ad-

Leave Your Comments