ವಿಧ್ವತ್ ನ ಈ ಸ್ಥಿತಿಗೆ ತಂದವರಿಗೆ ನಾಚಿಕೆಯಾಗ್ಬೇಕು -ಶಿವರಾಜಕುಮಾರ್

ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿ ವಿದ್ವತ್ ನನ್ನು ನೋಡಲು ಸ್ಯಾಂಡಲ್ ವುಡ್ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಆಗಮಿಸಿದ್ರು. ಮಗಳ ಜೊತೆ ಮಲ್ಯ ಆಸ್ಪತ್ರೆ ಬಂದಿದ್ದ ಶಿವಣ್ಣ ಅವರಿಗೆ ವೈದ್ಯರು ಭೇಟಿ ಮಾಡಲು ಅವಕಾಶ ಕಲ್ಪಿಸಲಿಲ್ಲ. ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಕುಟುಂಬ ಸ್ನೇಹಿತರ ಮಗ ವಿದ್ವತ್, ತೀವ್ರ ಜ್ವರದಿಂದ ಬಳಲುತ್ತಿದ್ದು, ಇನ್ಫೆಕ್ಷನ್ ಆಗುವ ಭೀತಿಯಿಂದ ಒಳಪ್ರವೇಶಕ್ಕೆ ಅವಕಾಶ ನೀಡದೆ ಹೊರಗಿನಿಂದಲೇ ಗ್ಲಾಸ್ ಮೂಲಕ ನೋಡಲು ಅವಕಾಶ ಮಾಡಿಕೊಡಲಾಯ್ತು.
ವಿದ್ವತ್ ಪರಿಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ ಶಿವರಾಜ್ ಕುಮಾರ್, ವಿದ್ವತ್ ನನ್ನು ನೇರವಾಗಿ ನೋಡಲು ವೈದ್ಯರು ಅವಕಾಶ ಮಾಡಿಕೊಡಲಿಲ್ಲ. ಇನ್ಫೆಕ್ಷನ್ ಆಗುವ ಹಿನ್ನಲೆ ದೂರದಿಂದಲೇ ನೋಡಿಕೊಂಡು ಬಂದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ನಮ್ಮ ಕುಟುಂಬ ಸ್ನೇಹಿತರಾದ ವಿದ್ವತ್ ತಂದೆ ಲೋಕನಾಥನ್ ದಂಪತಿಗೆ ಸಮಾಧಾನ ಹೇಳಿದ್ದೇನೆ ಅಂದ್ರು.  ಬೆಂಗಳೂರು ಶಾಂತಿಪ್ರಿಯ ನಗರ ಅಂತಾರೆ, ಆದ್ರೆ ಇಲ್ಲಿ ಏನಾಗ್ತಿದೆ..? ಎಂದು ಪ್ರಶ್ನಿಸಿದ ಶಿವಣ್ಣ, ನಮ್ಮ ಮನೆಯ ಪೂಜೆಯಲ್ಲಿ ವಿದ್ವತ್ ನ ನೋಡಿದ್ದೆ.. ಅವನ್ನನ್ನು ಈ ಸ್ಥಿತಿಗೆ ತಂದವರಿಗೆ ನಾಚಿಕೆ ಆಗ್ಬೇಕು ಅಂದ್ರು. ನನ್ನ ಕುಟುಂಬ ನನಗೆ ಎಷ್ಟು ಮುಖ್ಯನೋ ಹಾಗೇಯೆ ಒಬ್ಬ ಕೂಲಿ ಕಾರ್ಮಿಕನಿಗೂ ಅವನದ್ದೇ ಆದ ಸಂಸಾರವಿರುತ್ತೆ, ಕಾನೂನು ಎದುರು ವಿಐಪಿ, ಎಂಎಲ್ಎ , ಬಡವರು ಎಲ್ಲರೂ ಸಮಾನರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹ ಮಾಡಿದ್ರು.
ಇನ್ನೂ ನಟ ಶಿವರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬಿಜೆಪಿ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಾಜಿ ಸಚಿವ ಗಾಲಿ ಜನರ್ದನ ರೆಡ್ಡಿ ಮಲ್ಯ ಆಸ್ಪತ್ರೆಯಿಂದ ಹೊರ ಬರುತ್ತಿದ್ರು. ಈ ವೇಳೆ ಇಬ್ಬರು ನಾಯಕರು ಶಿವಣ್ಣನಿಗೆ ಕೈಮುಗಿದರು, ಬಳಿಕ ಶ್ರೀರಾಮುಲು ಶಿವಣ್ಣನ  ಕಾಲಿಗೆ ಬೀಳಲು ಮುಂದಾದರು.  ಕೂಡಲೆ ಕಾಲಿಗೆ ಬೀಳದಂತೆ ನಟ ಶಿವರಾಜ್ ಕುಮಾರ್ ತಡೆದರು.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments