ಬಿಗ್ ಬಾಸ್ ನಿಂದ ಹೊರ ಬಿದ್ದ ಶೃತಿ ಪ್ರಕಾಶ್!

ಈ ಬಾರಿಯ ಕಡೇಯ ಎಲಿಮಿನೇಷನ್ ನಲ್ಲಿ ಶೃತಿ ಪ್ರಕಾಶ್ ಹೊರ ಬಿದ್ದಿದ್ದಾರೆ. ಅದರೊಂದಿಗೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ತಮ್ಮ ಆಟ ಮುಗಿಸಿದ್ದಾರೆ.

ನಿನ್ನೆಯಷ್ಟೇ ಅನುಪಮಾ ಗೌಡ  ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ.

ಆರಂಭದ ದಿನಗಳ ಟಾಸ್ಕ್ ಗಳಲ್ಲಿ ಪುರುಷ ಸದಸ್ಯರಿಗೆ ತೊಡೆ ತಟ್ಟುವಂತಹ ಪೈಪೋಟಿ ನೀಡುತ್ತಿದ್ದ ಶೃತಿ ಪ್ರಕಾಶ್, ಕ್ರಮೇಣ ಎಲ್ಲೋ ಕಳೆದು ಹೋದವರಂತೆ ಕಂಡರು. ಟಾಸ್ಕ್ ನಲ್ಲಿನ ಪ್ರದರ್ಶನಕ್ಕಿಂತ ಜೆಕೆ ಹಾಗೂ ಚಂದನ್ ನಡುವಣ ವದಂತಿಗಳಿಗೆ ಹೆಚ್ಚು ಚರ್ಚೆಯಾದರು. ಶೃತಿ ಅಂತಿಮ ಹಂತಕ್ಕೆ ಹೋಗುವ ಸ್ಪರ್ಧಿಯಾಗಿದ್ದರು, ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕೊರತೆಯಿಂದ ಈಗ ಅಂತಿಮ ಹೆಜ್ಜೆಯಲ್ಲಿ ಮುಗ್ಗರಿಸಿದ್ದಾರೆ ಅಂತಲೇ ಹೇಳಬಹುದು.

ಇನ್ನು ತನ್ನ ಆಸೆಯಂತೆ ನಿವೇದಿತಾ ಅಂತಿಮ ಐಐವರಲ್ಲಿ ಸ್ಥಾನ ಪಡೆದಿದ್ದು, ಘಟಾನುಘಟಿ ಸ್ಪರ್ಧಿಗಳನ್ನೇ ಮಣಿಸಿ ಅಂತಿಮ ಹಂತದವರೆಗೆ ಬಂದಿದ್ದಾರೆ. ಆರಂಭದಲ್ಲಿ ತನ್ನ ಕನ್ನಡ ಉಚ್ಛಾರಣೆಯಿಂದ ಹಾಸ್ಯಕ್ಕೊಳಗಾಗಿದ್ದ ನಿವೇದಿತಾ ನಂತರ ಗೊಂಬೆ ಎಂದೇ ಹೆಸರು ಪಡೆದರು. ಕಿರಿಯ ವಯಸ್ಸಿನಲ್ಲೇ ಇತರ ಸದಸ್ಯರಿಗಿಂತ ಪ್ರಬುದ್ಧತೆ ತೋರಿದ್ದು ಈಕೆಯ ಪ್ಲಸ್ ಪಾಯಿಂಟ್ ಅಂತಿಮ ಮೂವರಲ್ಲಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.

-Ad-

Leave Your Comments