ತುಂಬು ಗರ್ಭಿಣಿ ಶ್ವೇತ ಶ್ರೀವತ್ಸ ಹೊಟ್ಟೆಯ ಮೇಲೆ ಏನು ಮಾಡಿಕೊಂಡಿದ್ದಾರೆ ಗೊತ್ತಾ?

ಒಂದು ಹೆಣ್ಣಿಗೆ ತಾನೂ ತಾಯಿಯಾಗುತ್ತಿದ್ದೇನೆಂದರೆ ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ತಾಯಿಯಾಗುತ್ತಿದ್ದೇನೆಂದು ಗೊತ್ತಾದ ತಕ್ಷಣದಿಂದ ಮಗು ಹುಟ್ಟುವವರೆಗೂ ಆ ಮಗುವಿನ ಬಗ್ಗೆಯೇ ಯೋಚಿಸುತ್ತಾ ತಾನು ತಾಯಿಯಾಗಿರುವ ಅನುಭವವನ್ನು ಆಸ್ವಾದಿಸುತ್ತಾಳೆ. ಆ ತಾಯ್ತನದ ಅನುಭವವನ್ನು ಮತ್ತಷ್ಟು ವಿಶೇಷ ರೀತಿಯಲ್ಲಿ ಆಸ್ವಾದಿಸಲು ನಟಿಯೊಬ್ಬರು ಮುಂದಾಗಿದ್ದಾರೆ.

ಹೌದು, ನಟಿ ಶ್ವೇತ ಶ್ರೀವತ್ಸ ತಮ್ಮ ಹೊಟ್ಟೆಯ ಮೇಲೆ ಮಗುವೊಂದು ಮಲಗಿರುವ ರೀತಿ ಚಿತ್ರವನ್ನು ಬರೆಸಿಕೊಂಡು ಸಂತಸ ಪಟ್ಟಿದ್ದಾರೆ. ಮಗು ಗರ್ಭದಲ್ಲಿದ್ದಾಗ ಯಾವ ರೀತಿ ಇರುತ್ತೋ ಆ ಮಾದರಿಯಲ್ಲಿ ಈ ಪೇಂಟಿಂಗ್ ಮಾಡಲಾಗಿದೆ. ಇದರ ಯೋಚನೆ ಮೊದಲು ಹೊಳೆದಿದ್ದು ಶ್ವೇತ ಅವರ ಪತಿ ಅಮಿತ್ ಗೆ. ಅದರಂತೆ ಶ್ವೇತ ಅವರು ತಮ್ಮ ಹೊಟ್ಟೆಯ ಮೇಲೆ ಮಗುವಿನ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ.

ಶ್ವೇತ ಅವರು ಮಾಡಿಸಿಕೊಂಡಿರುವುದು ಬೆಲ್ಲಿ ಪೇಂಟಿಂಗ್. ಈ ಪೇಂಟಿಂಗ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರ ಕುಂಚದಲ್ಲಿ ಅರಳಿದ್ದು, ಸತತ 6 ಗಂಟೆಗಳ ಕಾಲ ಸಮಯ ತೆಗೆದುಕೊಂಡು ಈ ಚಿತ್ರ ಬಿಡಿಸಿದ್ದಾರೆ. ಈ ಮೊದಲು ಶ್ವೇತ ತಾಯಂದಿರ ದಿನದಂದೂ ಗರ್ಭಿಣಿಯಾಗಿದ್ದರೂ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.

ನಿಜಕ್ಕೂ ಇದೊಂದು ಸಂತಸದ ಕ್ಷಣ. ತಾಯಿ ಮತ್ತು ಮಗುವಿಮ ಅನುಬಂಧವನ್ನ ಬಿಂಬಿಸೋ ಕಲೆ ನಾನೂ ಮಾಡಿದ್ದೇನೆ. ತಾಯಿ ಹಾಗೂ ಮಗುವಿಗೆ ತೊಂದರೆ ಆಗದಂತಹ ಬಣ್ಣ ಉಪಯೋಗಿಸಿ ಪೇಂಟಿಂಗ್ ಮಾಡಿದ್ದೇವೆ. ಪೇಂಟಿಂಗ್ ನೋಡಿ ಶ್ವೇತ ಹಾಗೂ ಅಮಿತ್ ಸಂತಸ ಪಟ್ಟಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಬಾದಲ್ ನಂಜುಂಡಸ್ವಾಮಿ ಹೇಳಿದ್ದಾರೆ.

-Ad-

Leave Your Comments