ಸಿಹಿಕಹಿ ಚಂದ್ರು ಮಾತೃ ಭಾಷೆ ಯಾವುದು..? ಕನ್ನಡ ಅಲ್ವಾ..?

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಸಿಹಿಕಹಿ ಚಂದ್ರು ಹಲವಾರು ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಕನ್ನಡ ಸಿನಿಪ್ರೇಕ್ಷರ ಮನಗೆದ್ದಿದ್ದಾರೆ.. ಆದ್ರೆ ಅವರ ಮಾತೃ ಭಾಷೆ ಬಗ್ಗೆ ಕನ್ನಡಿಗರು ಯಾವತ್ತೂ ಪ್ರಶ್ನೆ ಮಾಡಿರಲಿಲ್ಲ, ಕೇಳಿರಲೂ ಇಲ್ಲ. ಇವತ್ತು ಬಿಗ್ ಬಾಸ್ ನಲ್ಲಿ ಒಂದು ಟಾಸ್ಕ್ ಇತ್ತು. ಅದರಲ್ಲಿ ಒಬ್ಬೊಬ್ಬ ಸ್ಪರ್ಧಿಗೂ ಪ್ರಿಯವಾದ ವಸ್ತುಗಳನ್ನು ಅವರ ಮನೆಯಿಂದಲೇ ತರಿಸಿದ್ದ ಬಿಗ್ ಬಾಸ್ ತಂಡ, ಸ್ಪರ್ಧಿಗಳನ್ನು ಭಾವನಾತ್ಮಕವಾಗಿ ಕಟ್ಟಿಡುವ ಪ್ರಯತ್ನ ಮಾಡಿದ್ರು. ತಮ್ಮ ಉದ್ದೇಶ ಏನು ಹೊಂದಿದ್ದರು ಅದರಲ್ಲಿ ಬಿಗ್ ಬಾಸ್ ಸಂಪೂರ್ಣವಾಗಿ ಯಶಸ್ಸು ಕೂಡ ಸಾಧಿಸಿದ್ರು. ಆ ವೇಳೆ ಸಿಹಿಕಹಿ ಚಂದ್ರು ಯಾವ ಭಾಷೆಯವರು, ಕನ್ನಡ ಅಲ್ವಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಎದುರಾಯ್ತು..

ಯಾವ ಸ್ಪರ್ಧಿಗೆ ಏನು ಇಷ್ಟ ಗೊತ್ತಾ..?

ಇಷ್ಟದ ವಸ್ತುಗಳನ್ನು ಮಾತ್ರನೇ ಬಿಗ್ ಬಾಸ್ ತಂಡ ತರಿಸಿರಲಿಲ್ಲ.. ಆದ್ರೆ ಯಾವ ವಸ್ತುವನ್ನ ನೋಡಿದ್ರೆ ಯಾರು ಭಾವನಾತ್ಮಕವಾಗಿ ಸಿಕ್ಕಿ ಬೀಳ್ತಾರೆ ಅನ್ನುಸುತ್ತೋ ಅಂತ ವಸ್ತುಗಳನ್ನು ತರಿಸಿದ್ರು.. ಅದರಲ್ಲಿ ದಿವಾಕರ್ ಸೇಲ್ಸ್ ಹೋಗಬೇಕಾದ್ರೆ ಕಾಯಂ ಆಗಿ ತೆಗೆದುಕೊಂಡು ಹೋಗುವ ಬ್ಯಾಗ್, ತಮ್ಮ ಶಾಲೆಯಲ್ಲಿ ನಡೆದಿದ್ದ ಕಾಂಪಿಟೇಷನ್ ನಲ್ಲಿ ಅಮ್ಮ ಡಿಸೈನ್ ಮಾಡಿದ್ದ ಡ್ರೆಸ್ ನಿಂದ ಗಳಿಸಿದ್ದ ಪ್ರಶಸ್ತಿ ನೋಡಿ ನಿವೇದಿತ ಗೌಡ ಖುಷಿಯಾದ್ರು.ಕೃಷಿ ತನ್ನ ಪಾರ್ಟ್ನರ್ ಟೆಡ್ಡಿಬೇರ್ ನೋಡಿ ಭಾವುಕರಾದ್ರು, ಆಶಿತಾ ಬಾಲಿಯಿಂದ ತನ್ನ ತಂಗಿಗಾಗಿ ತಂದಿದ್ದ ಗಿಫ್ಟ್ ನೋಡಿ ಕಣ್ಣೀರಿಟ್ರು.. ಇನ್ನೂ ನಟ ಜೆಕೆ ಕ್ರಿಕೆಟ್‌ ಟೂರ್ನಿಮೆಂಟ್ ನಲ್ಲಿ ಗೆದ್ದಿದ್ದ ಶೀಲ್ಡ್ ನೋಡಿ ಖುಷಿಯಾದ್ರು..ರಿಯಾಜ್ ತಮ್ಮ ಪತ್ನಿಗಾಗಿ ಕೊಡಿಸಿದ್ದ ವಸ್ತು ನೋಡಿ ಕಣ್ಣೀರಾದ್ರು.ಇನ್ನೂ ಈಗಾಗಲೇ ತಮ್ಮ ತಂದೆಯ ನೆನಪಿಗಾಗಿ ಪಾಲೀಶ್ ಬ್ರಷ್ ಇಟ್ಟುಕೊಂಡಿದ್ದೇನೆ ಎಂದಿದ್ದ ಜಯಶ್ರೀನಿವಾಸನ್ ಅಪ್ಪನ ನೆನಪಿನಲ್ಲಿ ಕಣ್ಣೀರಿಟ್ರು.ಜಗನ್ ಅಮ್ಮನಿಗೆ ಮಾಡಿಸಿಕೊಟ್ಟ ಓಲೆ, ಉಂಗುರ ನೋಡಿ ನೆನಪಾದ್ರು. ಚಂದನ್ ಬಾಲ್ಯದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ನಲ್ಲಿ ಸ್ವಾಮಿ ವಿವೇಕಾನಂದ ಆಗಿದ್ದನ್ನು ನೆನಪು ಮಾಡ್ಕೊಂಡ್ರು.ಅನು ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಇರುವ ವಸ್ತು ನೋಡಿ ಕಣ್ಣೀರು ಸುರಿಸಿದ್ರು..ಆ ವೇಳೆ ಚಂದ್ರು ಭಾಷೆ ಬಗ್ಗೆ ಅನುಮಾನ ಮೂಡುವ ಘಟನೆ ನಡೀತು.

ಕನ್ನಡ ಮಾತನಾಡುವ ಜನರು ಯಾವುದಾದರೂ ಪ್ರೀತಿಯಿಂದ ಹೇಳುವಾಗ ತಮ್ಮ ಮಾತೃಭಾಷೆಯಲ್ಲಿ ಹೇಳ್ತಾರೆ. ಯಾಕಂದ್ರೆ ನಮ್ಮ ಮಾತೃಭಾಷೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದಾಗ ತುಂಬಾ ಪರಿಣಾಮಕಾರಿ ಇರುತ್ತದೆ ಅನ್ನೋದು ಜನಜನಿತ ಸತ್ಯ ಕೂಡ ಹೌದು. ಹಾಗಾಗಿಯೇ ಯಾರಾದರೂ ಕಷ್ಟದಲ್ಲಿದ್ದಾಗ ಅವರು ತಮ್ಮ ಮಾತೃಭಾಷೆಯಲ್ಲೇ ನೋವನ್ನು ವ್ಯಕ್ತಪಡಿಸ್ತಾರೆ ಅನ್ನೊದು. ಆದ್ರೆ ಸಿಹಿಕಹಿ ಚಂದ್ರು ಗೀತಾಗೆ ಬರೆದಿದ್ದ ಪ್ರೇಮ ಕವನ ಬಿಗ್ ಬಾಸ್ ಮ್ಯೂಸಿಯಂ ಗೆ ಬಂದಿತ್ತು. ಅದರ ಬಗ್ಗೆ ಮಾತನಾಡ್ತಿರುವಾಗ ಚಂದ್ರು, ನಾನು ಗೀತಾಗೆ ತುಂಬಾ ಪ್ರೀತಿಯಿಂದ ಬರೆದ ಪ್ರೇಮ ಪತ್ರ, ಹಿಂದಿ ಭಾಷೆಯಲ್ಲಿ ಇದೆ. ಅದನ್ನು ಆಗಿನಿಂದಲೂ ರಕ್ಷಣೆ ಮಾಡಿ ಇಡಲಾಗಿದೆ ಅಂದ್ರು. ಹಾಗಿದ್ರೆ ಚಂದ್ರು ಭಾಷೆ ಯಾವುದು..? ತುಂಬಾ ಚೆನ್ನಾಗಿ ಹಿಂದಿ ಭಾಷೆ ಬಲ್ಲವರಾಗಿ ಹಿಂದಿಯಲ್ಲೇ ಪ್ರೇಮ ಕವನ ಬರೆದ್ರಾ ಅನ್ನೋ ಅನುಮಾನಗಳಿಗೆ ಅವರೇ ಉತ್ತರ ಕೊಡಬೇಕಿದೆ. ಅಥವಾ ಶನಿವಾರ ಈ ಬಗ್ಗೆ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿ ಉತ್ತರ ಪಡೆದ್ರೆ ಗೊಂದಲಕ್ಕೆ ತೆರೆ ಬೀಳುತ್ತದೆ.

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments