ಸಿಂಗರ್ ಚಂದನ್ ಶೆಟ್ಟಿ ಸರ್ಕಾರಿ ಕೆಲ್ಸಕ್ಕೆ ಸೇರ್ಕೊಂಡ್ರಂತೆ!!

ಕನ್ನಡದ ಹಾಟ್ ಫೇವರಿಟ್ ರ್ಯಾಪರ್, 3ಪೆಗ್ ಹಾಕ್ಕೊಂಡು ಚಾಕ್ಲೆಟ್ ಗರ್ಲ್ ಹಿಂದೆ ಹೋಗ್ತಿದ್ದ ಚಂದನ್ ಇವಾಗ ಸರಕಾರಿ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅರ್ಥಾತ್ “ಸರಕಾರಿ ಕೆಲಸ ದೇವರ ಕೆಲಸ” ಸಿನಿಮಾದಲ್ಲಿ ಸಕ್ಕತ್ತಾಗಿ ಹಾಡ್ತಾ ಹೆಜ್ಜೆ ಹಾಕಿದ್ದಾರೆ,
ಇವ್ರ 3ಪೆಗ್,ಚಾಕ್ಲೆಟ್ ಗರ್ಲ್ ಹಾಡುಗಳು ಸೂಪರ್ ಹಿಟ್ ಆಗಿ ಎಲ್ಲರ ಬಾಯಲ್ಲಿ, ಮೊಬೈಲ್ ನಲ್ಲಿ ನಲಿದಾಡ್ತಾ ಇದೆ. ಅದ್ರ ಲಿಸ್ಟ್ ನಲ್ಲಿ ಈಗ ಸರಕಾರಿ ಕೆಲಸ ದೇವರ ಕೆಲಸ ಸಿನೆಮಾದ “ದಾಗಲ್ಬಾಜಿ ದುನಿಯಾ ” ಅನ್ನೊ ಸೂಪರ್ ಹಾಡು ಸೇರ್ಕೊಳ್ಳೋದು ಖಚಿತ

ಇಷ್ಟಕ್ಕೂ ಯಾರದಪ್ಪಾ ಈ ಸಿನಿಮಾ?

ಕನ್ನಡದಲ್ಲಿ ಇತಿಹಾಸ ಸೃಷ್ಟಿ ಮಾಡಿದ ಜೋಗಿ ಸಿನಿಮಾದ ನಿರ್ಮಾಪಕರು, ಅಶ್ವಿನಿ ಆಡಿಯೋ ಕಂಪನಿ ಮಾಲೀಕರಾದ ಅಶ್ವಿನಿ ರಾಂಪ್ರಸಾದ್ ನಿರ್ಮಿಸುತ್ತಿರುವ ಸಿನಿಮಾ ಇದು.

ಸಿನಿಮಾದಲ್ಲಿ,ಸಂಗೀತದಲ್ಲಿ ಆಡಿ ಬೆಳೆದ ಇವರು ಸಿನಿಮಾ ಕೆಲಸ ದೇವರ ಕೆಲಸ ಅನ್ನುವಂಥವರು. ಪ್ರೀತಿ,, ಶ್ರದ್ದೆಯಿಂದ ಸಿನಿಮಾ ಮಾಡುವ ಇವ್ರಿಗೆ ಕೇಳುಗರಿಗೆ ಯಾವುದು  ಇಷ್ಟ ಆಗತ್ತೆ ಅಂತ ಅರಿಯುವ  ಕಲೆ ಕರಗತ. ಬಹಳ  ವರ್ಷದ ಗ್ಯಾಪ್ ನಂತ್ರ ಇವಾಗ ಮತ್ತೆ ನಿರ್ಮಾಣಕ್ಕೆ ಬಂದಿದ್ದಾರೆ. ಮತ್ತೊಂದು ಜೊಗಿಯನ್ನ ಸೃಷ್ಟಿಸುವ ಹಂಬಲ ಇವರದ್ದು. ಪ್ರಸ್ತುತ ರಾಜಕಾರಣದ ಭ್ರಷ್ಟ ವ್ಯವಸ್ಥೆಯನ್ನ ವಿಡಂಬನೆಯ ಮೂಲಕ ಜನಕ್ಕೆ ರಂಜನೀಯವಾಗಿ ಹೇಳ್ತಾ ಅರಿವು ಮೂಡಿಸುವ ಚಿತ್ರ ಇದು ಅಂತಾರೆ ನಿರ್ದೇಶಕ ರವೀಂದ್ರ.
ಚಿತ್ರಕ್ಕೆ ಮಠ ಗುರುಪ್ರಸಾದ್ ರ ಹಸಿ ಹಸಿ ಸಂಭಾಷಣೆ ಚಿತ್ರದ ಇನ್ನೊಂದು ಹೈಲೈಟ್. ಒಂದ್ ಸಾರಿ ನಮ್ಮ ಎಲ್ಲಾ ರಾಜಕಾರಿಣಿಗಳೂ ಮುಟ್ಟಿ ನೋಡ್ಕೊಳೊ ಥರ ಬರ್ದಿದಾರಂತೆ.
ರವಿಶಂಕರ್, ಸಂಯುಕ್ತ ಹೊರನಾಡು ಜೋಡಿ ಸಕ್ಕತ್ತಾಗಿ ವರ್ಕ್ಔಟ್ ಆಗಿದೆ. ದೊಡ್ಡ ತಾರಾಗಣ ಈ ಚಿತ್ರದಲ್ಲಿ ಇದೆ ಅಂತಾರೆ ರಾಂಪ್ರಸಾದ್

ಬೆಳ್ಳುಳ್ಳಿ ಸಾಂಗು !!

ನಿಮಗೆಲ್ಲ ಗೊತ್ತಿರಬಹುದು ಬೆಳ್ಳುಳ್ಳಿಯವ್ವ.. ಬೆಳ್ಳುಳ್ಳಿ.. ಅನ್ನೋ ಜಾನಪದ ಸೊಗಡಿನ ಹಾಡು ಉತ್ತರ ಕರ್ನಾಟಕದ ಕಡೆ ಸೂಪರ್ ಹಿಟ್ ಆಗಿತ್ತು.
ಇವಾಗ ಅದೇ ಸಾಲನ್ನ ಇಟ್ಕೊಂಡು ಒಂದ್ ಐಟಂ ಸಾಂಗ್ ಮಾಡಿದ್ದಾರೆ ಅರ್ಜುನ್ ಜನ್ಯ. ಕೇಳೋಕೆ ಮಜವಾಗಿದೆ. ಈ ಸಾಂಗ್ ಕೂಡ ಜನಮನ ಸೆಳೆಯೋದ್ರಲ್ಲಿ ಅನುಮಾನ ಇಲ್ಲ. ಅರ್ಜುನ್ ಜನ್ಯ ಮಸ್ತ್ ಮೋಡಿ ಮಾಡಿದ್ದಾರೆ.

_ವಿನಯ್ ಕಸ್ವೆ

-Ad-

Leave Your Comments