ಸಾಧಾರಣವಾಗಿ ಸಲ್ಮಾನ್, ಮೀಡಿಯಾ ಕ್ಯಾಮೆರಾಗಳ ಮುಂದೆ ಎಮೋಷನ್ ಆಗುವುದಿಲ್ಲ. ಆದರೆ, ಒಂದೆಡೆ ಕ್ಯಾಮೆರಾಗಳು ಕ್ಲಿಕ್ಕಿಸುತ್ತಿದ್ದರೂ, ಅದರ ಪರಿವೆ ಇಲ್ಲದೆ ಸಲ್ಲು ಭಯ್ಯ ಗಳಗಳನೆ ಅತ್ತರು.
ಅದಕ್ಕೆ ಕಾರಣ ಅವರ ಬಹುವರ್ಷಗಳ ಗೆಳೆಯ ರಜತ್ ಅವರ ಅಗಲಿಕೆ. ಅಷ್ಟು ಜನರು ನೆರೆದಿದ್ದರೂ ಸಲ್ಲು ಎಷ್ಟು ದುಃಖಿತರಾಗಿದ್ದರು ಎಂದರೆ, ಕೊನೆಗೆ ರಜತ್ ಸಹೋದರ ಸೂರಜ್ ಅವರೇ ಬಂದು ಸಂತೈಸಬೇಕಾಯಿತು.
ಯಾರು ರಜತ್ ಭಾರ್ಜಾತ್ಯಾ ..?
ಸಲ್ಮಾನ್ ಖಾನ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ‘ಮೈನೆ ಪ್ಯಾರ್ ಕಿಯಾ’ ಹಾಗು 1994ರ ಸೂಪರ್ ಹಿಟ್ ‘ಹಮ್ ಆಪ್ ಕೆ ಹೈ ಕೌನ್’ ಚಿತ್ರ ನಿರ್ಮಾಣ ಆಗಿದ್ದು ರಜತ್ ಭಾರ್ಜಾತ್ಯಾ ಅವರ ಮನೆತನದ ರಾಜಶ್ರೀ ಪ್ರೊಡಕ್ಷನ್ಸ್ ನಲ್ಲಿ.
ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದು ರಜತ್ ಅವರ ಸಹೋದರ ಸೂರಜ್. ಇದೇ ಗೆಳತನವೇ ಇತ್ತೀಚಿನ ಸೂಪರ್ ಹಿಟ್ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರವನ್ನು ನಿರ್ಮಿಸಿತ್ತು.
ಟ್ವಿಟರ್ ನಲ್ಲೂ ಸಕ್ರಿಯರಾಗಿರುತ್ತಿದ್ದ ರಜತ್, ಸಧ್ಯದಲ್ಲೇ ಸಲ್ಮಾನ್ ಜೊತೆ ಹೊಸ ಚಿತ್ರವೊಂದನ್ನು ನಿರ್ಮಿಸುವ ಬಯಕೆಯನ್ನು ಹೇಳಿಕೊಂಡಿದ್ದರು.
ಇತ್ತೀಚಿಗೆ ರಜತ್ ಲುಕೆಮಿಯಾದಿಂದ ಬಳಲುತ್ತಿದ್ದರು. ಒಂದು ವಾರದ ಹಿಂದೆಯೇ ಜಸ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ರಜತ್, ಜುಲೈ ೨೯ ರಂದು ಬಾಲಿವುಡ್ಡಿನ ಅಪಾರ ಅಭಿಮಾನಿಗಳನ್ನು ಅಗಲಿದ್ದರು.
ರಿತೇಶ್ ದೇಶಮುಖ್, ಬೊಮನ್ ಇರಾನಿ, ವಿವೇಕ್ ಒಬೇರಾಯ್ ಮತ್ತಿತರರು ಹಾಜರಿದ್ದರು.
ಬಾಲಿಹುಡ್ ತಜ್ಞರ ಪ್ರಕಾರ ರಜತ್ ಅವರು ಸಲ್ಮಾನ್ ಅವರ ಖ್ಯಾತಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದರು.
RIP ರಜತ್ ಭಾರ್ಜಾತ್ಯಾ