ವಿವಾಹಕ್ಕೆ ವಿದಾಯ ಹೇಳಿದ ರಜನೀಕಾಂತ್ ಪುತ್ರಿ

 ಸೂಪರ್ ಸ್ಟಾರ್ ರಜನಿಕಾಂತ ಮಗಳು ಸೌಂದರ್ಯ ಉದ್ಯಮಿ ಅಶ್ವಿನ್ ರಾಮಕುಮಾರ್ ಅವರನ್ನು   ಏಳು ವರ್ಷಗಳ ಹಿಂದೆ ಮದುವೆ ಆಗಿದ್ದರು . ಅದೀಗ ವಿಚ್ಛೇದನದಿಂದ ಕೊನೆಗೊಂಡಿದೆ.
ಚೆನ್ನೈನ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ಬೇರೆಯಾಗಲು ಆದೇಶ ನೀಡಿದೆ. ಇಬ್ಬರ ವಿಚಾರಧಾರೆಗಳು ಪರಸ್ಪರ ವಿಭಿನ್ನವಾಗಿದ್ದು ಅವರು ಬೇರೆಯಾಗಲು ನಿರ್ಧರಿಸಿದ್ದರು. ಕಳೆದ ವರ್ಷ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.  ಆದ್ರೂ ಮಾಧ್ಯಮದ ಮುಂದೆ ಮಾತ್ರ ನಾವು ಚೆನ್ನಾಗಿದ್ದೇವೆ ಎಂದೇ ಬಿಂಬಿಸಿಕೊಳ್ಳುತ್ತಿದ್ದರು .  ಈ ಮಧ್ಯೆ ನಾನು ರಜನಿಕಾಂತ್ ಮಗಳಾಗಿ ಇರುವುದನ್ನೇ ಇಷ್ಟಪಡುತ್ತೇನೆ, ಸೌಂದರ್ಯ ರಜನಿಕಾಂತ್ ಎಂದು ಗುರುತಿಸಿಕೊಳ್ಳುವುದಿಕ್ಕೆ ಇಚ್ಚಿಸುತ್ತೇನೆ ಅಂತ ಕೂಡ ಹೇಳಿಕೊಂಡಿದ್ದರು . ಇದು ಸ್ವಲ್ಪ ಅವರ ವೈವಾಹಿಕ ಜೀವನದ ಬಗ್ಗೆ  ಅನುಮಾನ ಹುಟ್ಟಿಸುವಂತಿತ್ತು. ಇದೀಗ ಕೋರ್ಟ್ ಇಬ್ಬರಿಗೂ ವಿಚ್ಛೇದನ ನೀಡಿದೆ. ಕೋರ್ಟ್ ನಿಂದ ಹೊರಬರುವಾಗ ಇಬ್ಬರು ಪರಸ್ಪರ ನಗೆ ಬೀರುತ್ತಲೇ ಬೇರೆಯಾದರು .
ಮದುವೆಯಾಗಿದ್ದು ಯಾವಾಗ ?
2010ರಲ್ಲಿ ಅತ್ಯಂತ ವೈಭವೋಪೇತವಾಗಿ ವಿವಾಹ ನೆರವೇರಿತ್ತು.  2015ರಲ್ಲಿ  ಸೌಂದರ್ಯ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.
ತೆರೆಗೆ ಬರಲಿರುವ ಹೊಸ ಚಿತ್ರ 
ಜುಲೈ 28ರಂದು ಸೌಂದರ್ಯ ನಿರ್ದೇಶಿಸಿದ ವಿಐಪಿ2 ಚಿತ್ರ ತೆರೆಕಾಣಲಿದೆ. ಚಿತ್ರದಲ್ಲಿ ಧನುಷ್ ಮತ್ತು ಕಾಜೋಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
-Ad-

Leave Your Comments