ನಟ ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಸೂಪರ್ ಗಿಫ್ಟ್ “ಸಂಹಾರ “ಟ್ರೈಲರ್ ?!

ಹಾಸ್ಯ ನಟ ಚಿಕ್ಕಣ್ಣ ಅಂದ್ರೆ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ತೆರೆಯ ಮೇಲೆ ಬರುತ್ತಿದ್ದ ಹಾಗೆ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವ ಬೊಂಬಾಟ್ ಕಲಾವಿದ ಚಿಕ್ಕಣ್ಣ . ಹಿಂದೆ ಕನ್ನಡದ ಕಣ್ಮಣಿ ರಾಜ್ ಕುಮಾರ್ ಜೊತೆಯಾಗಿ ನಟಿಸುತ್ತಾ ಅಪಾರ ಜನಮನ್ನಣೆ ಗಳಿಸಿದ್ದ ನರಸಿಂಹರಾಜು ಅವರ ಹಾಗೆ ಚಿಕ್ಕಣ್ಣ ಕೂಡ ಎಲ್ಲ ನಾಯಕ ನಂತರ ಜೊತೆಯಾಗಿ ನಟಿಸುತ್ತಾ ಅಭಿಮಾನಿಗಳನ್ನು ಗಳಿಸಿದ್ದಾರೆ .

ಇಂದು ಅವರ ಹುಟ್ಟುಹಬ್ಬ . ಅದರ ಪ್ರಯುಕ್ತವಾಗಿ ಗುರುರಾವ್ ದೇಶಪಾಂಡೆ ನಿರ್ದೇಶನದ, ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯಲ್ಲಿರುವ  ಸಂಹಾರ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಿದೆ . ಅಲ್ಲಿ ಚಿಕ್ಕಣ್ಣ ರಾಜಾಹುಲಿ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಖಡಕ್ ಆಗಿ ಅಭಿನಯಿಸಿರುವುದು ಢಾಳಾಗಿದೆ. ಚೇಷ್ಟೆ, ಕುಚೇಷ್ಟೆ ಜೊತೆಗೆ  ಒಂದೆರಡು ಗಂಭೀರವೆನಿಸುವ ಪಾತ್ರಗಳಲ್ಲೂ ಮಿಂಚಿ  ತನ್ನ ಸಹಜ ಅಭಿನಯದಿಂದ ಪ್ರೇಕ್ಷರನ್ನು ತೆರೆಯ ಮೇಲೆ ರಂಜಿಸಿರುವ ಚಿಕ್ಕಣ್ಣ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿ ಸಿನಿಪ್ರಿಯರಿಗೆ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ. ಆದರೂ ಸಿನಿಮಾ ಹೇಗಿರುತ್ತೋ ಕಾದು ನೋಡೋಣ.

ಅಪ್ಪಟ ಪ್ರತಿಭಾವಂತ ಚಿಕ್ಕಣ್ಣ ಇನ್ನಷ್ಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎನ್ನುವುದು ciniadda.com  ಬಳಗದ ಹಾರೈಕೆ .

ಸಂಹಾರ ಚಿತ್ರದ ವಿಶೇಷ ಟ್ರೈಲರ್ ಇಲ್ಲಿದೆ .

 

 

-Ad-

Leave Your Comments