ಪತಿಯ ಜತೆ ಮೂರು ತಿಂಗಳು ಮಾತಿಲ್ಲದೆ ಶ್ರೀದೇವಿ ಮಾಡಿದ್ದೇನು?

ಬಾಲಿವುಡ್ ಎವರ್ ಗ್ರೀನ್ ನಟಿ ಅಂತಲೇ ಕರೆಸಿಕೊಳ್ಳುವ ಶ್ರೀದೇವಿ ಬರೋಬ್ಬರಿ ಮೂರು ತಿಂಗಳ ಕಾಲ ತನ್ನ ಪತಿ ಬೋನಿ ಕಪೂರ್ ಜತೆ ಮಾತನಾಡಲಿಲ್ವಂತೆ. ಯಾಕೆ ಅಂತಾ ಕೇಳ್ತಿದ್ದೀರಾ ಅದಕ್ಕೆ ಉತ್ತರ ಹೀಗಿದೆ ನೋಡಿ…

ಶ್ರೀದೇವಿ ಸದ್ಯದಲ್ಲೇ ತೆರೆ ಮೇಲೆ ಬರಲಿರುವ ಮಾಮ್ ಚಿತ್ರ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರಂತೆ. ಈ ಬಗ್ಗೆ ಸ್ವತಃ ಶ್ರೀದೇವಿ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದು, ‘ಪತಿ ಬೋನಿ ಕಪೂರ್ ಗೆ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಇಷ್ಟನ್ನೇ ಹೇಳುತ್ತಿದ್ದೆ. ಮೂರು ತಿಂಗಳ ಕಾಲ ಅವರ ಜೊತೆ ಸರಿಯಾಗಿ ಮಾತೇ ಆಡಿರಲಿಲ್ಲ. ಈ ಸಮಯದಲ್ಲಿ ಚಿತ್ರದ ಕುರಿತಾಗಿ ನಿರ್ದೇಶಕ ಉದಯಾವರ್ ಜತೆ ಮಾತ್ರ ಮಾತನಾಡುತ್ತಿದ್ದೆ’ ಎಂದಿದ್ದಾರೆ.

ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದೀಕಿ, ಅಕ್ಷಯ್ ಖನ್ನಾ, ಸುಶಾಂತ್ ಸಿನ್ಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಬೋನಿ ಕಪೂರ್ ಅವರೇ ಹಣ ಹಾಕಿದ್ದಾರೆ. ಎ.ಆರ್ ರೆಹಮಾನ್ ಅವರ ಸಂಗೀತವಿರುವ ಚಿತ್ರ ಜುಲೈ 7ಕ್ಕೆ ತೆರೆ ಮೇಲೆ ಬರಲಿದೆಯಂತೆ.

-Ad-

Leave Your Comments