ಮಜಾ ಟಾಕೀಸ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಮಾನವ ಕಂಪ್ಯೂಟರ್ ಬಸವರಾಜ್

ಕನ್ನಡಿಗರ ಮನೆ ಮಾತಾಗಿರುವ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಯೊಂದು ಕರ್ನಾಟಕದ ಜನತೆಗೆ ಪರಿಚಯವಾಗಿದೆ. ಅದು ಬೇರೆಯಾರೂ ಅಲ್ಲ, ಮಾನವ ಕಂಪ್ಯೂಟರ್ ಎಂದು ಸಾಬೀತುಪಡಿಸಿರುವ ಉತ್ತರ ಕನ್ನಡ ಜಿಲ್ಲೆಯ ವಿಶೇಷ ಚೇತನ ಬಸವರಾಜ್! ಇಂದು Ciniadda.com ಈ ವಿಶೇಷ ಸಾಧಕನ ಕುರಿತು ವಿಶೇಷ ವರದಿಯನ್ನು ನಿಮಗೆ ನೀಡುತ್ತಿದೆ. ಕರ್ನಾಟಕದಲ್ಲಿ ಅನೇಕ ಜನ ಅನೇಕ ಸಾಧಕರಿದ್ದು ವಿವಿಧ ರೀತಿಯಲ್ಲಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಬಸವರಾಜ್ ತಮ್ಮ ಸಾಮರ್ಥ್ಯದಿಂದ ಈತ ಲಕ್ಷಾಂತರ ಮಂದಿ ವಿಶೇಷ ಚೇತನರಿಂದ ಹಿಡಿದು ಸಾಮಾನ್ಯರವರೆಗೂ ಸ್ಫೂರ್ತಿಯ ಚಿಲುಮೆಯಾಗಿರೋದು ವಿಶೇಷ.

ಕರ್ನಾಟಕದ ನಿಜವಾದ ಮಾನವ ಕಂಪ್ಯೂಟರ್..!

ಇವರ ಹೆಸರು ಬಸವರಾಜ್, ಮೂಲತಃ ಜಿಲ್ಲೆಯವರು. ನೀವು ಒಬ್ಬ ವ್ಯಕ್ತಿಯ ಹೆಸರು ಮತ್ತು ಅವರ ಫೋನ್ ನಂಬರ್ ಹೇಳಿ ಸುಮಾರು 10 ವರ್ಷಗಳ ಬಳಿಕ ಈ ಹೆಸರಿನ ವ್ಯಕ್ತಿ ಫೋನ್ ನಂಬರ್ ಹೇಳಿ ಅಂದ್ರೆ ತಪ್ಪಿಲ್ಲದೆ ಥಟ್ ಅಂತ ಹೇಳುವ ನೆನಪಿನ ಶಕ್ತಿ ಇವರಿಗಿದೆ. ಈಗಾಗಲೇ 10 ಸಾವಿರ ಜನರ ಫೋನ್ ನಂಬರ್ ಇವರ ಜ್ಞಾನ ಬಂಡಾರ್ ಸೇರಿದ್ದು, ಗಿನ್ನೀಸ್ ದಾಖಲೆಗೂ ಪ್ರಯತ್ನ ಮಾಡುತ್ತಿದ್ದಾರೆ.

ಏಕಲವ್ಯ ವಿದ್ಯೆ..!

ನಿಮಗೆಲ್ಲಾ ಗೊತ್ತಿರುವಂತೆ ಶಕುಂತಲ ದೇವಿಯವರನ್ನು ನಡೆದಾಡುವ ಕಂಪ್ಯೂಟರ್ ಅಂತ ಕರೆಯುತ್ತಾರೆ. ಅವರು ಕಂಪ್ಯೂಟರ್ ವೇಗದಲ್ಲಿ ಉತ್ತರ ಕೊಡ್ತಿದ್ರು ಅನ್ನೋದು ವಿಶೇಷ. ಶಕುಂತಲ ದೇವಿ ಅವರ ಬಗ್ಗೆ ತಿಳಿದುಕೊಂಡ ಬಸವರಾಜ್ ಅವರು ನಾನು ಅವರಂತೆಯೇ ಏನಾದರೂ ಸಾಧಿಸಬೇಕು ಅನ್ನೋ ಛಲದಿಂದ ಈ ಸಾಧನೆ ಮಾಡಿದ್ದಾರೆ. ತಮ್ಮ ಬಾಲ್ಯದ 8 ಈ ಚತುರತೆ ಇವರಿಗೆ ಲಭಿಸಿದೆ ಅಂತೆ. ನಾನು ಕಣ್ಣು ಕಾಣಲ್ಲ ಅಂತಾ ಬೇಸರ ಮಾಡಿಕೊಳ್ಳಲ್ಲ. ನನಗೆ ಕಣ್ಣು ಕಾಣಿಸಿದ್ರೆ ಈ ಸಾಧನೆ ಮಾಡಲು ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ಕಣ್ಣು ಕಾಣಿಸದೇ ಇದ್ದದ್ದು ನನಗೆ ವರವಾಗಿ ಪರಿಣಮಿಸಿದೆ ಅಂತ ಹೆಮ್ಮೆಯಿಂದ ಹೇಳ್ತಾರೆ..

ಕಲಾಂ ಕೈಯಿಂದ ಪ್ರಶಸ್ತಿ.. ರಾಜ್ಯದಲ್ಲೂ ಪ್ರಶಸ್ತಿ..

ಈ ಕರುನಾಡಿನ ಸಾಧಕನ ಸಾಧನೆ ಕೇಂದ್ರಕ್ಕೂ ತಲುಪಿದೆ. ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದಿದ್ದಾರೆ. ಆ ಪ್ರಶಸ್ತಿಯನ್ನು ಜನಮೆಚ್ಚಿದ ನಾಯಕ, ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಗುರು, ವಿಜ್ಞಾನಿ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕೈಯಲ್ಲಿ ಪಡೆದಿದಿರುವುದು ವಿಶೇಷ. ರಾಜ್ಯ ಸರ್ಕಾರವೂ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಆದರೆ ಯಾವುದೇ ಮಾಧ್ಯಮಗಳಲ್ಲಿ ಇವರ ಸಾಧನೆ ಬಗ್ಗೆ ಸುದ್ದಿಯಾಗಿಲ್ಲ ಅನ್ನೋದೆ ದುರ್ದೈವ.

ಪಬ್ಲಿಕ್ ಹೀರೋ.. ವೀಕೆಂಡ್ ವಿತ್ ರಮೇಶ್..!

ಪಬ್ಲಿಕ್ ಟಿವಿಯಲ್ಲಿ ಪ್ರತಿದಿನ ಪ್ರಸಾರವಾಗುವ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಬಸವರಾಜ್ ಅವರಿಗೆ ವೇದಿಕೆ ಸಿಗಲೇ ಬೇಕಿದೆ. ಖ್ಯಾತ ಪತ್ರಕರ್ತ ಹೆಚ್. ಆರ್ ರಂಗನಾಥ್ ಅವರು ವೇದಿಕೆ ಕಲ್ಪಿಸಿ ಮಾತನಾಡಿಸಿದರೆ ಲಕ್ಷಾಂತರ ಜನರಿಗೆ ಪ್ರೇರಣೆ ಈ ಬಸವರಾಜ್.. ಇನ್ನೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರಲ್ಲದವರಿಗೆ ಸ್ಥಾನ ಕೊಟ್ಟಿದ್ದಾರೆ ಅನ್ನೋ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ಶುರುವಾಗಿತ್ತು. ಬಸವರಾಜ್ ಅವರನ್ನು ಕರೆದುಕೊಂಡು ಬಂದು ಸಾಧಕರ ಸೀಟ್ ನಲ್ಲಿ ಕೂರಿಸಿದರೆ ಆ ಕಾರ್ಯಕ್ರಮಕ್ಕೆ ಒಂದು ಮೆರಗು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಎಲೆಮರೆ ಕಾಯಿಯಾಗಿದ್ದ ಬಸವರಾಜ್ ಅವರನ್ನು ವೇದಿಕೆಗೆ ಕರೆದುಕೊಂಡು ಬಂದು ಕರ್ನಾಟಕದ ಮುಂದೆ ನಿಲ್ಲಿಸಿದ ಕಲರ್ಸ್ ಕನ್ನಡದ ಮಜಾ ಟಾಕೀಸ್ ಗೆ ಒಂದು ಹ್ಯಾಟ್ಸ್ ಆಪ್ ಹೇಳಲೇ ಬೇಕು. ಏನೇ ಆಗಲಿ ನಮ್ಮ ಕರ್ನಾಟಕದ ಬಸವರಾಜ್ ದೇಶದ ಆಸ್ತಿಯಾಗಲಿ ಅದಕ್ಕೆ ಬೇಕಾದ ಮೆಟ್ಟಿಲುಗಳು ನಾವಾಗೋಣ ಏನಂತೀರಿ..?

-Ad-

Leave Your Comments