ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಸ್ಟಾರ್ ನಟರು..? 

ಈ ಮಾತು ಕರ್ನಾಟಕದ ಪಾಲಿಗೆ ಅಷ್ಟೊಂದು ಸಮಂಜಸ ಅಲ್ಲ ಅಂತಾರೆ ಅಭಿಮಾನಿಗಳು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಮೇಲೆ ಕೋಪತಾಪ ತೋರುವ ನಟರು, ಅಭಿಮಾನಿಗಳ ಮಾತನ್ನು ಸುಳ್ಳು ಮಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ಒಂದು ವೈರಲ್ ಆಗಿದೆ.
ಕೊರಳು ಪಟ್ಟಿ ಹಿಡಿದ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್ ಅಂದ್ರೆ ತುಂಬಾ ಸೈಲೆಂಟ್ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿರುವ ನಟ ಅನ್ನೋದರಲ್ಲಿ ಯಾವುದೇ ಅನುಮಾನ ವಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ವೀಡಿಯೋದಲ್ಲಿ ನಟ ರಮೇಶ್ ಅರವಿಂದ್ ವ್ಯಕ್ತಿಯೊಬ್ಬರ ಕುತ್ತಿಗೆ ಪಟ್ಟಿಗೆ ಕೈ ಹಾಕಿದ್ದಾರೆ. ಫೋಟೋ ತೆಗೆದುಕೊಳ್ಳಲು ಮುಂದಾಗುವ ಆತನ ಕುತ್ತಿಗೆ ಹಿಡಿದು ತಳ್ಳಿದ್ದಾರೆ.
ಅಭಿಮಾನಿ ಮೇಲೆ ಕೈ ಮಾಡಿದ್ರಾ ಕಮಲ್ 
ಕಮಲ್ ಹಾಸನ್ ಬಹುಭಾಷ ನಟ, ತಮಿಳುನಾಡು, ಕರ್ನಾಟಕ, ಆಂಧ್ರ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸುವ ನಟ. ಆದ್ರೆ ಆಬಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುನ್ನುಗ್ಗಿದಾಗ ಕಮಲ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಕಮಲ್ ಹಾಸನ್ ಬೆಂಗಳೂರಿಗೆ ಬಂದಿದ್ದಾಗ ನಟ ರಮೇಶ್ ಅರವಿಂದ್ ಜೊತೆ ಅಂಗಡಿ ಬಂದಿದ್ದಾಗ ಸ್ಟಾರ್ ನಟರನ್ನು ನೋಡಿದ ಅಭಿಮಾನಿಗಳು ಫೋಟೋಗಾಗಿ ರಂಪಾಟ ಮಾಡಿದ್ದಾರೆ. ಈ ವೇಳೆ ಕಪಾಳ ಮೋಕ್ಷ, ಕುತ್ತಿಗೆ ಪಟ್ಟಿ ಹಿಡಿದಿರುವ ಘಟನೆ ನಡೆದಿದೆ. ಇದಕ್ಕೆ ಇಲ್ಲಿವರೆಗೂ ಯಾರೂ ಸ್ಪಷ್ಟನೆ ನೀಡಿಲ್ಲ. ಮುಂದೆ ಯಾವ ಸ್ಪಷ್ಟನೆ ಬರಲಿದೆ ಕಾದು ನೋಡ್ಬೇಕು. ಒಟ್ಟಾರೆ ಅಭಿಮಾನಿಗಳು ಎಷ್ಟೊಂದು ಕಿರಿಕಿರಿ ಉಂಟು ಮಾಡ್ತಿದ್ದಾರೆ ಅಂದ್ರೆ ನಟ ನಟಿಯರ ತಾಳ್ಮೆ ಪರೀಕ್ಷೆ ಮಾಡ್ತಿದ್ದಾರೆ ಅಂದ್ರು ತಪ್ಪಲ್ಲ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments