ಹೊಸ ವರ್ಷದ ಮೊದಲ ದಿನ ಸ್ಟಾರ್ ಗಳು ಎಲ್ಲೆಲ್ಲಿದ್ದರು? 

ಹೊಸ ವರ್ಷದ ಹೊಸ ಬೆಳಗನ್ನು ಯಾರಾರು, ಎಲ್ಲೆಲ್ಲಿ, ಹೇಗ್ಹೇಗೆ ಕಳೆದರು ಅನ್ನುವುದು ಅವರವರ ಸ್ವಭಾವ ಮತ್ತು ವ್ಯಕ್ತಿತ್ವವನ್ನೂ ಸೂಚಿಸುತ್ತದೆ. ಹೀಗಾಗಿ ಯಾರಾರು ಎಲ್ಲೆಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರು ಎಂದು ಕುತೂಹಲದಿಂದ ನೋಡಿದಾಗ ಸಿಕ್ಕ ಉತ್ತರಗಳು ಇಂಟರೆಸ್ಟಿಂಗ್. ಒಬ್ಬರಿಗೆ ದೇವರ ದರ್ಶನದಲ್ಲಿ ನೆಮ್ಮದಿ ಸಿಕ್ಕರೆ ಮತ್ತೊಬ್ಬರಿಗೆ ಪ್ರಕೃತಿ ಮಧ್ಯೆ ಸಮಯ ಕಳೆದಿದ್ದೇ ಖುಷಿ. ಹೀಗೆ ಸೆಲೆಬ್ರಿಟಿಗಳ ಅಂತರಂಗದ ಕತೆಗಳನ್ನು ಹೇಳುವ ಫೋಟೋಗಳಿವು.    
ಸುದೀಪ್ ಮನೆಯಲ್ಲೇ..
ಕುಟುಂಬದ ಜೊತೆಗೆ ಹೊಸ ವರ್ಷವನ್ನು ಎದುರುಗೊಂಡರು ಸುದೀಪ್. ಅದಕ್ಕೆ ಸಾಕ್ಷಿ ಪತ್ನಿ ಪ್ರಿಯಾ ಮತ್ತು ಮಗಳ ಜೊತೆ ತೆಗೆದ  ಸೆಲ್ಫೀ.
ಶ್ರೀಲಂಕಾದ ಸಮುದ್ರ ತೀರದಲ್ಲಿ ಸಂಯುಕ್ತಾ ಹೆಗ್ಡೆ!
ಕಿರಿಕ್ ಹುಡ್ಗಿ ಎಂದೇ ಖ್ಯಾತಳಾದ ಸಂಯುಕ್ತಾ ಹೆಗ್ಡೆ ಶ್ರೀಲಂಕಾದಲ್ಲಿದ್ದಾರೆ. ಅಲ್ಲಿನ ಸಮುದ್ರ ತೀರದಲ್ಲಿ ಅಡ್ಡಾಡುತ್ತಾ ಡಾನ್ಸ್ ಮಾಡುತ್ತಾ 2018ಕ್ಕೆ ಕಾಲಿಟ್ಟಿದ್ದಾರೆ
ಬೃಂದಾವನದಲ್ಲಿ ಜಗ್ಗೇಶ್
ಜಗ್ಗೇಶ್ ಹೇಳಿ ಹೇಳಿ ರಾಯರ ಪರಮ ಭಕ್ತ. ಹಾಗಾಗಿ ಅವರು 2018ರ ಮೊದಲ ದಿನ ಕಳೆದಿದ್ದು ರಾಯರ ಸನ್ನಿಧಿಯಲ್ಲಿ. ಬೃಂದಾವನದಲ್ಲಿ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್ ರಾಯರಿಗೆ ಪೂಜೆ ಸಲ್ಲಿಸಿದರು.
ಕೊಲ್ಲೂರಲ್ಲಿ ದೈವ ಭಕ್ತ ಪುಷ್ಕರ್
ಗೆಳೆಯರ ಜೊತೆ ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿ ಹೊಸ ವರ್ಷದ ಮೊದಲ ದಿನ ಕಳೆದಿದ್ದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.
ಉಡುಪಿಯಲ್ಲಿ ಸುಕೃತಾ ವಾಗ್ಳೆ
ಕಿರಗೂರಿನ ಗಯ್ಯಾಳಿ ಖ್ಯಾತಿಯ ಸುಕೃತಾ ವಾಗ್ಳೆ ಉಡುಪಿಯಲ್ಲಿ ತಮ್ಮ ಕುಟುಂಬದ ಜೊತೆಗಿದ್ದು ಹೊಸ ವರ್ಷವನ್ನು ಸ್ವಾಗತಿಸಿದರು.
ಪ್ಯಾರಿಸ್‌ನಲ್ಲಿ ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ ಪ್ಯಾರಿಸ್‌ನಲ್ಲಿದ್ದಾರೆ. ಐಫೆಲ್ ಟವರ್ ಮುಂದೆ ನಿಂತು ಅವರು ಫೋಟೋ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ.
 
ಪ್ಯಾರಿಸ್‌ನಲ್ಲಿ ಭುವನ್ ಪೊನ್ನಣ್ಣ
ಪ್ಯಾರಿಸಿನಲ್ಲಿ ಹೊಸ ವರ್ಷವನ್ನು ಎದುರುಗೊಂಡ ಮತ್ತೊಬ್ಬ ಸೆಲೆಬ್ರಿಟಿ ಭುವನ್ ಪೊನ್ನಣ್ಣ.
ಐರ್‌ಲ್ಯಾಂಡಿನಲ್ಲಿ ಕಾವ್ಯ ಶೆಟ್ಟಿ
ಇಂಗ್ಲೆಂಡ್ ಮೊದಲೇ ತಣ್ಣಗಿರುವ ದೇಶ. ಇನ್ನು ಚಳಿಗಾಲದಲ್ಲಂತೂ ಹೇಳಬೇಕೇ. ಆದರೂ ಕಾವ್ಯ ಶೆಟ್ಟಿ ಚಳಿಗಾಲದಲ್ಲೇ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಅವರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದು ಐರ್‌ಲ್ಯಾಂಡಿನಲ್ಲಿ.
 ಕೇರಳದಲ್ಲಿ ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್ ಕೇರಳದ ಹಸಿರು, ಸಮುದ್ರ, ನದಿಗಳ ಜೊತೆ ಒಡನಾಡುತ್ತಾ ಕುಟುಂಬದೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.
-Ad-

Leave Your Comments