ತಮಿಳುನಾಡಿನಲ್ಲಿ ಸ್ಟಾರ್ ವಾರ್..!

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಗಳಿಗೆ ಎಲ್ಲಿಲ್ಲದ ಮಹತ್ವ. ಇತಿಹಾಸವನ್ನು ಕೆಣಕಿದರೆ ರಾಜಕೀಯದಲ್ಲಿ ಮೆರೆದವರು ಸಿನಿಮಾ ತಾರೆಯರು. ನಟ ಎಂಜಿ ಆರ್ ಸಿಎಂ ಆಗಿ ಅನಭಿಷಕ್ತ ದೊರೆಯಾಗಿ ಮೆರೆದ ಬಳಿಕ ಅಚಾನಕ್ ಆಗಿ ಪಕ್ಷದ ಚುಕ್ಕಾಣಿಯನ್ನ ಎಂಜಿ ಆರ್ ಪತ್ನಿ ಹಿಡಿದು ಕೊಂಡ್ರು ತಮಿಳಿಗರು ಮಾತ್ರ ಕೈ ಕೊಟ್ಟಿ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಎಂಜಿಆರ್ ಜೊತೆ ಗುರ್ತಿಸಿಕೊಂಡಿದ್ದ ದಿವಂಗತ ಜಯಲಲಿತಾ ಅವರನ್ನು.. ಸತತವಾಗಿ ಗೆಲ್ಲಿಸಿ‌ ಅಧಿಕಾರದ ಗದ್ದುಗೆ ಮೇಲೆ ಪ್ರತಿಷ್ಠಾಪಿಸಿದರು.
ಜಯಲಲಿತಾ ಬಳಿಕ ಅಖಾಡಕ್ಕೆ ತಲೈವಾ.!
ಜಯಲಲಿತಾ ಅಕಾಲಿಕ ನಿಧನದ ಬಳಿಕ ಆಪ್ತ ಒ ಪನ್ನೀರ್ ಸೆಲ್ವಂ ಸಿಎಂ ಆಗಿದ್ರು. ಆ ಬಳಿಕ ನಡೆದ ರಾಜಕೀಯ ನಾಟಕದಲ್ಲಿ ಶಶಿಕಲಾ ಆಪ್ತ ಒ ಪಳನಿಸ್ವಾಮಿ ಸಿಎಂ ಪಟ್ಟಕ್ಕೆ ಏರಿದ್ದಾರೆ. ಶಶಿಕಲಾ ಆಪ್ತನಾಗಿದ್ದ ಸಿಎಂ ಪಳನಿಸ್ವಾಮಿ ಉಲ್ಟಾ ಹೊಡೆದಿರೋದ್ರಿಂದ ಇನ್ನೂ ಉಳಿದಿರುವ ಅವಧಿಯನ್ನು ಇವರು ಪೂರ್ಣ ಮಾಡುವುದಕ್ಕೆ ಶಶಿಕಲಾ ಆಪ್ತ ಟಿಟಿವಿ ದಿನಕರನ್ ಬಿಡ್ತಾರಾ ಅನ್ನೋ ಕುತೂಹಲ ಸನ್ನಿವೇಶ ನಿರ್ಮಾಣ ಆಗಿದೆ.  ಈ ನಡುವೆ ರಾಜಕೀಯ ಅಖಾಡ ಪ್ರವೇಶ ಮಾಡಲು ಎಲ್ಲಾ ರೀತಿಯ ವೇದಿಕೆ ಸಜ್ಜು ಮಾಡಿಕೊಳ್ತಿದ್ದಾರೆ ಕನ್ನಡಿಗ ರಜನಿಕಾಂತ್..
ರಜನೀಕಾಂತ್ ಎದುರಾಳಿ ಕಮಲ್ ಹಾಸನ್.!
ಶಶಿಕಲಾ ಪತಿ ನಟರಾಜನ್ ಅನಾರೋಗ್ಯ ದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪತಿಯನ್ನ ನೋಡುವ ನೆಪದಲ್ಲಿ ಬೆಂಗಳೂರು ಜೈಲಿನಿಂದ ರಜೆ ಪಡೆಯಲು ಹವಣಿಸುತ್ತಿರುವ ಚಿನ್ನಮ್ಮ, ಒಮ್ಮೆ ಚೆನ್ನೈ ತಲುಪಿದರೆ ಸರ್ಕಾರದ ಮೇಲೆ‌ ಏನಾದರೂ ಪರಿಣಾಮ ಬೀರಿ ಬರ್ತಾರೆ. ಹಾಗೆನಾದ್ರು ಸರ್ಕಾರ ಉರುಳಿಸಿದ್ರೆ ತಮಿಳುನಾಡಿಗೆ ಮಧ್ಯಂತರ ಚುನಾವಣೆ ಎದುರಾಗಲಿದೆ. ಆಗ ಅಖಾಡಕ್ಕೆ ಧುಮುಕಲಿರುವ ರಜನಿಗೆ ಮತ್ತೋರ್ವ ಸ್ಟಾರ್ ನಟ ಕಮಲ್ ಹಾಸನ್ ಎದುರಾಳಿಯಾಗಿದ್ದಾರೆ. ರಜನಿ ಒಂದು ಕಡೆಯಿಂದ ರಾಜಕೀಯ ಪ್ರವೇಶ ಪಡೆದ್ರೆ ಕಮಲ್ ಎದುರು ಪಾರ್ಟಿಯಿಂದ ಪ್ರವೇಶ ಪಡೆಯೋದು ನಿಶ್ಚಿತವಾಗಿದೆ.
ರಾಜಕೀಯದಲ್ಲಿ “ಸ್ಟಾರ್‌ಗಿರಿ” ಸಾಕಾಗಲ್ಲ ಕಮಲ್..!
ತಮಿಳುನಾಡು ರಾಜಕೀಯ ಎಂಟ್ರಿಗೆ ಸೂಪರ್ ಸ್ಟಾರ್ ರಜನಿಕಾಂತ್ ವೇದಿಕೆ ಸಿದ್ಧ ಮಾಡಿಕೊಳ್ತಿರುವಾಗಲೇ ರಜನಿ ಹಾಗೂ ಕಮಲ್ ಹಾಸನ್ ಒಟ್ಟಿಗೆ ಕಾಣಿಸಿಕೊಂಡ್ರು. ಇದಕ್ಕೆ ವೇದಿಕೆಯಾಗಿದ್ದು ಚೆನ್ನೈನ ಶಿವಾಜಿ ಗಣೇಶನ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ. ಈ ವೇಳೆ ಮಾತನಾಡಿದ ರಜನಿಕಾಂತ್ ರಾಜಕೀಯಕ್ಕೆ ಸ್ಟಾರ್‌ಗಿರಿ ಸಾಕಾಗಲ್ಲ ಅಂತ ಕಮಲ್‌ಗೆ ಹಾಸ್ಯದ ಧಾಟಿಯಲ್ಲೇ ಟಾಂಗ್ ಕೊಟ್ರು. ಒಟ್ನಲ್ಲಿ‌ ತಮಿಳುನಾಡು ಜನ ಸ್ಟಾರ್ ಗಿರಿಯನ್ನೇ ಮೆಚ್ಚಿಕೊಳ್ತಾರಾ..? ರಜನಿಗೆ ಉಘೇ ಅಂತಾರ ಕಾದು ನೋಡ್ಬೇಕು.
ಸರ್ವಸಮರ್ಥ, ನಾಗಮಂಗಲ
-Ad-

Leave Your Comments