ಸ್ಟೈಲ್ ರಾಜ ಚಿತ್ರ ನಿರ್ದೇಶಕ ಹರೀಶ್ ಬಂಧನ

ಸ್ಟೈಲ್ ರಾಜ ಚಿತ್ರದ ನಿರ್ದೇಶದ ಹರೀಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಹಾಗೂ ಕೊಲೆ ಸಂಚು ಆರೋಪ ಮಾಡಿ ಅಶೋಕ್ ಎಂಬುವವರು ಹರೀಶ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಮೇಲೆ  ಮೇಲೆ ಪ್ರಕರಣ ದಾಖಲಿಸಿಕೊಂಡ ನಂತರ ಪೊಲೀಸರು ಹರೀಶ್ ಅವರನ್ನು ಬಂಧಿಸಿದ್ದಾರೆ.

ಸಿನಿಮಾಗಾಗಿ ನಿರ್ದೇಶಕ ಹರೀಶ್, ಅಶೋಕ್ ಅವರ ಸಂಬಂಧಿ ಅವರಿಂದ ₹ 3.5 ಲಕ್ಷ ಹಣ ಪಡೆದಿದ್ದರು. ಈ ಹಣವನ್ನು ವಾಪಸ್ ಕೇಳಿದ್ದಕ್ಕೆ ಹರೀಶ್ ಹಾಗೂ ಅವರ ಆಪ್ತರು ಸೇರಿ ಅಶೋಕ್ ಅವರನ್ನು ರಸ್ತೆ ಮಧ್ಯದಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ನಂತರ ಅಶೋಕ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹರೀಶ್ ಜತೆಗೆ ಸತೀಶ್, ಸುರೇಶ್, ಶೇಖರ್ ಎಂಬುವವರನ್ನೂ ಬಂಧಿಸಿದ್ದಾರೆ.

-Ad-

Leave Your Comments