ಸುದೀಪ್ ಸೂಪರ್ ಅಡುಗೆಗೆ ಬಿಗ್ ಮನೆ ಫುಲ್ ಫಿದಾ!!

ಅದು ಬಿಗ್ ಬಾಸ್ ನ 50 ನೇ ಸಂಚಿಕೆ.  ಈ ಬಾರಿ ಬಿಗ್ ಬಾಸ್ ಮನೆ ಸೇರಿದವರಿಗೆ ಅರ್ಧ ಶತಕ ಬಾರಿಸಿದ ಖುಷಿಯ ದಿನ ಅಂದ್ರೆ 50ನೇ ದಿನ. ಅಷ್ಟು ದಿನ ಮನೆಯೊಳಗೆ ಅವ್ರು ಕೊಟ್ಟದ್ದನ್ನು ತಿಂದ್ಕೊಂಡು ,ಹೇಳಿದ ಕೆಲಸ ಮಾಡಿ ಟಾಸ್ಕ್ ಗೆದ್ದು ಉಳಿಯೋದು ಅಂದ್ರೆ ಸುಮ್ನೆ ಅಲ್ಲ . ಅದ್ರಲ್ಲೂ ಹೊರಗಿರುವಾಗ ಬೇಕಾದ್ದು ತಿಂದು ಅಭ್ಯಾಸವಾದ ನಾಲಿಗೆಗೆ ಇಲ್ಲಿ ಹೊಂದಿಕೊಳ್ಳುವುದು ಕಷ್ಟ.. ಕಷ್ಟ..ಕಷ್ಟ ..

20161128_200659

50ರ ಸಂಭ್ರಮದಲ್ಲಿ  ಸುದೀಪ್, ಒಂದಿಷ್ಟೂ ಸುಳಿವು ಕೊಡದೆ ಮನೆಯಲ್ಲಿದ್ದವರಿಗೆಲ್ಲ ಮೆನು ಕೊಟ್ರು. ಅವರೆಲ್ಲ ತಮ್ಮಿಷ್ಟದ ಅಡುಗೆ ಕೇಳಿದ ಮೇಲೆ ತಾನೇ ಇವತ್ತಿನ ಕುಕ್  (ಭಟ್ಟ)ಅಂತ ಹೇಳಿ ಏಪ್ರೊನ್ ತೊಟ್ಟು ಅಡುಗೆಗೆ ನಿಂತಿದ್ದು ಅಲ್ಲಿದ್ದವರಿಗಷ್ಟೇ ಅಲ್ಲ ಟೀವಿ ನೋಡ್ತಿದ್ದವರಿಗೂ ಆಶ್ಚರ್ಯ ವೋ ಆಶ್ಚರ್ಯ !! ಜೊತೆಗೆ ಹೇಗೆ ಮಾಡಬಹುದು? ರುಚಿಯಾಗಿರುತ್ತೋ ಏನೋ ? ಅನ್ನೋ ಆತಂಕ, ಕುತೂಹಲ ಮನೆಯೊಳಿದ್ದವರಿಗೆ.

20161128_20035920161128_201534ಮೊದಲೇ ಸುದೀಪ್ ತಾನು ಎಕ್ಸ್ಪರ್ಟ್ ಅಂತ ಹೇಳಿಕೊಳ್ಳದೆ  ಪ್ರಯತ್ನ ಪಡ್ತಿದೀನಿ ಅಂತಷ್ಟೇ ಹೇಳಿ ಅಡಿಗೆ ಶುರುಮಾಡಿದ್ರು. ಮಾಡುವಾಗ ನೀವು ಗಮನಿಸಿರಬೇಕು ( ನೋಡಿದ್ದವರು ) ಅವ್ರು ಕೈಯಾಡಿಸುತ್ತಿದ್ದ ರೀತಿ ಪಕ್ಕಾ ಪ್ರೊಫ್ಫೆಷನಲ್ ಕುಕ್ ಅನ್ನುವಂತೆ ಇತ್ತು. ಅಷ್ಟೇ ಅಲ್ಲ ಒಬ್ಬ ತಾಯಿ ತನ್ನ ಮಕ್ಕಳಿಗೆ ಅಡುಗೆ ಮಾಡುವಾಗ ಹಸಿವಾಗ್ತಾ ಇದೆಯಾ ಇನ್ನೇನು ಅಡಿಗೆ ಆಗೇ ಬಿಡ್ತು ಸ್ವಲ್ಪ ಆಟ ಆಡ್ತಾಯಿರಿ . ಆಟ ಮುಗಿಯೋ ಹೊತ್ತಿಗೆ ಬಿಸಿ ಬಿಸಿ ಅಡಿಗೆ ರೆಡಿ ಅಂತಾಳಲ್ಲ ಹಾಗೆ ನಾನು ಅಡಿಗೆ ಮಾಡ್ತಿರ್ತೀನಿ ಆ ಗ್ಯಾಪಲ್ಲಿ ನೀವು ಎರಡು ತಂಡ ಮಾಡ್ಕೊಂಡು ಅಂತ್ಯಾಕ್ಷರಿ ಆಡಿ ಅಂತ ಮನೆಯಲ್ಲಿದ್ದವರನ್ನು ಹಸಿವು ಮರೆಸುವ ಹಾಗೆ ಎಂಗೇಜ್ ಮಾಡಿದ್ರು. ಟೀವಿ  ನೋಡ್ತಿದ್ದವರಿಗೂ ಅಯ್ಯೋ ನಮ್ ಸುದೀಪು ಎಂಥ ಒಳ್ಳೆ ಕೆಲಸ ಮಾಡ್ತಿದ್ದಾರಲ್ವಾ ಅನ್ನಿಸಿರೋದ್ರಲ್ಲಿ ಎರಡು ಮಾತಿಲ್ಲ. ಸ್ಪರ್ಧಿಗಳ ತಾಯಂದಿರಂತು  ಅಯ್ಯೋ ಮನೇಲಿದಿದ್ದರೆ ನಾನೇ ಮಾಡ್ಕೊಡ್ತಿದ್ದೆ ಸುದೀಪ್ ಮಾಡ್ಕೊಡ್ತಿದ್ದಾರಲ್ಲ ಅಂತ ಕಣ್ತುಂಬಿಕೊಂಡಿದ್ರು ಆಶ್ಚರ್ಯವಿಲ್ಲ.

20161128_20130420161128_201004

ಅಡುಗೆ ಮಧ್ಯೆ ಮಧ್ಯೆ ಸಣ್ಣದಾಗಿ ಕೀಟ್ಲೆ ಮಾಡ್ತಾ , ತೂಕಡಿಸ್ತಾ ಇದ್ದವರನ್ನ ಎಚ್ಚರಿಸುತ್ತಾ , ಕಿಚಾಯಿಸ್ತಾ , ಯಾರ ಕಾಟಕ್ಕೂ-ಆಟಕ್ಕೂ ಸಿಕ್ಕಿಕೊಳ್ಳದೆ ,ಪದೇ ಪದೇ ಪ್ರಶ್ನೆ ಕೇಳ್ತಿದ್ದ ಪ್ರಥಮ್ ಗೆ ಸಮಾಧಾನದಿಂದ ಉತ್ತರ ಕೊಡ್ತಾ ಶಾಲಿನಿಗೆ ಕೌಂಟರ್ ಹೇಳ್ತಾ ಇದ್ದದ್ದು ನೋಡಿದ್ರೆ ಸುದೀಪ್ ಈ ಸೀಸನ್ ನಲ್ಲಿ ತುಂಬಾ ಬದಲಾಗಿದ್ದಾರೆ ಅಂತನ್ನಿಸುತ್ತೆ.  ಅವರ ಹಾವ ಭಾವಗಳು ಬದಲಾಗಿವೆ. ಮಾಗಿದ ಹಿರಿಯಣ್ಣನ ನಡವಳಿಕೆಗಳು ಕಾಣುತ್ತಿವೆ.

sudeep-1

ಕಳೆದ ಸಂಚಿಕೆಗಳಲ್ಲಿ ಹುಚ್ಚ ವೆಂಕಟ್ , ಬಿಗ್ ಬಾಸ್ ಮನೆಗೆ ಬಂದು ಫಳಾರ್ ಪ್ರಥಮ್ ಗೆ ಬಾರಿಸಿದಾಗ  ಸುದೀಪ್ ಬೇಸರ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ನ್ಯಾಯ ಒದಗಿಸಿದರೆ ಮಾತ್ರ ನಾನು ಈ ಶೋ ನಡೆಸುತ್ತೇನೆ ಅಂದಿದ್ದು ಬಹಳಷ್ಟು  ಜನರಿಗೆ ಇಷ್ಟವಾಗಿರುವುದಂತೂ ನಿಜ.

pooja

ಹಾಫ್ ಸೆಂಚುರಿ ಬಾರಿಸಿದ ತಂಡಕ್ಕೆ ಜಿಲೇಬಿ ಹಂಚಿ, ಡಾನ್ಸ್ ಮಾಡಿ , ಹಳೆಯ ನೆನಪುಗಳನ್ನು ಹರಡಿ ತನ್ನ ಸಿನಿಮಾ ಪ್ರಮೋಟ್ ಮಾಡಿದ ಪೂಜಾಗಾಂಧಿ ಜೊತೆಯಲ್ಲಿ “ಜಿಲೆಬಿ ” ವಿಷಯದಲ್ಲಿ ಸುದೀಪ್ ರೇಗಿಸಿದ ರೀತಿಗೆ ಸ್ವತಃ ಪೂಜಾ ನಕ್ಕು ನಕ್ಕು ಸುಸ್ತಾದ್ರು. ಕಾಲೆಳೆಸಿಕೊಂಡವರಿಗೂ ಖುಷಿಯಾಗುವ ರೀತಿ ನಡೆದುಕೊಂಡ ಸುದೀಪ್ ಬಗ್ಗೆ ಒಂದು ಹಿಡಿ ಪ್ರೀತಿ ಹೆಚ್ಚಾಗದಿರಲು ಹೇಗೆ ಸಾಧ್ಯ ಹೇಳಿ .

shalini

ಕಿಚ್ಚನ ಅಡಿಗೆಯನ್ನು ಹಸಿದ ಹೊಟ್ಟೆಗಳು ಆಹಾ ..ಕೇಕ್ !!  ಓಹೋ .. ಬಿರಿಯಾನಿ ಅಂತ ಚಪ್ಪರಿಸಿ  ತಿಂದದ್ದು ಆಯ್ತು. ಕೊನೆಗೆ ಹೇಳದೆ ಇರಲಿ ಹೇಗೆ ಅನ್ನುವಂತೆ ಕ್ಯಾಮರಾ ಮುಂದೆ ಬಂದ ಶಾಲಿನಿ,ಕೀರ್ತಿ ಹೊಟ್ಟೆತುಂಬಿಸಿದ ಕಿಚ್ಚನಿಗೆ ಅಚ್ಚು ಮೆಚ್ಚಿನ ಮಾತನ್ನು ಆಡಿ ಹೋದ್ರು.

ಕೊನೆಯಲ್ಲಿ ಇನ್ನು ಆಟ ಇದೆ . ಚೆನ್ನಾಗಿ, ತಾಳ್ಮೆಯಿಂದ ಆಡಿ ಅಂತ ಪ್ರೋತ್ಸಾಹಿಸಿ, ಹುರಿದುಂಬಿಸಿ ಹೋದ ಸುದೀಪ್ ಒಬ್ಬ ಗೆಳೆಯ,ಹಿತೈಷಿಯಂತೆ  ಕಂಡಿದ್ದರೆ ಅಚ್ಚರಿ ಇಲ್ಲ. ಯಾರು ಏನನ್ನು ನೆನಪಿಟ್ಟುಕೊಳ್ತಾರೋ ಬಿಡ್ತಾರೋ ಆದ್ರೆ ಸುದೀಪ್ ತಾವೇ ತಮ್ಮ ಕೈಯ್ಯಾರೆ ಅಡುಗೆ ಮಾಡಿ ಕಳುಹಿಸಿದ್ದನ್ನು ಮಾತ್ರ ಸ್ಪರ್ಧಿಗಳಷ್ಟೇ ಅಲ್ಲ ಬಿಗ್ ಬಾಸ್  ನೋಡಿದವರು ಮರೆಯಲಾರರು.

sudeeep-soopersudeep-super

 

ಕಾರಣವಿಷ್ಟೇ .ಅನ್ನದ ಋಣ ಎಲ್ಲಕ್ಕಿಂತ  ದೊಡ್ಡದು ನೋಡಿ . ಹಸಿದಾಗ ನಮಗೆ ಬೇಕೆನಿಸಿದ ರುಚಿ ರುಚಿ ಅಡುಗೆ ಮಾಡಿಕೊಟ್ಟವರನ್ನು ಸಾಮಾನ್ಯವಾಗಿ ಯಾರೂ ಮರೆಯುವುದಿಲ್ಲ. ಸುದೀಪ್ ಗೆ ಶುಭವಾಗಲಿ. ಅಭಿನಯ ಚಕ್ರವರ್ತಿಗೆ  ಹಾಲಿವುಡ್ನಲ್ಲು ಅವಕಾಶಗಳು ಬರಲಿ . ಯಾಕಂದ್ರೆ ಸುದೀಪ್ ಅಂದ್ರೆ ಸುಮ್ನೆ ಅಲ್ಲ ನೋಡಿ . ಪಾತ್ರಕ್ಕೆ ಜೀವ ಬೆಸೆಯುವ ಅಪರೂಪದ  ಕಲಾವಿದ . ಬೆಳೆಯಲಿ ಬೆಳಗಲಿ .

-ಭಾನುಮತಿ ಬಿ ಸಿ

 

-Ad-

Leave Your Comments