“ಹೆಬ್ಬುಲಿಯ” ಅಬ್ಬರ ಸುದೀಪ್ -ದರ್ಶನ್ ಸ್ನೇಹಕ್ಕೆ ಕಿಚ್ಚು ಹಚ್ಚಿತೇ ..?

“ನನ್ನ ಸ್ನೇಹಿತ ಸ್ಯಾಂಡಲ್‍ವುಡ್‍ನ ಬಾಕ್ಸ್ ಆಫೀಸ್ ಸುಲ್ತಾನ” ಈ ಮಾತು ಹೇಳಿದ್ದು ನಟ ಕಿಚ್ಚ ಸುದೀಪ್, ಮೊದಲು ಕುಚುಕು ದೋಸ್ತಿಗಳಾಗಿದ್ದ ಸುದೀಪ್ ಹಾಗೂ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಬೆಂಕಿ ಬಿದ್ದಿದೆ.. ಎರಡ್ಮೂರು ವರ್ಷಗಳಿಂದ ಎಲ್ಲೇ ಹೋದರೂ ಬಂದರೂ ಜೊತೆ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಇತ್ತೀಚಿನ ಬೆಳವಣಿಗೆಯಿಂದ ಬೇರೆ ಬೇರೆಯಾಗಿದ್ರು.. ಆದ್ರೆ ಭಾನುವಾರ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಸ್ಫೋಟವಾಗಿದೆ.. ನಟ ದರ್ಶನ್ ತೂಗುದೀಪ ನಮ್ಮಿಬರ ನಡುವೆ ಯಾವ ಸ್ನೇಹವೂ ಇಲ್ಲ.. ಎಂತಹದ್ದೂ ಇಲ್ಲ.. ನಾವಿಬ್ಬರು ಸ್ಯಾಂಡಲ್‍ವುಡ್‍ನಲ್ಲಿ ನಟಿಸುತ್ತಿರುವ  ಆಕ್ಟರ್‍ಗಳು ಅಷ್ಟೆ ಅಂತ ಟ್ವೀಟ್ ಮಾಡಿದ್ದಾರೆ..

ಕಳಸಾ ಬಂಡೂರಿ ಹೋರಾಟ ನಡೆಯುವಾಗ ಒಂದೇ ಬಾರಿಗೆ ವೇದಿಕೆಗೆ ಎಂಟ್ರಿಕೊಟ್ಟಿದ್ದ ಕುಚುಕು ಗೆಳೆಯರು ನಾವಿಬ್ಬರು ಒಳ್ಳೆ ಸ್ನೇಹಿತರು ಅನ್ನೋದನ್ನು ಸಾರಿ ಹೇಳಿದ್ರು.. ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲೂ ದರ್ಶನ್, ಸುದೀಪ್ ಜೋಡಿ ಕಾಣಿಸಿಕೊಂಡಿದ್ದು ಅಪಾರ ಅಭಿಮಾನಿಗಳಲ್ಲಿ ಸಖತ್ ಮಜಾ ಕೊಟ್ಟಿತ್ತು.. ದರ್ಶನ್ ಕೌಟುಂಬಿಕ ಕಲಹಗಳು ಬಂದಾಗ, ಸುದೀಪ್ ಕೌಟುಂಬಿಕ ವಿಚಾರ ಬಂದಾಗಲು ಒಬ್ಬರಿಗೆ ಒಬ್ಬರು ಸಾಥ್ ನೀಡಿದ್ರು..

darshan1

ಮೂಗಿನ ಮೇಲಿನ ಕೋಪವೇ ಸುದೀಪ್ ಜೊತೆಗೆ ಬಿರುಕಿಗೆ ಕಾರಣವಾಯ್ತಾ  ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ.. ಯಾಕಂದ್ರೆ ಕಳೆದ ಬಾರಿಯ ವೀಕೆಂಡ್ ವಿತ್ ರಮೇಶ್ ನಡೆಸಿಕೊಡುವ ಸಾಧಕರ ಹಾಟ್ ಸೀಟ್‍ನಲ್ಲಿ ಭಾಗವಹಿಸಿದ್ದ ನಟ ಸುದೀಪ್, ನನ್ನ ಬೆಸ್ಟ್ ಫ್ರೆಂಡ್ ಅಂದ್ರೆ ಅದು ದರ್ಶನ್ ಮಾತ್ರ.. ದರ್ಶನ್‍ಗೆ ಮೂಗಿನ ಮೇಲೆ ಕೋಪ ಇದೆ ಮಕ್ಕಳನ್ನು ನೋಡಿಕೊಂ ಹಾಗೆ ನೋಡಿಕೊಳ್ಳಬೇಕು ಇಲ್ಲದಿದ್ರೆ ಕಷ್ಟ ಅಂತಾ ಹೇಳಿದ್ರು.. ಆದ್ರೆ ಈಗ ನಾವು ಸ್ನೇಹಿತರಲ್ಲ ಅಂತಾ ದರ್ಶನ್ ಹೇಳಿರೋದು ಹೊಸ ಅಧ್ಯಯಕ್ಕೆ ಕಾರಣವಾಗಿದೆ..

ದರ್ಶನ್ ಹಾಗೂ ಸುದೀಪ್ ನಡುವಿನ ಅದ್ಭುತ ಸ್ನೇಹವನ್ನು ಸಹಿಸಿಕೊಳ್ಳಲಾಗದೆ ಅವರಿಬ್ಬರ ಹಿಂದೆ ಓಡಾಡುವವರೇ ಇಬ್ಬರ ನಡುವೆ ಕೊಳ್ಳಿ ಇಟ್ಟಿದ್ದಾರೆ ಎನ್ನೋ ಮಾತುಗಳು ಕೇಳಿ ಬಂದಿವೆ.. ಒಂದು ದರ್ಶನ್ ನೆಚ್ಚಿನ ಸ್ನೇಹಿತನಾಗಿದ್ದ ಬುಲೆಟ್ ಪ್ರಕಾಶ್ ಹೇಳುವ ಪ್ರಕಾರ ದರ್ಶನ್‍ಗೆ ಮೊಬೈಲ್ ಆನ್ ಅಂಡ್ ಆಫ್ ಮಾಡುವುದು ಬಿಟ್ಟರೆ ಇನ್ಯಾವುದೇ ಟ್ವೀಟ್ಟರ್, ಫೆಸ್‍ಬುಕ್ ಬಳಸೋದು ಗೊತ್ತಿಲ್ಲ.. ಅವರ ಹಿಂದೆ ಮುಂದೆ ಇರುವವರು ಇವರಿಬ್ಬರ ನಡುವೆ ತಂದಿಕ್ಕುವ ಕೆಲಸ ಮಾಡ್ತಿದ್ದಾರೆ ಅಂತಾ ದೂರಿದ್ದಾರೆ.. ಅಷ್ಟೇ ಅಲ್ಲದೆ ಈ ಬಗ್ಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಫೋಟಕ ಮಾಹಿತಿಯನ್ನು ಬಿಚ್ಚಿಡಲಿದ್ದಾರಂತೆ ..

ಆದ್ರೆ ದರ್ಶನ್ ಮಾಡಿರುವ ಮತ್ತೊಂದು ಟ್ವೀಟ್‍ನಲ್ಲಿ ಮೆಜೆಸ್ಟಿಕ್ ಚಿತ್ರದಲ್ಲಿ ನಟನಾಗಿ ಆಯ್ಕೆಯಾಗಲು ನಾನು ಸಪೋರ್ಟ್ ಮಾಡಿದ್ದೆ ಅಂತಾ ಸುದೀಪ್ ಹೇಳಿಕೊಂಡಿರೋದು ನನಗೆ ನೋವು ತಂದಿದೆ.. ಅವರಿಗೆ ಸಂಬಂಧವಿಲ್ಲದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿರುವ ಬಗ್ಗೆ ಸ್ಪಷ್ಟನೆ ಕೊಡಬೇಕು.. ಈ ಮಾತಿನಿಂದ ನನಗೆ ನೋವಾಗಿದೆ ಎಂದಿದ್ದಾರೆ.. ಒಟ್ಟಾರೆಯಾಗಿ ಇಬ್ಬರು ಸ್ನೇಹಿತರು ಬೇರೆ ಶಕ್ತಿಗಳನ್ನು ಎದುರಿಸಲು ಘರ್ಜನೆ ಮಾಡ್ತಿದ್ದರು.. ಆದ್ರೀಗ ಇಬ್ರು ಬೇರೆ ಬೇರೆ ಯಾಗಿರೋದು ಎದುರಾಳಿ ತಂಡಕ್ಕೆ ಖುಷಿ ಆಗಿರೋದಂತು ಸತ್ಯ..

೪-೫ ವರುಷಗಳ ಹಿಂದೆ ಸುದೀಪ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮೆಜೆಸ್ಟಿಕ್ ಚಿತ್ರಕ್ಕೆ  ದರ್ಶನ್ ಗೆ  ಸಿಕ್ಕಿದ ಅವಕಾಶದ ಬಗ್ಗೆ ಮಾತಾಡಿದ್ದರು. ಅಲ್ಲಿ ಸುದೀಪ್ ದರ್ಶನ್ ಬಗ್ಗೆ ಮಾತಾಡುವಾಗ ಕಾಳಜಿಯ ಜೊತೆಗೆ ದರ್ಶನ್  ಶ್ರಮದ ಸಾಧನೆ ಬಗ್ಗೆ ಹೇಳಿದ್ದರೇ ಹೊರತು ವ್ಯಂಗ್ಯ -ಅಹಂ ಬೆರೆತ ಧ್ವನಿ, ಹಾವಭಾವ ಕಂಡಿರಲಿಲ್ಲ. ಹೀಗಿದ್ದೂ ಇದ್ದಕ್ಕಿದ್ದ ಹಾಗೆ ದರ್ಶನ್ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಹಳೆಯ ವಿಡಿಯೋ ಹಾಕಿ ಅಸಹನೆ ವ್ಯಕ್ತ ಪಡಿಸಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸುದೀಪ್ ಕೇವಲ ಕ್ಲಾಸ್ ಸಿನಿಮಾಗಳನ್ನು ಮಾಡ್ತಿದ್ರು.. ಆದ್ರೆ ಇತ್ತೀಚಿಗೆ ಸುದೀಪ್ ಮಾಸ್ ಸಿನಿಮಾಗಳನ್ನು ಮಾಡುವ ಮೂಲಕ ದರ್ಶನ್‍ಗೆ ಎದುರಾಳಿ ಆಗಿದ್ದಾರೆ.. ಯಾವುದೇ ಒಂದು ಉದ್ಯಮದಲ್ಲಿ ಎದುರಾಳಿಗಳ ಮೇಲೆ ಕತ್ತಿ ಮಸೆಯೋದು ಸಾಮಾನ್ಯ.. ಇಲ್ಲಿ ಸ್ನೇಹಿತರಾಗಿದ್ದವರ ನಡುವೆ ಇದೇ ವಿಚಾರ ಮನಸ್ತಾಪ ಉಂಟು ಮಾಡಿತಾ..? ಈ ಬಗ್ಗೆ ಸುದೀಪ್ ಮಾತ್ರ ಇನ್ನೂ ತುಟಿ ಬಿಚ್ಚಿಲ್ಲ.   ಚಿತ್ರರಂಗದ ಅಣ್ಣ ಅಂಬರೀಶ್ ಇವರಿಬ್ಬರು ನನ್ನ ಮಕ್ಕಳಿದ್ದ ಹಾಗೆ ಎಂದು ಹೇಳಿಕೊಳ್ತಿದ್ರು.. ಇದೀಗ ಇವರಿಬ್ಬರ ನಡುವಿನ ವೈಮನಸ್ಸನ್ನ ಸರಿಮಾಡ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಸರ್ವಸಮರ್ಥ, ನಾಗಮಂಗಲ

-Ad-

Leave Your Comments