ಹಾಲಿವುಡ್ ಚಿತ್ರದಲ್ಲಿ ಕಿಚ್ಚನ ಖಡಕ್ ಲುಕ್ ಹೇಗಿದೆ ನೋಡಿ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ನಲ್ಲಿ ಸೌಂಡ್ ಮಾಡಲು ಸಜ್ಜಾಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ರೈಸೆನ್ ಚಿತ್ರದ ಮೂಲಕ ಹಾಲಿವುಡ್ ಗೆ ಪದಾರ್ಪಣೆ ಮಾಡುತ್ತಿರುವ ಸುದೀಪ್ ಅಭಿಮಾನಿಗಳಿಗೆ ಒಂದು ಉಡುಗೋರೆ ನೀಡಿದ್ದಾರೆ. ಅದುವೇ ರೈಸೆನ್ ಚಿತ್ರದಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿರೋದು. ಅಮೆರಿಕ ಸೇನೆಯ ಉಡುಗೆಯಲ್ಲಿರುವ ಕಿಚ್ಚನ ಈ ಖದರ್ ಲುಕ್ ಈಗ ಅಭಿಮಾನಿಗಳ ಗಮನ ಸೆಳೆದಿದೆ. ಅಂದಹಾಗೆ ಈ ಚಿತ್ರವನ್ನು ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದಾರೆ. ಈ ಫಸ್ಟ್ ಲುಕ್ ನೋಡಿದ ಮೇಲೆ ಇದೊಂದು ಆ್ಯಕ್ಷನ್ ಚಿತ್ರ ಎಂಬುದು ಸ್ಪಷ್ಟವಾಗಿದ್ದು, ಸುದೀಪ್ ಫಸ್ಟ್ ಲುಕ್ ಹೀಗಿದೆ.

-Ad-

Leave Your Comments