ಕಿಚ್ಚ ಸುದೀಪ್ ಯಾವ ಸ್ವರ್ಗದಲ್ಲಿದ್ದಾರೆ ಗೊತ್ತೇನು ?

ನಮ್ಮ ಪ್ರೀತಿಯ ನಟರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಸಹಜವಾಗಿ ಇರುತ್ತದೆ. ಹಾಗಾಗಿ ತಮ್ಮ ಅಭಿಮಾನಿಗಳಿಗೆ ತಾನು ಎಲ್ಲಿದ್ದೇನೆ ಅನ್ನುವ ಸುದ್ದಿಯನ್ನು ತಿಳಿಸುತ್ತಾ ಇರುತ್ತಾರೆ ಸುದೀಪ್. ಅಂದಹಾಗೆ ಸುದೀಪ್ ಈಗ ಎಲ್ಲಿದ್ದಾರೆ ಗೊತ್ತಾ? ಭೂಮಿಯ ಮೇಲಿರುವ ಸ್ವರ್ಗದಲ್ಲಿ.
ದಿ ವಿಲನ್ ಸಿನಿಮಾದ ಶೂಟಿಂಗಿನಲ್ಲಿ ಪಾಲ್ಗೊಂಡಿರುವ ಕಿಚ್ಚ ಸುದೀಪ್ ಬ್ಯಾಂಕಾಕಿನಲ್ಲಿದ್ದಾರೆ. ಅಲ್ಲಿರುವ ಪ್ರಸಿದ್ಧ ಕ್ರಾಬಿ ದ್ವೀಪದಲ್ಲಿ ದಿ ವಿಲನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಬಹುಶಃ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿರುವುದರಿಂದ ರಾತ್ರಿ ಹೊತ್ತು ಶೂಟಿಂಗ್ ಮಾಡುತ್ತಿದ್ದಾರೆ. ಈ ಚಿತ್ರೀಕರಣದ ಬಿಡುವಿನಲ್ಲಿ ಸುದೀಪ್ ತಮ್ಮ ಹೋಟೆಲ್‌ನ ಕಿಟಿಕಿಯಿಂದ ಕಾಣುವ ದೃಶ್ಯವೊಂದನ್ನು ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ.
 ಫೋಟೋವನ್ನು ನೀವೊಂದು ಸಲ ನೋಡಬೇಕು. ಕಿಟಿಯಿಂದ ಹೊರಗೊಂದು ಸ್ವಿಮ್ಮಿಂಗ್ ಪೂಲ್ ಕಾಣಿಸುತ್ತದೆ. ಆ ಸ್ವಿಮ್ಮಿಂಗ್ ಪೂಲು ಮುಗಿಯುವುದೇ ಇಲ್ಲ. ಯಾಕೆಂದರೆ ಆ ಸ್ವಿಮ್ಮಿಂಗ್ ಪೂಲ್‌ಗೆ ತಾಗಿಕೊಂಡಂತೆ ಸಮುದ್ರ ಇದೆ. ಕಿಟಕಿ ತೆರೆದರೆ ಸಾಕು ಆ ದೃಶ್ಯ ಕಾಣಿಸಿಕೊಳ್ಳುತ್ತದೆ. ಅಂಥದ್ದೊಂದು ಅದ್ಭುತ ಜಾಗದಲ್ಲಿ ಕಿಚ್ಚ ಸುದೀಪ್ ಇದ್ದಾರೆ.
-Ad-

Leave Your Comments