ಕಿಚ್ಚ ಸುದೀಪ್ ಹೊಸ ಅವತಾರ ಏನು ಗೊತ್ತಾ ..?

ಬಿಗ್ ಬಾಸ್ ಅಂದ್ರೆ ನೆನಪಿಗೆ ಬರೋದು ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್. ಬಿಗ್ ಬಾಸ್ ನಲ್ಲಿ ಸುದೀಪನ ನಿರೂಪಣೆಯೇ ಬಲು ಮನೋಹರ. ಪ್ರತಿ ಶುಕ್ರವಾರ ಸ್ಪರ್ಧಿಗಳ ಜೊತೆ ನ್ಯಾಯ ಪಂಚಾಯ್ತಿ ಮಾಡುವ ಕಿಚ್ಚ, ಭಾನುವಾರ ಮನೆಯಿಂದ ಹೊರಬಂದ ಸ್ಪರ್ಧಿ ಜೊತೆ ಮಾತನಾಡ್ತಿದ್ರು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಸುದೀಪ್ ಭಾನುವಾರ ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ.
ಅಡುಗೆ ಭಟ್ಟನಾಗಿ ಕಿಚ್ಚನ ಕೈ ರುಚಿ..!
ಪ್ರತಿ ಭಾನುವಾರ ಕಿಚ್ಚ ಸುದೀಪ್ ಅತಿಥಿಗಳ ಜೊತೆ ಅಡುಗೆ ಮಾಡ್ತಾರೆ. ಅದಕ್ಕಾಗಿಯೇ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಡುಗೆ ಮನೆ ನಿರ್ಮಾಣ ಮಾಡಿಸಿದ್ದಾರೆ. ವಾರಕ್ಕೊಮ್ಮೆ ಕನ್ನಡ ಸಿನಿಮಾಗಳ ಪ್ರಮೋಷನ್ ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ಜೊತೆ ಮಾತು ಹರಟೆ ನಡೆಯುತ್ತೆ. ಅದಕ್ಕೂ ಮೊದಲು ಸಿನಿಮಾ ಪ್ರಮೋಷನ್ ಪಡೆದುಕೊಳ್ಳುವ ತಂಡದ ಒಬ್ಬ ಸದಸ್ಯರ ಜೊತೆ ಅಡುಗೆ ಮಾಡಲಿದ್ದಾರೆ.
ಕೋಳಿ ಕಟ್ ಮಾಡಿದ ನಟಿ ಸಂಯುಕ್ತ ಹೆಗಡೆ..! 
ನಟಿ ಸಂಯುಕ್ತ ಹೆಗಡೆ ಯಾರಿಗೆ ತಾನೆ ಗೊತ್ತಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಉಂಡಾಡಿ ಗುಂಡನ ಹಾಗೆ ಆಡ್ತಿದ್ದ ಸಂಯುಕ್ತ ಹೆಗಡೆ ಭಾನುವಾರ ಕಿಚ್ಚನ ಅಡುಗೆ ಮನೆಗೆ ಬಂದಿದ್ರು. ಅಂದಹಾಗೆ ನವೆಂಬರ್ ತಿಂಗಳಲ್ಲಿ ರಿಲೀಸ್ ಗೆ ರೆಡಿಯಾಗಿರೋ ಕಾಲೇಜು ಕುಮಾರ ಚಿತ್ರದ ಪ್ರಮೋಷನ್ ಗಾಗಿ. ಬಿಗ್ ಬಾಸ್ ಮೊದಲ ವಾರದ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಮೊದಲಿಗೆ ಕಿಚ್ಚನ ಚಿಕನ್ ರೆಸೆಪಿ ಮಾಡಿದ್ರು. ಕಿಚ್ಚ ಅಡುಗೆಯ ಕಲೆ ಹೇಳಿಕೊಡ್ತಿದ್ರೆ, ಸಂಯುಕ್ತ ಹೆಗಡೆ ಅವರನ್ನೇ ಪಾಲಿಸಿಕೊಂಡು ಹೋದ್ರು. ಕೊನೆಗೆ ಇಬ್ಬರೂ ಅತ್ಯುತ್ತಮ ಚಿಕನ್ ಅಡುಗೆ ಸವಿದು ಬಾಯಿ ಚಪ್ಪರಿಸಿದ್ರು.. ಭಾನುವಾರ ಆಗಿದ್ರಿಂದ ಜನರೂ ಮನೆಯಲ್ಲಿ ಬಾಯಿ ನೀರು ಸುರಿಸುತ್ತ ಭಾನುವಾರದ ಬಾಡೂಟ ಸವಿದ್ರು.. ಒಂದು ಅತ್ಯುತ್ತಮ ಕಲೆ ಕಿಚ್ಷನಿಗೆ ಒಲಿದಿದ್ದು, ಗುಡ್ ಶೆಫ್ ಅನ್ನೋದನ್ನ ತೋರಿಸಿದ್ರು..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments