ಯಾರದಪ್ಪಾ ಈ ಮಿಲಿಯನ್ ಡಾಲರ್ ಫೋಟೋ ?

ಬಾಲ್ಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ ಈ ಸಾಲು ಈಗ ಸುದೀಪ್ ನ  ಕಾಡ್ತಿರೋ ಹಾಗಿದೆ. ಬಾಲ್ಯದ ನೆನಪುಗಳೇ ಹಾಗೆ ಮಸುಕಾದ ಹಾಗೆ ಕಂಡರೂ ಮಾಸುವುದಿಲ್ಲ . ಬೆಳೆದು ದೊಡ್ಡವರಾದ ಮೇಲೆ ಪುಟ್ಟವರಿದ್ದಾಗ ತೆಗೆದ ಫೋಟೋ , ಆಟದ ಸಾಮಾನು ಸಿಕ್ಕರೆ ನಿಧಿ ಸಿಕ್ಕಷ್ಟೇ ಖುಷಿ!

ಸುದೀಪ್ ಕೂಡ ಅಂಥಾ ನೆನಪುಗಳ ಸಂಭ್ರಮದಲ್ಲಿದ್ದಾರೆ. ಅವರ ಸಂತೋಷಕ್ಕೆ ಕಾರಣ ಚಿಕ್ಕಂದಿನಲ್ಲಿ ತೆಗೆದಿರಿಸಿದ್ದ ಅವರ ಫೋಟೋ ಸಿಕ್ಕಿದೆ . ಅದರಲ್ಲಿ ಮುಂದೆ ನಿಂತಿರೋ ಬಾಯ್ ಕಟ್ ಇರೋ ಸುದೀಪ್ ಗೆ ಹೂ ಮುಡಿಸಿದ್ದಾರೆ .

ತನ್ನ ಬಾಲ್ಯದ ಮುದ್ದು ಮುದ್ದಾದ  ಫೋಟೋ ನೋಡಿ ಭಾವುಕರಾಗಿದ್ದಾರೆ  ಅಭಿನಯ ಚಕ್ರವರ್ತಿ .ಇದು ಮಿಲಿಯನ್ ಡಾಲರ್ ಗೆ ಸಮ  ಅಂತ  ಟ್ವೀಟ್ ಮಾಡಿದ್ದಾರೆ .

ನಮ್ಮ ಕಿಚ್ಚ ಚಿಕ್ಕವರಿರೋವಾಗ ಹೆಂಗಿದ್ರಪ್ಪ ಅಂತ ಕುತೂಹಲದಿಂದ ಯೋಚಿಸುವ ಅಭಿಮಾನಿಗಳಿಗೆ ಮುದ್ದು ಸುರಿಯುತ್ತಿರುವ ಈ ಫೋಟೋ ಇಷ್ಟವಾಗೋದಂತು ದಿಟ .

-Ad-

Leave Your Comments