ನಟ ಸುದೀಪ್ ತಾಯಿಗೆ ಏನಾಯ್ತು..? 

ಈ ಪ್ರಶ್ನೆ ಕೇಳಿದ್ರೆ ಅದೆಂತಾ ಗಟ್ಟಿ ಗುಂಡಿಗೆ ಇದ್ದರೂ ಒಂದು ಕ್ಷಣ ಭಯ ಆಗೋದು ಗ್ಯಾರಂಟಿ. ನಟ ಸುದೀಪ್ ಕೂಡ ಅರೆಕ್ಷಣ ಆತಂಕಕ್ಕೆ ಒಳಗಾದ್ರು. ಇದ್ದಕ್ಕಿದ್ದ ಹಾಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿ ಅಲ್ಲಿಂದ ಹೊರಟು ಬಂದು. ಅದು ಕೂಡ ವಿಶೇಷ ವಿಮಾನದ ಮೂಲಕ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಆಯೊಜಿಸಿದ್ದ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಕಾರ್ಯಕ್ರದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ರು. ಖಾಶಂಪುರ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಅವರ ಮುರ್ತಿ ಅನಾವರಣವನ್ನು ತರಾತುರಿಯಲ್ಲಿ ಮುಗಿಸಿ ವೇದಿಕೆಗೆ ತೆರಳದೆ ಬೆಂಗಳೂರಿಗೆ ತೆರಳಿದ್ರು..
ಕಿಚ್ಚ ಸುದೀಪ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ರು. ಆದ್ರೆ ತಾಯಿ ಅನಾರೊಗ್ಯಕ್ಕೆ ತುತ್ತಾಗಿದ್ದಾರೆ ಅನ್ನೋ ಸುದ್ದಿ ಕೇಳಿದ್ದ ನಟ ಸುದೀಪ್ ಕಾರ್ಯಕ್ರಮ ಮೊಟಕು ಗೊಳಿಸಿ ಹೈದ್ರಾಬಾದ್ ಮೂಲಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ಸಾದ್ರು.
ತಾಯಿ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿರುವ ನಟ ಕಿಚ್ಚ ಸುದೀಪ್, ತಾಯಿ ಅನಾರೋಗ್ಯದ ಬಗ್ಗೆ ಸುದ್ದಿ ತಿಳಿಯುತ್ತಿದ್ದ ಹಾಗೆ ಬಂದಿದ್ದಾರೆ.ಆದಷ್ಟು ಶೀಘ್ರವಾಗಿ ಸುದೀಪ್ ತಾಯಿ ಗುಣವಾಗಲಿ ಅನ್ನೋದು ciniadda.com. ಜೊತೆ ಲಕ್ಷಾಂತರ ಅಭಿಮಾನಿಗಳ ಹಾರೈಕೆಯಾಗಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments