ಹೊಸ ಲುಕ್ ನಲ್ಲಿ ಮಿರಮಿರ ಮಿಂಚುತ್ತಿರುವ ಸುಂದರಾಂಗ ಸುದೀಪ್ !!

ಸುದೀಪ್ ಕನ್ನಡದ ಮೋಸ್ಟ್ ಸ್ಟೈಲಿಶ್ ಹೀರೋ ಅನ್ನೋದನ್ನ ಎಂಥವರೂ ಒಪ್ಪಲೇಬೇಕು. ತೆರೆಯ ಮೇಲೆ ಬರ್ತಿದ್ದ ಹಾಗೆ ಮೈ ಜುಮ್ ಅನ್ನಿಸುವಂಥ ಕಲರ್ ಫುಲ್ ಕಲಾಕಾರ ಕಿಚ್ಚ !! ಭರ್ಜರಿ ಕಿಕ್ ಕೊಟ್ಟು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದ ಹೆಬ್ಬುಲಿ ಈಗ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಬ್ಬುಲಿ ತೆರೆ ಕಾಣೊವರೆಗೂ ಪುಟ್ಟದೊಂದು ಜುಟ್ಟು, ಅಥವಾ ಕ್ಯಾಪ್ ,ಹ್ಯಾಟ್ ನಲ್ಲಿ ಓಡಾಡ್ತಿದ್ದ ಅಭಿನಯ ಚಕ್ರವರ್ತಿ ಹುಡುಗರಲ್ಲಿ ಮಾತ್ರವಲ್ಲ ಹುಡುಗಿಯರೂ  ತಮ್ಮ ಹೇರ್ ಸ್ಟೈಲ್ ಕಾಪಿ ಹೊಡೆಯೋವಂಥ ಕ್ರೇಜ್ ಹುಟ್ಟಿಸಿದ್ದರು.

hebbuli 1

ಹೆಬ್ಬುಲಿ ಗೆದ್ದ ಖುಷಿಯಲ್ಲಿರೋ ಕಿಚ್ಚನ ಮುಖದಲ್ಲಿ ಹೊಸ ಕಳೆ ಕಾಣ್ತಿರೋದಂತು ನಿಜ. ತಲೆಗೆ ಪಟ್ಟಿ  ಕಟ್ಟಿ ವಿಜಯಯಾತ್ರೆ ಮಾಡಿಬಂದ ಸುದೀಪ್ ಈಗ ಫ್ರೆಶ್ ಆಗಿ ಹೊಸ ಹೇರ್ ಸ್ಟೈಲ್ ನಲ್ಲಿ  ಸಕ್ಕತ್ ಮಿಂಚ್ತಾ ಇದ್ದಾರೆ.

sudeep style

ಇದೇನು ಪ್ರೇಮ್ ನಿರ್ದೇಶನದ “ವಿಲನ್” ಚಿತ್ರಕ್ಕೆ ಮಾಡಿಸಿರೋ ಸ್ಟೈಲಾ ? ಅನ್ನೋ ಕುತೂಹಲ ಹಲವರನ್ನ ಕಾಡ್ತಿದೆ. ಫೋಟೋ ಶೂಟ್ ಮುಗಿದಿದ್ದರೂ ಇನ್ನು ಬಿಡುಗಡೆ ಆಗದೆ ಇರೋದ್ರಿಂದ ಬರೋವರೆಗು  ಕಾಯಬೇಕಷ್ಟೇ.

sudeep-stands-dr-vishnuvardhans-memorial-says-he-rightfully-deserves-it

ಏನೇ ಇರಲಿ ಸುದೀಪ್ ಮಾತ್ರ ಲುಕ್ ಇರಲಿ acting ಇರಲಿ  ಕಿಕ್ ಕೊಡೋದ್ರಲ್ಲಿ ಸೂಪರ್ ಬಿಡಿ.

-Ad-

Leave Your Comments