ಸುದೀಪ್ ಗೆ ಬ್ರಿಟೀಷರು ಆಹ್ವಾನ ಕೊಟ್ಟಿದ್ಯಾಕೆ ?

ಬ್ರಿಟೀಷರು ಭಾರತವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡು ನಮ್ಮನ್ನು ಜೀತದಾಳುಗಳ ಹಾಗೆ ಕಂಡರು ಅನ್ನೋದು ಇತಿಹಾಸ.. ಆದ್ರೆ ಇದೀಗ ಅದೇ ಬ್ರಿಟೀಷರ ನಾಡಿನಿಂದ ಕರುನಾಡಿನ ಅಭಿನಯ  ಚಕ್ರವರ್ತಿ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಗೆ ಆಹ್ವಾನ ಬಂದಿದೆ..
ಕ್ರಿಕೆಟ್ ಕಾಶಿಯಲ್ಲಿ ಬ್ಯಾಟ್ ಬೀಸಲಿದ್ದಾರೆ ಕಿಚ್ಚ..!
ಹೌದು, ಮೇ 11ರಂದು ಕ್ರಿಕೆಟ್ ಕಾಶಿ ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಾರ್ಪೊರೇಟ್ ಕ್ರಿಕೆಟ್ ಡೇ ನಡೆಯಲಿದೆ. ಈ ಕ್ರಿಕೆಟ್ ಆಟ ಆಡಲು ಆಹ್ವಾನ ಬಂದಿದೆ. ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ ಬ್ಯಾಟ್ ಹಿಡಿದು ಮಿಂಚಲಿದೆ ಕರ್ನಾಟಕದ ಹೆಬ್ಬುಲಿ..
ಈಗಾಗಲೇ ಸಿಸಿಎಲ್ ನಲ್ಲಿ ಕಿಚ್ಚ ಸುದೀಪ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿದ್ದು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ..ಇದೀಗ ಲಾರ್ಡ್ಸ್ ನಲ್ಲಿ ಯಾವ ಜವಾಬ್ದಾರಿ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
ಸದ್ಯ ಶಿವಣ್ಣ ಜೊತೆಯಲ್ಲಿ ವಿಲನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್, ಇಂಗ್ಲೆಂಡ್ ನಿಂದ ಬಂದಿರುವ ಆಹ್ವಾನದ ಬಗ್ಗೆ ಹೇಳಿಕೊಂಡಿದ್ದಾರೆ. ಖುಷಿಯಾಗಿದೆ ಅಂತಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

_ರವಿಮೇಘ ,ನಾಗಮಂಗಲ

-Ad-

Leave Your Comments