ಕಿಚ್ಚನ ಸಂಕ್ರಾಂತಿ ಕಿಚ್ಚು ಹೇಗಿತ್ತು ಗೊತ್ತಾ..?

ಮಕರ ಸಂಕ್ರಾಂತಿ ವಿಶೇಷವಾಗಿ ಸ್ಯಾಂಡಲ್‌ವುಡ್ ಸ್ಟಾರ್ ಗಳು ಹಲವು ಕಾರ್ಯಕ್ರಮಕ್ಕೆ ಹಾಜರಾಗೋದು ಕಾಮನ್. ಆದ್ರೆ ಸದಾ  ಬ್ಯುಸಿ ಶೆಡ್ಯೂಲ್ ನಲ್ಲಿ ಕೆಲಸ ಮಾಡುವ ಕಿಚ್ಚ ಸುದೀಪ್ ಈ ಬಾರಿ ಸಂಕ್ರಾಂತಿಯನ್ನು ಕನಕಪುರದಲ್ಲಿ ನಡೆದ  ಕನಕೋತ್ಸವದಲ್ಲಿ ಆಚರಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಐದು ದಿನಗಳ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ಅಭಿನಯ ಚರ್ಕವರ್ತಿ ಸುದೀಪ್ ಅಭಿಮಾನಿಗಳನ್ನು ರಂಜಿಸಿದ್ರು. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಕಿಚ್ಚನ ಹಾಡು ಹಾಗೂ ಡೈಲಾಗ್ ಗೆ ಮನ ಸೋತು ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದ್ರು.
 ಸೊಂಟದ ವಿಷ್ಯ, ಬ್ಯಾಡವೋ ಶಿಷ್ಯ ಎಂದು ಹಾಡಿನ ಸಾಹಿತ್ಯ ಹೇಳ್ತಿದ್ರೆ ಅಭಿಮಾನಿಗಳು ರನ್ನನಿಗೆ ದನಿಗೂಡಿಸಿದ್ರು.. ಕನಕೋತ್ಸವದಲ್ಲಿ ಕಿಚ್ಚನಿಗೆ ಸನ್ಮಾನಿಸಿದ  ಡಿ.ಕೆ.ಬ್ರದರ್ಸ್, ಕಿಚ್ಚನ ಅಭಿಮಾನಿಗಳು ರಚಿಸಿದ್ದ ಚಿತ್ರಗಳನ್ನ  ಉಡುಗೊರೆಯಾಗಿ ನೀಡಿದರು. ಸುದೀಪ್ ಗೆ ಸನ್ಮಾನಿಸಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸುದೀಪ್‌ರವರು ಕನ್ನಡಕ್ಕೆ ಮಾತ್ರ ನಟನಲ್ಲ, ಅವರು ಇಡೀ ರಾಷ್ಟ್ರ ಮೆಚ್ಚಿರುವ ಅದ್ಭುತ ನಟ, ಅವರು ಕರ್ನಾಟಕದ ಆಸ್ತಿ ಅಂತಾ ಕೊಂಡಾಡಿದ್ರು.
 ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗಾಗಿ ಹುಚ್ಚ ಸಿನಿಮಾದ
ಎವರ್‌ಗ್ರೀನ್ ಸಾಂಗ್ ಉಸಿರೇ ಉಸಿರೇ  ಹಾಡುತ್ತಿದ್ದಂತೆ ಅಭಿಮಾನಿಗಳ ಖುಷಿ ಮತ್ತಷ್ಟು ಹೆಚ್ಚಾಯ್ತು. ಇಡಿ ಮೈದಾನದ ತುಂಬ ನೆರೆದಿದ್ದ ಅಭಿಮಾನಿಗಳು, ತಮ್ಮ ಮೊಬೈಲ್ ಗಳಲ್ಲಿ ಕಿಚ್ಚನನ್ನ ಸೆರೆ ಹಿಡಿದರು. ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಗ್ ಬಾಸ್ ಕನಕೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಬಹಳ ಸಂತಸವಾಗಿದೆ. ಹಿಂದೆ ಕನಕಪುರ ಹಳ್ಳಿಯ ರೀತಿ ಇತ್ತು, ಆದರೆ ಇಂದು ಕನಕಪುರ ನಗರವಾಗಿ ಬೆಳೆಯುತ್ತಿದೆ, ಅದಕ್ಕೆಲ್ಲ ಕಾರಣ ಡಿ.ಕೆ.ಬ್ರದರ್ಸ್ ಅಂದ್ರು.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments