ಬಡವರ ಪರ ನಿಂತು ಮಾದರಿಯಾದ ಕಿಚ್ಚ ಸುದೀಪ್ ಮಾಡಿದ್ದೇನು ?

ಒಂದು ಅಪರೂಪದ ಘಟನೆ ನಡೆದಿದೆ. ಒಬ್ಬ ಸೂಪರ್‌ಸ್ಟಾರ್ ತನ್ನ ಅಭಿಮಾನಿಗಳಿಗೆ ಯಾವತ್ತೂ ಮರೆಯದಂತಹ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಎಂಥವರೂ  ಭಾವುಕವಾಗಬಹುದಾದ ವಿಷಯ ಇದೆ. ಅಂದಹಾಗೆ ಆ ಪತ್ರ ಬರೆದಿರುವುದು ಕಿಚ್ಚ ಸುದೀಪ್. ಈ ಪತ್ರ ಬರೆಯುವ ಮೂಲಕ ತಾನು ಎಲ್ಲರಿಗಿಂತ ವಿಭಿನ್ನ ಎಂದು ತೋರಿಸಿಕೊಟ್ಟಿದ್ದಾರೆ.
ಈ ಪತ್ರದಲ್ಲೇನಿದೆ ಗೊತ್ತಾ?
ತನ್ನ ಹುಟ್ಟುಹಬ್ಬದ ದಿನ ಹಲವಾರು ಮಂದಿ ತನ್ನ ಮನೆ ಹತ್ತಿರ ಬಂದು ರಸ್ತೆ, ಮನೆಯನ್ನು ಸಿಂಗಾರ ಮಾಡುತ್ತಾರೆ. ಕೇಕು, ಹೂವು ಇತ್ಯಾದಿಗಳನ್ನೆಲ್ಲಾ ತರುತ್ತಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಾರೆ. ಆದರೆ ನಮ್ಮ ನಾಡಿನಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವವರಿದ್ದಾರೆ. ನೆರವಿಗಾಗಿ ಕಾದು ಕೂತವರಿದ್ದಾರೆ. ಅಂಥವರ ಜೊತೆ ನಿಲ್ಲಬೇಕು. ಹಾಗಾಗಿ ಕೇಕು, ಹೂವು, ಸಿಂಗಾರಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನೆಲ್ಲಾ ಬಡವರಿಗೆ ನೀಡಬೇಕು ಎಂದು ಸುದೀಪ್ ಹೇಳಿಕೆ ಕೊಟ್ಟಿದ್ದಾರೆ.
ಇನ್ನು ಮುಂದೆ ತಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ. ಅವತ್ತು ಮನೆಯಿಂದ ದೂರವಿದ್ದು, ಯಾರಿಗೆ ನೆರವಿನ ಅವಶ್ಯಕತೆ ಇದೆಯೋ ಅವರಿಗೆ ನೆರವಾಗುತ್ತೇನೆ. ನೀವೆಲ್ಲಾ ನನ್ನ ಮಾತನ್ನು ಗೌರವಿಸುತ್ತೀರಿ ಎಂದುಕೊಂಡುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಮಾದರಿಯಲ್ಲದೆ ಮತ್ತೇನು ?
ಮೊದಲನೆಯದಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ, ಆ ದುಡ್ಡನ್ನು ಬಡವರಿಗೆ ಕೊಡಿ ಅಂತ ಸೂಪರ್‌ಸ್ಟಾರ್ ಒಬ್ಬ ಹೇಳುವುದೇ ಅಪರೂಪ. ಅಂಥದ್ದರಲ್ಲಿ  ತಾನೂ ಬಡವರಿಗೆ ನೆರವಾಗುತ್ತೇನೆ ಅಂತ ಹೇಳುವುದು ಇನ್ನೂ ಅಪರೂಪ. ಇವೆರಡನ್ನೂ ಮಾಡಿರುವ ಕಿಚ್ಚ ಸುದೀಪ್ ನಿಜವಾಗಲೂ ಒಂದು ಹೊಸ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಬೇರೆಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಈ ಜನಪರ ಕಾರ್ಯವನ್ನು ಮೆಚ್ಚುವುದಲ್ಲದೇ ಬೇರೆ ದಾರಿಯೇ ಇಲ್ಲ. ಅವರ ಕಳಕಳಿಯ ವಿನಂತಿಯನ್ನು ಅಭಿಮಾನಿಗಳು ಕೇಳಿಕೊಳ್ಳುತ್ತಾರೆ ಮತ್ತು ಅದರಂತೆ ನಡೆಯುತ್ತಾರೆ ಅನ್ನುವ ನಂಬಿಕೆ ಸುದೀಪ್ ಅವರಿಗೆ ಖಂಡಿತಾ ಇದೆ. ಹಾಗಾಗಿ ಒಳ್ಳೆಯದೇ ಆಗಲಿ ಎಂಬ ಹಾರೈಕೆ ciniadda.com  ಬಳಗದ್ದು.
-Ad-

Leave Your Comments