ಸುಹಾನಾ ಹಾಡು ಈಗಲಾದರೂ ಸಮಾಧಾನ ಆಯಿತೇ ಸಾಹೇಬರೇ..?

ಒಂದು ಹುಡುಗಿ ವೇದಿಕೆ ಮೇಲೆ ಹಾಡು ಹಾಡಿದ ಬಳಿಕ ಹಾಡಿನ ಸ್ವರ ಸ್ವಾದವನ್ನು ಎಂಜಾಯ್ ಮಾಡಬೇಕಿತ್ತು. ಆದರೆ ನಾವೆಲ್ಲಾ ಬೇರೆ ವಿಚಾರಗಳ ಬಗ್ಗೆ ಮಾತನಾಡಿದ್ವಿ ಅಂತ ಈಗಲಾದ್ರು ಎನಿಸಿತೇ ನಿಮಗೆ..? ಹೀಗೆ ಅನಿಸಲೇ ಬೇಕಿತ್ತು.. ಅನ್ನಿಸಿದ್ದರೆ ನಿಜಕ್ಕೂ ಒಳ್ಳೆಯದು. ಇಲ್ಲಾ ನಾವು ಮಾಡಿದ್ದೇ ಸರಿ ಎನಿಸಿದರೆ ನಿಮ್ಮ ಇಚ್ಛೆ.

ಯಾಕಂದ್ರೆ ಯುವ ಗಾಯಕಿ ಸುಹಾನ ಸೈಯ್ಯದ್ ಜೀ ಕನ್ನಡ ವಾಹಿನಿಯಲ್ಲಿ ದೇವರ ನಾಮ ಹಾಡಿದ ಬಳಿಕ ದೊಡ್ಡ ವಿವಾದವಾಗಿತ್ತು. ಅಲ್ಲಿದ್ದಜಡ್ಜ್ ಗಳು  ತಿಳಿದು ಹೇಳಿದ್ರೋ.. ಅರಿವಿಲ್ಲದೆ ಹೇಳಿದ್ರೋ ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಮ್ಮ ಬಾಯಲ್ಲಿ ಬಂದ ದೇವರ ನಾಮ ಹಾಡಿದ್ದನ್ನು ಕೇಳಿದರೆ ಖುಷಿ ಆಯ್ತು. ಅದರಲ್ಲೂ ಓರ್ವ ಮುಸಲ್ಮಾನ ಯುವತಿಯಾಗಿ ಅದ್ಬುತವಾಗಿ ಹಾಡಿದ್ರಿ ಅಂತಾ ಕಾಮೆಂಟ್ ಕೊಟ್ರು. ಆ ಬಳಿಕ ಬುರ್ಖಾ ಹಾಕಿಕೊಂಡು ದೇವರ ನಾಮ ಹಾಡಿದ್ದು ತಪ್ಪು ಅಂತಾ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹಾಕಿದ್ರು.. ಅದೆಲ್ಲವನ್ನು ಆ ಬಾಲೆ ಸುಹಾನ ಮೆಟ್ಟಿ ನಿಂತಳು.

ನಿನ್ನೆ  ಡಾ ರಾಜ್‍ಕುಮಾರ್ ಅವರ 88ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ಸ್ಪರ್ಧಿಗಳು ಡಾ. ರಾಜ್ ಕುಮಾರ್ ಅವರ ಹಾಡುಗಳನ್ನೇ ಹಾಡಿದ್ರು. ಅದರಲ್ಲಿ ಮಲೆನಾಡಿನ ಬೆಡಗಿ ಸುಹಾನ ಸೈಯ್ಯದ್, ಅಲ್ಲಾ.. ಅಲ್ಲಾ .. ನೀನೇ ಎಲ್ಲ.. ನಿನ್ನನ್ನು ಬಿಟ್ಟರೆ ಗತಿಯಾರಿಲ್ಲ.. ಅನ್ನೋ ಸಾಂಗ್ ಹಾಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಅಲ್ಲಾನ  ಸಾಂಗ್ ಹಾಡಿದ್ರಿಂದ ಸಾಮಾಜಿಕ ಜಾಲತಾಣದ ಕೋಪಿಗಳ ಕೋಪ ತಣಿಯಿತೇ ಅನ್ನೋದಷ್ಟೆ ಗೀತಪ್ರಿಯರ ಪ್ರಶ್ನೆ.. ಸಂಗೀತವನ್ನು ಸಂಗೀತವನ್ನಾಗಿ ಮಾತ್ರವೇ ನೋಡಿ.. ಕೇಳಿ ಅನ್ನೋದು ciniadda.com ಕಳಕಳಿ .

-Ad-

Leave Your Comments