ಸುಮಲತಾಗೆ ಸುದೀಪ್ ಇದ್ದಕ್ಕಿದ್ದ ಹಾಗೆ ಥ್ಯಾಂಕ್ಸ್ ಹೇಳಿದ್ದು ಯಾಕೆ ?

ಕನ್ನಡ ಚಿತ್ರರಂಗದಲ್ಲಿ ಕೆಲವು ಅಪರೂಪದ ಬಾಂಧವ್ಯಗಳಿವೆ. ಅದರಲ್ಲಿ ಒಂದು ಅಂಬರೀಶ್ ಕುಟುಂಬ ಮತ್ತು ಸುದೀಪ್ ಕುಟುಂಬದ ಮಧ್ಯೆ ಇರುವ ಅವಿನಾಭಾವ ಸಂಬಂಧ.
ಅಂಬರೀಶ್ ಮತ್ತು ಸರೋವರ್ ಸಂಜೀವ್ ಆಪ್ತ ಮಿತ್ರರು. ಒಬ್ಬರ ಮನೆಯಲ್ಲಿ ಏನಾದರೂ ಕಾರ್ಯಕ್ರಮ ನಡೆದರೆ ಮತ್ತೊಬ್ಬರು ಇರಲೇಬೇಕು. ಹೀಗಾಗಿ ಕಿಚ್ಚ ಸುದೀಪ್ ಅವರು ಬಹಳ  ಬೇಗ ಅಂಬರೀಶ್ ಮತ್ತು ಸುಮಲತಾ ಕುಟುಂಬಕ್ಕೆ ಹತ್ತಿರವಾದರು. ಸುದೀಪ್ ಚಿತ್ರರಂಗಕ್ಕೂ ಬರುವ ಮೊದಲೇ ಅಂಬರೀಶ್ ಮತ್ತು ಸುಮಲತಾ ಅವರ ಪ್ರೀತಿ ಪಡೆದಿದ್ದರು. ಇವತ್ತು ಸುದೀಪ್ ಮತ್ತು ಸುಮಲತಾ ಆ ಹಳೆಯ ದಿನಗಳನ್ನು ನೆನೆದುಕೊಂಡಿದ್ದಾರೆ..
ಆಹಾ .. ಆ ದಿನಗಳು !!
ಆ ದಿನಗಳನ್ನು ನೆನಪಿಸಿದ್ದು ಸುದೀಪ್ ಅವರು ಟ್ವೀಟ್.
ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಸಿನಿಮಾದಲ್ಲಿ ಸುದೀಪ್ ಒಂದು ಹಾಡನ್ನು ಹಾಡಿದ್ದಾರೆ. ಅದನ್ನು ಅವರು ಟ್ವಿಟ್ಟರಲ್ಲಿ ಹಂಚಿಕೊಂಡರು. ಆ ಟ್ವೀಟ್ ನೋಡಿದ ಸುಮಲತಾ ಅಂಬರೀಶ್ , “ಚಿತ್ರರಂಗಕ್ಕೆ ಬರುವ ಮೊದಲು ನೀನು ನಮ್ಮ ಮನೆಯಲ್ಲಿ ಹಾಡಿದ್ದ ಆ ಚಲ್ ಕೆ ತುಜೇ ಮತ್ತು ಮೇರಾ ನೇನಾ ಸಾವನ್ ಹಾಡು ನೆನಪಾಯಿತು” ಎಂದು ಹೇಳಿದರು.
ಅದನ್ನು ನೋಡಿದ ಸುದೀಪ್ ತನ್ನ ಹಳೆಯ ದಿನಗಳನ್ನು ನೆನೆದು ಸುಮಲತಾ ಅವರಿಗೆ ಥ್ಯಾಂಕ್ಸ್ ಹೇಳಿದರು.
“ಅಕ್ಕಾ ನೀವು ನನ್ನ ಬೆಳವಣಿಗೆಯನ್ನು ನೋಡಿದವರು. ಆ ದಿನಗಳು ನಾನು ಯಾವತ್ತೂ ಮರೆಯಲಾಗದ ದಿನಗಳು. ಆ ದಿನಗಳನ್ನು ಯಾವತ್ತೂ ಜೋಪಾನವಾಗಿಡುತ್ತೇನೆ. ಆಗ ಅಲ್ಲಿ ಇದ್ದ ದೊಡ್ಡವರ ಮಧ್ಯೆ ನಾನೂ ಕಂಫರ್ಟೆಬಲ್ ಆಗಿ ಇರುವ ಹಾಗೆ ನೋಡಿಕೊಂಡಿದ್ದಕ್ಕೆ ಥ್ಯಾಂಕ್ಸ್.”
ಅದಕ್ಕೆ ಸುಮಲತಾ ಅಲ್ಲಿ ಇದ್ದುದೆಲ್ಲಾ ಕುಟುಂಬದವರೇ. ತುಂಬಾ ಜನಕ್ಕೆ ಅಂಬರೀಶ್ ಮತ್ತು ನಿನ್ನ ತಂದೆಯವರ ಮಧ್ಯದ ಫ್ರೆಂಡ್ ಶಿಪ್ ಬಗ್ಗೆ ಗೊತ್ತಿಲ್ಲ. ತುಂಬಾ ಚೆನ್ನಾಗಿ ಹಾಡಿದ್ದೆ ಎಂದು ಬರೆದಿದ್ದಾರೆ.
ಈ ಇಬ್ಬರ ಮಾತುಕತೆ ನೋಡಿ ಅಭಿಮಾನಿಗಳೆಲ್ಲಾ ಖುಷಿಯಾಗಿದ್ದಾರೆ. ಚಿತ್ರರಂಗದ ಇಬ್ಬರು ಖುಷಿಯಿಂದ ಆಪ್ತವಾಗಿ ಮಾತನಾಡಿದರೆ ಎಲ್ಲರಿಗೂ ಖುಷಿಯಾಗುತ್ತದೆ. ಯಾಕೆಂದರೆ ಅಭಿಮಾನಿಗಳು ಅವರನ್ನು ತಮ್ಮ ಮನೆಯವರು ಅಂತಲೇ ಅಂದುಕೊಂಡಿರುತ್ತಾರೆ.
-Ad-

Leave Your Comments