ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಸ್ಯಾಂಡಲ್ ವುಡ್ ನ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ 10 ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿರುವುದು ವಿಶೇಷ.

ರಾಜೇಶ್ ಗೌಡ ಅವರ ಸಾರಥ್ಯದಲ್ಲಿ ಇಷ್ಟು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ನಟಿಸಲಿದ್ದು, ಇವರೊಂದಿಗೆ ಬಾಲಿವುಡ್ ನ ಹಾಸ್ಯ ನಟ ಜಾನಿ ಲಿವರ್, ಸ್ಯಾಂಡಲ್ ವುಡ್ ನ ಹಾಸ್ಯ ನಟ ಸಾಧುಕೋಕಿಲ ಸೇರಿದಂತೆ ಅನೇಕ ಹೆಸರಾಂತ ನಟರು ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ನಟಿಸುವ ಮೂಲಕ ಸುನೀಲ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಜೇಶ್‌ ಗೌಡ, ಈ ಸಿನಿಮಾ ಫನ್‌ ಲವ್‌ ಸ್ಟೋರಿ ಕುರಿತಾಗಿದ್ದು, ಚಿತ್ರದ ಟೈಟಲ್‌ ಇನ್ನು ಫಿಕ್ಸ್‌ ಆಗಿಲ್ಲ. ಈ ಚಿತ್ರದಲ್ಲಿ ಸ್ಟೈಲಿಶ್‌ ಲುಕ್‌ ನಲ್ಲಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ. ಚಿತ್ರದ ನಾಯಕಿಗೆ ಹುಡುಕಾಟ ನಡೆದಿದ್ದು. ಸಾಧು ಕೋಕಿಲಾ, ವಿವೇಕ್‌ ಹಾಗೂ ಜಾನಿ ಲಿವರ್‌ ಹಾಸ್ಯ ನಟರಾಗಿ ಕಾಣಿಸಿಕೊಳ್ಳುವುದು ಖಚಿತವಂತೆ.

-Ad-

Leave Your Comments