ಸುನಿಲ್ ಕುಮಾರ್ ದೇಸಾಯಿ ಹೊಸ ಸಿನಿಮಾದ ಫಸ್ಟ್ ಲುಕ್ ನೋಡಿದ್ರಾ?

ಒಂದು ಕಾಲದಲ್ಲಿ ಸುನೀಲ್ ಕುಮಾರ್ ದೇಸಾಯಿ ಸೂಪರ್ ಸ್ಟಾರ್. ಅವರ ನಿರ್ದೇಶನದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಅವರ ಸಿನಿಮಾಗಳು ಅಂದರೆ ಸಾಕು ಕನ್ನಡ ಸಿನಿಮಾ ಪ್ರೇಕ್ಷಕ ಅಲರ್ಟ್ ಆಗುತ್ತಿದ್ದ. ಅಂಥಾ ನಿರ್ದೇಶಕ ಇವರು. ಮರ್ಮ, ತರ್ಕ, ನಿಷ್ಕರ್ಷ, ನಮ್ಮೂರ ಮಂದಾರ ಹೂವೇ, ಬೆಳದಿಂಗಳ ಬಾಲೆ ಹೀಗೆ ಅವರ ಅನೇಕ ಸಿನಿಮಾಗಳು ಇವತ್ತಿಗೂ ಫ್ರೆಶ್ ಆ್ಯಂಡ್ ಇಂಟರೆಸ್ಟಿಂಗ್.

ಅಂಥಾ ದೇಸಾಯಿ ಇತ್ತೀಚಿನ ದಿನಗಳಲ್ಲಿ ಮರೆಯಾಗಿಬಿಟ್ಟಿದ್ದರು. ಸಿನಿಮಾ ನಿರ್ದೇಶನವನ್ನೇ ಬಿಟ್ಟು ಪಕ್ಕಕ್ಕೆ ಸರಿದಿದ್ದರು. ಆದರೆ ಅವರ ಅಭಿಮಾನಿಗಳು ಮಾತ್ರ ಸುಮ್ಮನಿರಲಿಲ್ಲ. ಆಗಾಗ ಸಿನಿಮಾ ಮಾಡಿ ಅಂತ ಕೇಳುತ್ತಲೇ ಇದ್ದರು. ಅಂಥಾ ದೇಸಾಯಿ ಈಗ ಮತ್ತೆ ಬಂದಿದ್ದಾರೆ. ಐಯಾಮ್ ಬ್ಯಾಕ್ ಅಂತಲೇ ಹೇಳಿಕೊಂಡಿರುವ ದೇಸಾಯಿಯವರ ಹೊಸ ಸಿನಿಮಾದ ಹೆಸರು ಉದ್ಘರ್ಷ.

ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಆಸಕ್ತಿ ಕೆರಳಿಸುವಂತಿದೆ. ಒಬ್ಬ ನಿಗೂಢ ಮಾನವನ ಎದುರಿಗೆ ಒಬ್ಬ ಸ್ತ್ರೀ ಮಲಗಿದಂತಿರುವ ಈ ಫಸ್ಟ್ ಲುಕ್ ಆಸಕ್ತಿಕರವಾಗಿದೆ. ಇದರ ಟ್ಯಾಗ್‌ಲೈನ್ ಬ್ಯಾಟಲ್ ಅಟ್ ಇಟ್ಸ್ ಪೀಕ್ ಅಂತ. ಅದು ಕೂಡ ಮತ್ತಿನ್ನೇನೋ ಕತೆ ಹೇಳುವಂತಿದೆ. ಒಟ್ಟಾರೆ ಸುನೀಲ್ ಕುಮಾರ್ ದೇಸಾಯಿ ಒಂದು ಅದ್ಭುತ ಕತೆಯೊಂದಿಗೆ ವಾಪಸ್ ಬಂದಂತೆ ಇದೆ. ಅಂದಹಾಗೆ ಈ ಸಿನಿಮಾವನ್ನು ಅವರು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಮಾಡುತ್ತಿದ್ದಾರೆ.

-Ad-

Leave Your Comments