ತಾಯಿಯಾದಳು ಸನ್ನಿ ಲಿಯೋನ್…!

ಚಿಕ್ಕ ವಯಸ್ಸಿನಲ್ಲೇ ನೀಲಿಚಿತ್ರಗಳಲ್ಲಿ ಕಾಣಿಸಿಕೊಂಡು ಮೂಲಕ ವೃತ್ತಿಜೀವನ ಆರಂಭಿಸಿ, ಈಗ ಬಾಲಿವುಡ್ ನೆಲೆ ಕಂಡುಕೊಳ್ಳುತ್ತಿರುವ ಸನ್ನಿ ಲಿಯೋನ್ ಈಗ ಅಮ್ಮನಾಗುವ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ.

ಹೌದು, ನ್ನಿ ಲಿಯೋನ್ ಈಗ ತಮ್ಮ ಜೀವನದಲ್ಲಿ ತಾಯಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಹಾಗೆಂದು ಸನ್ನಿ ಮಗುವನ್ನೇನು ಹೆರುತ್ತಿಲ್ಲ. ಬದಲಿಗೆ ಸನ್ನಿ ಹಾಗು ಡೇನಿಯಲ್ ವೆಬರ್ ದಂಪತಿಯು ಮಗುವನ್ನು ದತ್ತು ಪಡೆದಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ನ 21 ತಿಂಗಳ ನಿಶಾ ಎಂಬ ಹೆಣ್ಣು ಮಗುವನ್ನು ಈ ದಂಪತಿ ದತ್ತು ಪಡೆದಿದ್ದಾರೆ. ಮೊದಲ ಬಾರಿಗೆ ಮಗುವಿನ ಫೋಟೋ ನೋಡುತ್ತಿದ್ದಂತೆ ಸನ್ನಿ ದಂಪತಿಗಳಿಗೆ ಈ ಮಗುವನ್ನು ದತ್ತು ಪಡೆಯುವ ಮನಸ್ಸಾಗಿದೆ. ಆ ರೀತಿ ಅನ್ನಿಸಿದ್ದೇ ತಡ ಮೂರೇ ವಾರಗಳಲ್ಲಿ ಕಾನೂನು ಪ್ರಕ್ರಿಯೆಗಳನ್ನೂ ಮುಗಿಸಿ ಮಗುವನ್ನು ದತ್ತು ಪಡೆದಿದೆ.

-Ad-

Leave Your Comments