ಸನ್ನಿ ನೈಟ್ ಗೆ ಅನುಮತಿಯಿಲ್ಲ.. ಕೋರ್ಟ್ ನತ್ತ ಚಿತ್ತ..! 

ಬೆಂಗಳೂರಿನಲ್ಲಿ ಸನ್ನಿ ನೈಟ್ ಕಾರ್ಯಕ್ರಮ ಆಯೋಜನೆಗೆ ನಗರ ಪೊಲೀಸರು ಮತ್ತೆ ಅನುಮತಿ ನಿರಾಕರಣೆ ಮಾಡಿದ್ದಾರೆ. ಡಿಸೆಂಬರ್ 31ರ ರಾತ್ರಿ ನಡೆಯಬೇಕಿದ್ದ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಮತ್ತೆ ಅನಿಶ್ಚಿತತೆ ಕಾಡಲು ಶುರುವಾಗಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕಾರ್ಯಕ್ರಮ ನಡೆಸಲು ಟೈಮ್ಸ್ ಕ್ರಿಯೇಷನ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದ್ರೆ ಅನುಮತಿ ಕೊಡಲ್ಲ ಎಂದು ಗೃಹ ಸಚಿವರು ಹಾಗೂ ಪೊಲೀಸ್ ಆಯುಕ್ತರು ಹೇಳಿದ್ರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಆಯೋಜಕರು ಮತ್ತೊಮ್ಮೆ ಮನವಿ ಸಲ್ಲಿಸಲು ಸೂಚನೆ ಪಡೆದಿದ್ರು.. ಅದರಂತೆ ಆಯುಕ್ತರಿಗೆ ಮತ್ತೆ ಕಾರ್ಯಕ್ರಮದ ವಿವರದ ಜೊತೆಗೆ ಅವಕಾಶ ಕೋರಲಾಗಿತ್ತು. ಇದೀಗ ಡಿಸಿಪಿ ಗಿರೀಶ್ ಅನುಮತಿ‌ ನಿರಾಕರಣೆಯನ್ನು ಸ್ಪಷ್ಟಪಡಿಸಿದ್ದಾರೆ
ಸನ್ನಿ ಬರೋದು ಬೇಡ ಅಂದಿದ್ದೇಕೆ ಗೊತ್ತಾ..?
ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಅನುಮತಿ‌ ನಿರಾಕರಿಸಿದ್ದಕ್ಕೆ ನಾಲ್ಕು ಕಾರಣಗಳನ್ನ ನೀಡಿದ್ದಾರೆ.
1. ಸ್ಥಳೀಯ ಪ್ರಾಧಿಕಾರಗಳಿಂದ ಹಾಗೂ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದಿಲ್ಲ
2. ಸನ್ನಿ ನೈಟ್ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಆಯೋಜಕರು ಸ್ಪಷ್ಟ ವಿವರಣೆ ನೀಡಿಲ್ಲ
3. ಹೊಸ ವರ್ಷದ ಹಿನ್ನೆಲೆ ಡಿಸೆಂಬರ್ 31 ರಂದು ನಗರಾದ್ಯಂತ ಬಂದೋಬಸ್ತ್ ಅವಶ್ಯಕತೆ ಇರಲಿದ್ದು ಬಂದೋಬಸ್ತ್ ಕಷ್ಟ
4. ಆಯೋಜಕರು ಎಂಟು ಸಾವಿರ ಟಿಕೆಟ್ ಕೊಡುವುದಾಗಿ ಹೇಳಿದ್ದು ಅದಕ್ಕಿಂತಲೂ ಹೆಚ್ಚು ಜನ ಸೇರುವ ಮಾಹಿತಿ ಗುಪ್ತಚರ ಇಲಾಖೆ ನೀಡಿದೆ
ಹೈಕೋರ್ಟ್ ನತ್ತ ಮತ್ತೆ ಆಯೋಜಕರ ಚಿತ್ತ..! 
ನಮ್ಮ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಅಂತ ಹೈಕೋರ್ಟಿನ ಮೊರೆ ಹೋಗಿದ್ದ ಆಯೋಜಕರಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದ, ಹೈಕೋರ್ಟ್ ಅನುಮತಿ ಅರ್ಜಿ ಪರಿಶೀಲನೆ ಮಾಡುವಂತೆ ಸೂಚನೆ ಕೊಡುವ ಜೊತೆಗೆ ಒಂದು ವೇಳೆ ಅನುಮತಿ ನಿರಾಕರಿಸಿದರೆ ಮತ್ತೆ ಅರ್ಜಿ ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು. ಇದೀಗ ಮತ್ತೆ ಪೊಲೀಸರು ಅನುಮತಿ ನಿರಾಕರಿಸಿರೋದ್ರಿಂದ ಹೈಕೋರ್ಟ್ ಮೊರೆ ಬಿಟ್ಟು ಆಯೋಜಕರಿಗೆ ಬೇರೆ ದಾರಿ ಉಳಿದಿಲ್ಲ.
ಪೊಲೀಸರಿಗೆ ಈ ವಿಷಯ ಅರ್ಥ ಆಗ್ತಿಲ್ವಾ..?
1. ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಅವಶ್ಯಕತೆ ಬೇಕಾಗಿಲ್ಲ
2. ಮಾನ್ಯತಾ ಟೆಕ್ ಪಾರ್ಕಲ್ಲಿ ಸಾಕಷ್ಟು ಭದ್ರತೆ ಇರೋದ್ರಿಂದ ಸಮಸ್ಯೆ ಕಡಿಮೆ.
3. ದೇಶಾದ್ಯಂತ ಬೆಂಗಳೂರು ಪೊಲೀಸರ ಮಾನ ಹರಾಜಾಗುತ್ತಿರೋದು ಕಾಣ್ತಿಲ್ವಾ..?
4. ಕೇರಳದ ಘಟನೆಗೂ ಬೆಂಗಳೂರು ಕಾರ್ಯಕ್ರಮಕ್ಕೂ ವ್ಯತ್ಯಾಸ ಗೊತ್ತಿಲ್ವಾ..?
5. ಹೈಕೋರ್ಟ್ ಛೀಮಾರಿ ಹಾಕಿದರೂ ಸಣ್ಣಪುಟ್ಟ ಕಾರಣ ನೀಡ್ತಿರೋದು ಎಷ್ಟು ಸರಿ..?
ನಾಳೆ ಹೈಕೋರ್ಟ್ ನಲ್ಲಿ ಆಯೋಜಕರು ಇಷ್ಟೆಲ್ಲಾ ಅಂಶಗಳ ಮೇಲೆ ವಾದ ಮಂಡಿಸುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ಸಿಗದಿದ್ರೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಲಿದ್ದೆ. ಸಾಕಷ್ಟು ಮಂದಿ ಟಿಕೆಟ್ ಖರೀದಿ ಮಾಡಿರೋದ್ರಿಂದ ಹಣ ವಾಪಸ್ ಬಾರದೆ ಗ್ರಾಹಕರಿಗೂ ನಷ್ಟವಾಗಿ ಕಾನೂನು ಸಮರ ನಡೆಯೋದು ಸ್ಪಷ್ಟವಾಗಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments