ಸಾವಿನ ದವಡೆಯಿಂದ ಸನ್ನಿ ಲಿಯೋನ್ ಪಾರಾಗಿದ್ದು ಹೇಗೆ ?

ಸನ್ನಿ ಲಿಯೋನ್ ಗೆ  ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.  ಹಾಟ್ ಹಾಟ್ ಫಿಗರ್ ನೋಡು ಗುರು.. ಅನ್ನುವ ಮೂಲಕ ಆಕೆಯ ದೇಹ ಸೌಂದರ್ಯವನ್ನು ಆಸ್ವಾದಿಸದೆ ಇರುವ ಪಡ್ಡೆ ಹೈಕಳು ಸಿಗೋದು ಕಷ್ಟ. ವಯಸ್ಕರು, ವೃದ್ಧರೂ ಕೂಡ ಆಕೆಯ ಹಸಿಬಿಸಿ ದೇಹವನ್ನು ಕಣ್ತುಂಬಿಕೊಳ್ಳುತ್ತಾರೆ. ನೋಡುಗರ ಎದೆ ಬಡಿತ ಹೆಚ್ಚಿಸುವ ಸನ್ನಿಯ ಹಾರ್ಟ್ ಢವ ಢವಗುಟ್ಟುವ ಘಟನೆ ನಡೆದಿದೆ . ಇವತ್ತು ಸನ್ನಿ ಲಿಯೋನ್ ಹಾಗೂ ಆಕೆಯ ಗಂಡ ಸಾವಿನಿಂದ ಪಾರಾಗಿದ್ದಾರೆ. ಇದನ್ನು ಸ್ವತಃ ಸನ್ನಿ ಕೋಟ್ಯಂತರ ಅಭಿಮಾನಿಗಳಿಗೆ ಟ್ವೀಟ್ಟರ್ ಮೂಲಕ ತಿಳಿಸಿದ್ದಾಳೆ. ಫ್ಲೈಟ್‌ನಲ್ಲಿ ತೆರಳುವಾಗ ಏಕಾಏಕಿ ಆದಂತಹ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ಕೆಲಸ ಮಾಡಿದ್ದು, ಆ ಸಂಧರ್ಭದಲ್ಲಿ ಘಟನೆ ಬಗ್ಗೆ ಸೆರೆಯಿಡಿಯಲಾದ ದೃಶ್ಯವನ್ನು ಶೇರ್ ಮಾಡಿದ್ದಾರೆ..

ಖಾಸಗಿ  ವಿಮಾನ ಸನ್ನಿ ಪ್ರಾಣಕ್ಕೆ ತಂದಿತ್ತು ಕುತ್ತು..!

ಇಂದು ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಸನ್ನಿ ಲಿಯೋನ್ ಹಾಗೂ ಆಕೆಯ ಗಂಡ ಡೇನಿಯಲ್ ಅಂಡ್ ಟೀಂ ವಿಮಾನದಲ್ಲಿ ಸಂಚಾರ ಮಾಡ್ತಿದ್ದಾಗ.. ಇದ್ದಕ್ಕಿದ್ದ ಹಾಗೆ ಹವಾಮಾನ ವೈಪರೀತ್ಯದಿಂದ ವಿಮಾನ ಸಂಕಷ್ಟಕ್ಕೆ ಸಿಲುಕಿದೆ. ಈ ವೇಳೆ ಧೈರ್ಯ ತಂದುಕೊಂಡ ವಿಮಾನದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೀಡಿಯೋವನ್ನು ವಿಮಾನ ಲ್ಯಾಂಡ್ ಆದ ಬಳಿಕ ಚಿತ್ರೀಕರಣ ಮಾಡಲಾಗಿದ್ದು, ಗಂಡ ಡೇನಿಯಲ್ ವೆಬರ್ ಸೇರಿದಂತೆ ಎಲ್ಲರೂ ಗಾಬರಿಯಾಗಿದ್ದರಂತೆ. ಅವರನ್ನು ಚಿಯರ್ ಅಪ್ ಮಾಡಲು ಈ ವೀಡಿಯೋ ಮಾಡಿದ್ದು, ನಾವು ಬದುಕಿದ್ದೇವೆ. ಈ ರೀತಿಯ ಸಂಕಷ್ಟದಿಂದ ಪಾರಾಗಿ ಬಂದಿದ್ದೇವೆ ಅಂತಾ ಕಾರಿನಲ್ಲಿ ಪ್ರಯಾಣಿಸುವಾಗ ಹೇಳಿಕೊಂಡಿದ್ದಾರೆ..

ಸನ್ನಿ ಕೂಡ ಈ ಬಗ್ಗೆ ಮಾತನಾಡಿದ್ದು ಆ ಕ್ಷಣಗಳನ್ನು ನೆನಪು ಮಾಡಿಕೊಂಡರೆ ಎದೆ ಝಲ್ ಎನ್ನುತ್ತೆ.. ನಮ್ಮೆಲ್ಲರ ಜೀವ ಉಳಿಸುವ ಜವಾಬ್ದಾರಿ  ನಮ್ಮ ಖಾಸಗಿ ವಿಮಾನದ ಪೈಲಟ್ ಕೈಯ್ಯಲ್ಲಿತ್ತು. ನಾವು ಜೀವ ಹಿಡಿದು ಕಿರುಚಾಡುತ್ತಿದ್ದೆವು. ದೇವರ ದಯೆ ನಾವು ಅಪಾಯದಿಂದ ಪಾರಾಗಿ ಬರುವ ಹಾಗೆ ಆಯಿತು. ನಾನೊಂದು ಒಳ್ಳೆಯ ಉದ್ದೇಶಕ್ಕಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿ ಬರುವಾಗ ಈ ಘಟನೆ ನಡೆದಿದೆ ಅಂತಾ ಟ್ವೀಟಿಸಿದ್ದಾರೆ.. ಅದೇನೇ ಆಗಲಿ ಬಾಲಿವುಡ್‌ನ ಹಾಟ್ ಹಾಟ್ ಐಟಮ್ ಗರ್ಲ್ ಸನ್ನಿ ಲಿಯೋನ್ ಸಾವಿನಿಂದ ಪಾರಾಗಿದ್ದಾರೆ. ಅಭಿಮಾನಿಗಳು ಆರಾಮವಾಗಿ ಉಸಿರಾಡಲು ಯಾವುದೇ ಅಡ್ಡಿಯಿಲ್ಲ.

ಜ್ಯೋತಿ ಎಂ ಗೌಡ, ನಾಗಮಂಗಲ

-Ad-

Leave Your Comments